ಮುಂಬೈ:ನಾಳೆ (ಆಗಸ್ಟ್​ 12) ರಕ್ಷಾ ಬಂಧನ. ಸಹೋದರ- ಸಹೋದರಿಯ ಪ್ರೀತಿಯ ಮಹತ್ವ ಸಾರುವ ಈ ಹಬ್ಬಕ್ಕೆ ಸಹೋದರ- ಸಹೋದರಿಯರು ಕಾತರದಿಂದ ಕಾಯುತ್ತಿದ್ದಾರೆ. ಬಗೆಬಗೆಯ ರಕ್ಷಾ ಬಂಧನವನ್ನು ಅಕ್ಕ-ತಂಗಿಯರು ಸಿದ್ಧಪಡಿಸಿಕೊಂಡು ಸಹೋದರನಿಗೆ ಕಟ್ಟಲು ರೆಡಿ ಆಗುತ್ತಿದ್ದಾರೆ. ಹಲವರು ಸಹೋದರ- ಸಹೋದರಿಯ ಜತೆಗಿನ ಬಾಲ್ಯದ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದಾರೆ.
ಅದೇ ಇನ್ನೊಂದೆಡೆ ಸಿನಿ ತಾರೆಯರು ಕೂಡ ತಮ್ಮಬಾಲ್ಯದ ಫೋಟೋಗಳನ್ನು ಶೇರ್​ ಮಾಡಿಕೊಳ್ಳುತ್ತಿದ್ದು, ಇದೀಗ ಬಾಲಿವುಡ್​ನ ಖ್ಯಾತ ನಟಿಯೊಬ್ಬಳ ಫೋಟೋ ಭಾರಿ ವೈರಲ್​ ಆಗಿದೆ. ಅಣ್ಣನ ಜತೆಗಿರುವ ಬಾಲ್ಯದ ಫೋಟೋ ಶೇರ್​ ಮಾಡಿಕೊಂಡಿದ್ದಾರೆ ಈ ನಟಿ.
ನಿರ್ದೇಶಕ ಮತ್ತು ನಿರ್ಮಾಪಕನೂ ಆಗಿರುವ ತಮ್ಮದೇ ಆದ ಪ್ರೊಡಕ್ಷನ್ ಹೌಸ್ ಹೊಂದಿರುವ ಅಣ್ಣ ಕರ್ಣೇಶ್​ ಶರ್ಮಾ ಅವರ ಜತೆಗಿರುವ ಈ ನಟಿ ಯಾರೆಂದು ಊಹಿಸಬಲ್ಲಿರಾ? ಈಕೆ ಅನುಷ್ಕಾ ಶರ್ಮಾ.

2007ರ ಲಾಕ್ಮೆ ಫ್ಯಾಷನ್ ವೀಕ್​ನಲ್ಲಿ ಗಮನ ಸೆಳೆದ ಅನುಷ್ಕಾ, ಯಶ್ ಛೋಪ್ರಾ ನಿರ್ಮಾಣದ ರಬ್ ನೇ ಬನಾದಿ ಜೋಡಿ ಚಿತ್ರದಲ್ಲಿ ಶಾರೂಖ್ ಖಾನ್ ಜೊತೆ ನಟಿಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದರು. ಬದ್ಮಾಷ್ ಕಂಪೆನಿ, ಬಾಂಡ್ ಬಾಜಾ ಬಾರಾತ್, ಪಟಿಯಾಲಾ ಹೌಸ್, ಲೇಡೀಸ್ ವೆಸಸ್ ರಿಕ್ಕಿ ಬೆಹಲ್, ಹೀಗೆ ಹಲವು ಚಿತ್ರಗಳಲ್ಲಿ ಯಶ ಕಂಡಿರುವ ಅನುಷ್ಕಾ, ನವದೀಪ್ ಸಿಂಗ್ ನಿರ್ದೇಶನದ “ಎನ್. ಹೆಚ್. 10” ಚಿತ್ರ ನಿರ್ಮಿಸಿದ್ದಾರೆ.
ಅಂದಹಾಗೆ, ಕರ್ಣೇಶ್ ಅವರು ಅನುಷ್ಕಾ ಅವರೊಂದಿಗೆ NH 10, ಪರಿ, ಫಿಲ್ಲೌರಿ, ಬುಲ್‌ಬುಲ್‌ನಂತಹ ಚಲನಚಿತ್ರಗಳು ಮತ್ತು ವೆಬ್‌ಸರಣಿಗಳನ್ನು ನಿರ್ಮಿಸಿದ್ದಾರೆ.(ಏಜೆನ್ಸೀಸ್​)
ಆತ ಮಧ್ಯರಾತ್ರಿ ಕರೆದಾಗ ಹೋದ್ರೆ ಸಿನಿಮಾದಲ್ಲಿ ಛಾನ್ಸ್​, ಇಲ್ಲದಿದ್ರೆ ಔಟ್​: ಕರಾಳ ಸತ್ಯ ಬಿಚ್ಚಿಟ್ಟ ನಟಿ ಮಲ್ಲಿಕಾ

ಡೆಂಘೆಯಿಂದ ಬೆಳಲಿ ಬೆಂಡಾದರೂ ಕ್ಯಾರೇ ಎನ್ನದ ‘ಇಂದಿರಾ ಗಾಂಧಿ’! ದೇಹಕ್ಕಷ್ಟೇ ಅನಾರೋಗ್ಯ ಎಂದ ನಟಿ

ದೇಹದ ಇಂಚಿಂಚೂ ಬಿಡದೇ ಟ್ಯಾಟೂ ಹಾಕಿಸಿಕೊಂಡ ನಟಿ! ಖಾಸಗಿ ಅಂಗಗಳ ನೋವು ಬಿಚ್ಚಿಟ್ಟಿದ್ದು ಹೀಗೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nine + 6 =
Remember me
