ಕೋಲ್ಕತಾ:‘ಇತರರಿಗಾಗಿ ಹಳ್ಳವನ್ನು ಅಗೆಯುವವನು ಸ್ವತಃ ಹಳ್ಳಕ್ಕೆ ಬೀಳುತ್ತಾನೆ’ ಎಂಬ ಮಾತು ಇದೆ. ಅದೇ ರೀತಿಯ ಘಟನೆಯೊಂದು ಕೋಲ್ಕತಾದಲ್ಲಿ ನಡೆದಿದೆ.
ಮಗನ ಮೇಲೆ ಕುಪಿತಗೊಂಡ 65 ವರ್ಷದ ಕುಡುಕ ಅಪ್ಪನೊಬ್ಬ ತನ್ನ ಸ್ವಂತ ಮಗನ ಮೇಲೆ ಕಚ್ಚಾ ಬಾಂಬ್ ಎಸೆಯಲು ಹೋಗಿ ತಾನೇ ಸ್ಫೋಟಿಸಿಕೊಂಡಿರುವ ಘಟನೆ ನಡೆದಿದೆ. ಉತ್ತರ ಕೊಲ್ಕತ್ತಾದ ಕಾಶಿಪುರ ರಸ್ತೆಯಲ್ಲಿ ಶುಕ್ರವಾರ ಮಧ್ಯಾಹ್ನ 3.30 ರ ಸುಮಾರಿಗೆ ಈ ಘಟನೆ ಸಂಭವಿಸಿದೆ.
ಘಟನೆಯಲ್ಲಿ  ಮಗನಿಗೆ ಗಾಯಗಳಾಗಿದ್ದರೆ, ಸ್ಫೋಟಕ್ಕೆ ಬಾಂಬ್​ ಹಾಕಿದ ಅಪ್ಪ ಬಲಿಯಾಗಿದ್ದಾನೆ. ಶೇಖ್ ಮಾಟ್ಲಾಬ್ ಎಂದು ಗುರುತಿಸಲ್ಪಟ್ಟ ವ್ಯಕ್ತಿಯೊಬ್ಬ ಇಂಥದ್ದೊಂದು ದುಷ್ಕೃತ್ಯ ಮಾಡಿದ್ದಾನೆ. ಮಗ ಶೇಖ್ ನಜೀರ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕಂಠಪೂರ್ತಿ ಕುಡಿದಿದ್ದ ಶೇಖ್​ ತನ್ನ ಮಗನ ಜತೆ ಜಗಳವಾಡಿದ್ದಾನೆ. ಕುಡಿದು ಬಂದಿರುವ ಬಗ್ಗೆ ಪ್ರಶ್ನಿಸಿದ್ದಕ್ಕೆ ಈ ರೀತಿ ಮಾಡಿದ್ದಾನೆ.
ಜಗಳ ವಿಕೋಪಕ್ಕೆ ಹೋದಾಗ ತನ್ನ ಬಳಿ ಇದ್ದ ಕಚ್ಚಾ ಬಾಂಬ್​ ಅನ್ನು ಮಗನ ಮೇಲೆ ಎಸೆದಿದ್ದಾನೆ. ಆದರೆ ಅದು ಎಸೆದ ರಭಸಕ್ಕೆ ಕೆಳಕ್ಕೆ ಬಿದ್ದು ಸ್ಫೋಟಗೊಂಡಿತು. ಆದ್ದರಿಂದ ಅಪ್ಪ ಮೃತಪಟ್ಟರೆ, ಮಗನಿಗೆ ಗಾಯಗಳಾಗಿವೆ. ಬಾಂಬ್​ ಸ್ಫೋಟದ ಶಬ್ದ ಕೇಳುತ್ತಿದ್ದಂತೆಯೇ ಸುತ್ತಲಿನವರು ಬಂದು ಇಬ್ಬರನ್ನೂ ಆಸ್ಪತ್ರೆಗೆ ಸೇರಿಸಿದ್ದಾರೆ.
ಈತನ ಬಳಿ ಬಾಂಬ್​ ಹೇಗೆ ಬಂತು ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಮೈಮೇಲೆ ಕೂದಲು ಹೆಚ್ಚಿಗೆ ಇದ್ದರೆ, ಋತುಸ್ರಾವ ಏರುಪೇರಾದರೆ ಮಕ್ಕಳಾಗುವುದಿಲ್ಲವೆ?

ಉಪ್ಪಿಟ್ಟಿನ ವಿರುದ್ಧ ಎಡವಟ್ಟು ಪ್ರಶ್ನೆ ಕೇಳಿ ಸಿಕ್ಕಿಹಾಕಿಕೊಂಡ ಸ್ವಿಗ್ಗಿ: ಉಪಮಾಪ್ರಿಯರಿಂದ ಬೈಕಾಟ್​!

ರೈಲಿನಿಂದ ಆಯತಪ್ಪಿ ಬಿದ್ದು ಸಾವಿನ ಬಾಯಲ್ಲಿದ್ದ ವೃದ್ಧನ ಜೀವ ಕಾಪಾಡಿದ ಪೊಲೀಸರು- ಸಿಸಿಟಿವಿಯಲ್ಲಿ ಸೆರೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + twenty =
Remember me
