ಕೋಲ್ಕತಾ:ಕಳೆದ ವಾರವಷ್ಟೇ ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಬಿಜೆಪಿ ಸಂಸದ ಅರ್ಜುನ್ ಸಿಂಗ್ ಅವರ ಮನೆಯ ಮುಂದೆ ಮೂರು ಕಚ್ಚಾ ಬಾಂಬ್‌ ದಾಳಿ ನಡೆದಿತ್ತು. ಬೈಕ್‌ನಲ್ಲಿ ಬಂದ ಮೂವರು ವ್ಯಕ್ತಿಗಳು ಕೋಲ್ಕತ್ತಾದಿಂದ 100 ಕಿಮೀ ದೂರದಲ್ಲಿರುವ ಜಗತ್ತಾಲ್‌ನಲ್ಲಿರುವ ಸಂಸದರ ಮನೆಯ ಮೇಲೆ ಬಾಂಬ್ ಎಸೆದಿದ್ದರು. ಆ ಸಮಯದಲ್ಲಿ ಸಿಂಗ್‌ ಅವರು ದೆಹಲಿಯಲ್ಲಿದ್ದರು, ಅವರ ಕುಟುಂಬ ಸದಸ್ಯರು ಮನೆಯೊಳಗೆ ಇದ್ದರೂ ಅದೃಷ್ಟವಶಾತ್‌ ಯಾವುದೇ ಅನಾಹುತ ಸಂಭವಿಸಿರಲಿಲ್ಲ.
ಇದರ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಇಂದು ಪುನಃ ಅವರ ಮನೆಯ ಎದುರಿಗೆ ಬಾಂಬ್‌ ಬ್ಲಾಸ್ಟ್‌ ಮಾಡಲಾಗಿದೆ. ಕಳೆದ ಬಾರಿ ನಡೆದ ಬ್ಲಾಸ್ಟ್‌ನ ತನಿಖೆಯನ್ನು ರಾಷ್ಟ್ರೀಯ ತನಿಖಾ ಸಂಸ್ಥೆ ಪೂರ್ಣಗೊಳಿಸುವ ಮುನ್ನವೇ ಈಗ ಪುನಃ ಮೂರು ಕಚ್ಚಾ ಬಾಂಬ್‌ಗಳನ್ನು ಎಸೆಯಲಾಗಿದೆ.
ರಾಜ್ಯ ಪೊಲೀಸರು ಬಾಂಬ್ ತಂಡಕ್ಕೆ ಕರೆ ನೀಡಿದ್ದು, ಬಾಂಬ್ ಸ್ಫೋಟದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಈಗ ಇದು ರಾಜಕೀಯ ತಿರುವು ಪಡೆದುಕೊಂಡಿದ್ದು, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಗುರಿಯಾಗಿಸಿಕೊಂಡು ಆಡತಾರೂಢ ತೃಣಮೂಲ ಕಾಂಗ್ರೆಸ್ಸೇ ಇಂಥ ಗೂಂಡಾಗಳಿಗೆ ಆಶ್ರಯ ನೀಡಿದೆ ಎಂಬ ಆರೋಪ ಕೇಳಿಬಂದಿದೆ.
ಅರ್ಜುನ್ ಸಿಂಗ್ ಅವರು ಬಿಜೆಪಿಗೆ ಸೇರುವ ಮುನ್ನ ತೃಣಮೂಲ ಕಾಂಗ್ರೆಸ್ ಜತೆಗಿದ್ದರು. ಈಗ ಅದೇ ಪಕ್ಷದ ಯಾರೋ ತಮ್ಮನ್ನು ಕೊಲೆ ಮಾಡಲು ಸಂಚುರೂಪಿಸುತ್ತಿರುವುದಾಗಿ ಸಿಂಗ್‌ ಆರೋಪಿಸಿದ್ದಾರೆ. ತಮ್ಮ ಪಕ್ಷದಲ್ಲಿ ಅಂಥವರು ಯಾರೂ ಇಲ್ಲ ಎಂದು ತೃಣಮೂಲ ಕಾಂಗ್ರೆಸ್‌ ಹೇಳಿದೆ.
ಅವರು ಕೊಟ್ಟ ನೀರು ಕುಡಿದೆ… ಎಚ್ಚರವಾದಾಗ ವಿಡಿಯೋ ತೋರಿಸಿದರು- ರೇಪ್‌ ಕೇಸ್‌ನಲ್ಲಿ ಸಂಸದ: ಎಫ್‌ಐಆರ್‌

ಹತ್ತು ದಿನಗಳಲ್ಲಿ ಈ 13 ಚಿತ್ರ ನೋಡಿದರೆ ನಿಮಗೆ ಸಿಗುತ್ತೆ 96 ಸಾವಿರ ರೂ! ಧೈರ್ಯ ಇದೆಯಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven + 5 =
Remember me
