ನವದೆಹಲಿ:ಸ್ವಾತಂತ್ರ್ಯ ದಿನಾಚರಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಎಲ್ಲಿಲ್ಲಿ ಸ್ಫೋಟ ಮಾಡಬೇಕು ಎಂಬ ಬಗ್ಗೆ ಸ್ಕೆಚ್‌ ಹಾಕುತ್ತಿದ್ದ ಶಂಕಿತನೊಬ್ಬ ಇದೀಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಪಶ್ಚಿಮ ದೆಹಲಿಯ ಜಫ್ಫಾರ್​​ಪುರ ಕಲಾನ್ ಪ್ರದೇಶದಲ್ಲಿ ಅಂದಚೆಂದದ ಬಲೂನ್‌ ಹಿಡಿದು ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಸಂದೇಹ ವ್ಯಕ್ತಪಡಿಸಿದ ಪೊಲೀಸರು ಆತನನ್ನು ಹಿಡಿದು ತಪಾಸಣೆ ಮಾಡಿದಾಗ ಬಲೂನ್‌ ಒಳಗೆ ಸ್ಫೋಟಕ ಇರುವುದು ಪತ್ತೆಯಾಗಿದೆ.
ಉತ್ತರ ಪ್ರದೇಶದ ಮಥುರಾ ಜಿಲ್ಲೆಯ ನಿವಾಸಿಯಾದ ಮುಫೀದ್ ಎಂಬ 27 ವರ್ಷ ಈ ವ್ಯಕ್ತಿಯಿಂದ 20 ಅಕ್ರಮ ಶಸ್ತ್ರಾಸ್ತ್ರಗಳನ್ನ ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದೆಹಲಿ ಮತ್ತು ಎನ್‌ಸಿಆರ್ ಪ್ರದೇಶದಲ್ಲಿ ಅಕ್ರಮ ಬಂದೂಕುಗಳನ್ನು ಈತ ಪೂರೈಸುತ್ತಿದ್ದ ಎಂದು ತಿಳಿದುಬಂದಿದೆ.
ಬಲೂನ್ ಮಾರಾಟಗಾರನ ವೇಷದಲ್ಲಿ ಈತ ಸಿಕ್ಕಿಬಿದ್ದಿದ್ದಾನೆ. ಅನುಮಾನಾಸ್ಪದವಾಗಿ ಈತ ಓಡಾಡುತ್ತಿದ್ದ. ಪೊಲೀಸರು ಈತನನ್ನು ಸಂದೇಹಪೂರ್ವಕವಾಗಿ ನೋಡಿದಾಗ ಪರಾರಿಯಾಗಲು ಪ್ರಯತ್ನಿಸಿದನು. ನಂತರ ಬ್ಯಾಗ್​ನಿಂದ ಪಿಸ್ತೂಲ್​​ ಅನ್ನು ಹೊರತೆಗೆದು ಪೊಲೀಸರಿಗೆ ಬೆದರಿಸಲು ಪ್ರಯತ್ನಿಸಿದ್ದಾನೆ. ಉಪ ಪೊಲೀಸ್ ಆಯುಕ್ತ ಸಂತೋಷ್ ಕುಮಾರ್ ಮೀನಾ ಅವರು ವ್ಯಕ್ತಿಯನ್ನು ನಿಯಂತ್ರಿಸಿದ್ದಾರೆ. ಈತ ತನ್ನ ಚೀಲದಲ್ಲಿ 19 ಪಿಸ್ತೂಲ್​​ಗಳನ್ನು ಇಟ್ಟುಕೊಂಡಿದ್ದ. 9 ಬಲೂನ್​ಗಳ ಪಾಕೆಟ್​ಗಳೂ ದೊರೆತಿದ್ದು, ಅದರಲ್ಲಿಯೂ ಸ್ಫೋಟಕ ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ಪ್ರೀತಿಸಿದವನ ಮದ್ವೆಯಾಗಿ ಹೆಣವಾದಳು: ಮೃತದೇಹಕ್ಕಾಗಿ ಐದು ದಿನಗಳಿಂದ ನದಿ ಮುಂದೆ ಹೆತ್ತವರ ಆಕ್ರಂದನ

ತನಿಖೆಗೆ ಕರೆದೊಯ್ಯುವ ನೆಪದಲ್ಲಿ ಪಿಎಸ್‌ಐ ಮೇಲೆ ರೇಪ್‌ಗೆ ಯತ್ನಿಸಿದ ಸಬ್‌ ಇನ್ಸ್‌ಪೆಕ್ಟರ್‌!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
