ಮುಂಬೈ:ಕೇಂದ್ರ ಸಚಿವ ನಾರಾಯಣ ರಾಣೆ ಅವರಿಗೆ ಬಾಂಬೆ ಹೈಕೋರ್ಟ್​ ಬಿಗ್​ ಶಾಕ್​ ನೀಡಿದೆ. ಅವರು ನಿರ್ಮಿಸಿರುವ ಬಂಗಲೆಯನ್ನು ನೆಲಸಮ ಮಾಡುವಂತೆ ಮುಂಬೈ ಮಹಾನಗರ ಪಾಲಿಕೆಗೆ ಕೋರ್ಟ್​ ನಿರ್ದೇಶಿಸಿದೆ.
ಮುಂಬೈನ ಜುಹುದಲ್ಲಿ ಸಚಿವರು ನಿರ್ಮಿಸಿರುವ ಬಂಗಲೆ ಅನಧಿಕೃತವಾಗಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಇವರಿಗೆ ನೋಟಿಸ್​ ಜಾರಿಗೊಳಿಸಿತ್ತು. ಈ ನೋಟಿಸ್​ ಅನ್ನು ಅವರು ಕೋರ್ಟ್​ನಲ್ಲಿ ಪ್ರಶ್ನಿಸಿದ್ದರು. ಆದರೆ ಬಂಗಲೆ ಅನಧಿಕೃತವಾಗಿರುವ ಹಿನ್ನೆಲೆಯಲ್ಲಿ ಯಾವುದೇ ಸಮಜಾಯಿಷಿಯ ಅಗತ್ಯವಿಲ್ಲ ಎಂದ ಹೈಕೋರ್ಟ್​, ಅದನ್ನು ಕೆಡವಲು ನಿರ್ದೇಶಿಸಿದೆ.
ಅಷ್ಟೇ ಅಲ್ಲದೇ, ಅನಧಿಕೃತವಾಗಿ ಬಂಗಲೆ ನಿರ್ಮಿಸಿರುವ ಹಿನ್ನೆಲೆಯಲ್ಲಿ ರಾಣೆ ಅವರಿಗೆ 10 ಲಕ್ಷ ರೂಪಾಯಿ ದಂಡ ವಿಧಿಸಿ ನ್ಯಾಯಮೂರ್ತಿಗಳು ಆದೇಶಿಸಿದ್ದಾರೆ. ನಾರಾಯಣ ರಾಣೆ ಸದ್ಯ ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಖಾತೆ ಸಚಿವರಾಗಿ ಸೇವೆ ಸಲ್ಲಿಸುತ್ತಿದ್ದಾರೆ.(ಏಜೆನ್ಸೀಸ್​)
ಡಿಕೆಶಿಗೆ ಶಾಕ್​ ಮೇಲೆ ಶಾಕ್​! ಇ.ಡಿ ಕಚೇರಿಗೆ ಕಾಲಿಡುತ್ತಲೇ ಸುಪ್ರೀಂನಿಂದ ಮತ್ತೊಂದು ಆಘಾತಕಾರಿ ಆದೇಶ
ಮೋದಿಗೆ ದೀದಿ ಕ್ಲೀನ್​ಚಿಟ್​: ಅವರ ತಪ್ಪೇ ಇಲ್ಲ ಎಂದ ಮಮತಾ ಮಾತಿಗೆ ರಾಜಕೀಯದಲ್ಲಿ ಬಿಸಿಬಿಸಿ ಚರ್ಚೆ!
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:five × 4 =
Remember me
