ಶಿವಪುರಿ (ಮಧ್ಯಪ್ರದೇಶ):ಈ ಬಾಲಕನಿಗೆ ದಿನವೂ ಕನಿಷ್ಠ 40 ಚಪಾತಿಗಳು ಬೇಕು. ಈತನ ವಯಸ್ಸು 12. ಹೀಗೆ ದಿನವೂ ಇಷ್ಟೊಂದು ಚಪಾತಿ ತಿನ್ನುತ್ತಾ ಬಂದಿದ್ದ ಈ ಬಾಲಕ ಈಗ ದೃಷ್ಟಿ ಕಳೆದುಕೊಂಡಿದ್ದು ವೈದ್ಯರೇ ಶಾಕ್‌ ಆಗಿದ್ದಾರೆ.
ಮಧ್ಯ ಪ್ರದೇಶದ ಶಿವಪುರಿ ಜಿಲ್ಲೆಯ ಖೋಡ್​ ಗ್ರಾಮದ ನಿವಾಸಿ ಸಂದೀಪ್​ ಈತನ ಹೆಸರು. ಇಷ್ಟೊಂದು ಚಪಾತಿ ಅವನಿಗೆ ಏಕೆ ಬೇಕು ಎಂದು ಪಾಲಕರಿಗೆ ತಿಳಿಯಲಿಲ್ಲ. ಆದರೆ ಎಷ್ಟು ಕೊಟ್ಟರೂ ಚಪಾತಿ ಈತನಿಗೆ ಸಾಲುತ್ತಿರಲಿಲ್ಲ. ಆದ್ದರಿಂದ ಅವನಿಗೆ ಅಗತ್ಯ ಇರುವಷ್ಟು ಚಪಾತಿ ನೀಡುತ್ತಿದ್ದರು ಪಾಲಕರು.
ಆದರೆ ಇದೇ ಆತನಿಗೆ ಮುಳುವಾಗಿದೆ. ಕೆಲ ದಿನಗಳ ಹಿಂದೆ ಚಪಾತಿ ತಿನ್ನುತ್ತಿದ್ದಂತೆಯೇ ತಲೆ ತಿರುಗಿ ಬಿದ್ದಿದ್ದಾನೆ ಬಾಲಕ. ಇವನ ತಂದೆ ಬನ್ವಾರಿ ಆದಿವಾಸಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈತನ ಬಗ್ಗೆ ಕೇಳಿದ ವೈದ್ಯರಿಗೆ ಶಾಕ್‌ ಆಗಿದ್ದು, ಇಷ್ಟೊಂದು ಚಪಾತಿ ತಿನ್ನುವುದು ಏಕೆ ಎಂದು ತಮಗೂ ಅಚ್ಚರಿಯಾಗಿದೆ ಎಂದಿದ್ದಾರೆ.
ನಂತರ ಬಾಲಕನ ಸಕ್ಕರೆ ಅಂಶ ಪರಿಶೀಲಿಸಿದಾಗ ಅದು 1200 ಎಂಜಿ ತಲುಪಿತ್ತು. ಸಂದೀಪ್​ಗೆ ಅತಿಯಾದ ತಲೆನೋವು ಇತ್ತು ಎಂದು ಪಾಲಕರು ವೈದ್ಯರಿಗೆ ಹೇಳಿದ್ದರು. ಬಾಲಕ ಪ್ರಜ್ಞೆ ಕಳೆದುಕೊಂಡಿದ್ದ, ಆದರೆ ಉಸಿರಾಡುತ್ತಿದ್ದ. ಆದರೆ ಹೃದಯ ಸೇರಿದಂತೆ ಸಂದೀಪ್​ ದೇಹದ ಬಹುತೇಕ ಅಂಗಗಳು ಕೆಲಸ ಮಾಡೋದನ್ನೇ ನಿಲ್ಲಿಸಿದ್ದವು. ಪರೀಕ್ಷೆ ಮಾಡಿದಾಗ ಆತನ ತಲೆಯಲ್ಲಿ ಕೀವು ತುಂಬಿಕೊಂಡಿರುವುದು ಕಂಡುಬಂತು.
ಕೂಡಲೇ ಶಸ್ತ್ರಚಿಕಿತ್ಸೆ ಮಾಡಿದ ವೈದ್ಯರು ಬಾಲಕನ ತಲೆಯಿಂದ 720 ಮಿ.ಲೀ ಕೀವನ್ನು ತೆಗೆದಿದ್ದಾರೆ. ಕೀವು ತುಂಬಿದ್ದರಿಂದ ಆತ ಪ್ರಜ್ಞೆ ಕಳೆದುಕೊಂಡಿದ್ದು ಮಾತ್ರವಲ್ಲದೇ ದೃಷ್ಟಿಯನ್ನೂ ಕಳೆದುಕೊಂಡಿದ್ದ. ಈತನ ದೇಹದಲ್ಲಿ ಸಕ್ಕರೆ ಅಂಶವನ್ನು ಹತೋಟಿಗೆ ತರುವ ಸಲುವಾಗಿ ವೈದ್ಯರು ದಿನಕ್ಕೆ 6 ಯುನಿಟ್​ ಇನ್ಸುಲಿನ್​ ನೀಡುತ್ತಿದ್ದಾರೆ. ಸದ್ಯ ಕಣ್ಣುಗಳು ಸ್ವಲ್ಪ ಸ್ವಲ್ಪ ಕಾಣಲು ಶುರುವಾಗಿದೆ, ಚಿಕಿತ್ಸೆ ಮುಂದುವರೆದಿದೆ. ಅತಿಯಾದ ಚಪಾತಿ ಸೇವನೆಯಿಂದ ಸಕ್ಕರೆ ಪ್ರಮಾಣ ಹೆಚ್ಚಿ ಹೀಗೆ ಆಗಿದೆ ಎಂದಿದ್ದಾರೆ ವೈದ್ಯರು.
ರೇಪ್‌ ಕೇಸ್‌ನಲ್ಲಿ ಮಕ್ಕಳ ಕಾಯ್ದೆ ಉಲ್ಲಂಘಿಸಿ ಇಕ್ಕಟ್ಟಿಗೆ ಸಿಲುಕಿದ ರಾಹುಲ್‌: ನೋಟಿಸ್‌ ಜಾರಿ

ರಾಜ್ಯದಲ್ಲೂ ಐಸಿಸ್‌ ಉಗ್ರರ ಲಿಂಕ್‌! ಮಾಜಿ ಶಾಸಕನ ಮೊಮ್ಮಗ ಸೇರಿ ನಾಲ್ವರು ಅರೆಸ್ಟ್‌- ಹಿನ್ನೆಲೆ ಭಯಾನಕ

ಬೆಳ್ಳಂಬೆಳಗ್ಗೆ ಬೆಚ್ಚಿಬಿದ್ದ ಕಾಂಗ್ರೆಸ್‌ ಶಾಸಕ ಜಮೀರ್ ಅಹಮ್ಮದ್‌ ಖಾನ್‌: ED ರೇಡ್‌!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:four + ten =
Remember me
