ನವದೆಹಲಿ:ಕೆಲವರಿಗೆ ಎಷ್ಟೇ ಉಚಿತ ಸವಲತ್ತು ಕೊಟ್ಟರೂ ಇನ್ನಷ್ಟು ಮತ್ತಷ್ಟು ಪಡೆದುಕೊಳ್ಳುವ ಆಸೆ. ಅದಕ್ಕಾಗಿ ಎಂತೆಂಥ ವೇಷಗಳನ್ನು ಹಾಕಿಕೊಳ್ಳಲೂ ಅವರು ಹಿಂಜರಿಯುವುದಿಲ್ಲ. ಅಂಥದ್ದೇ ಒಂದು ಘಟನೆ ದೆಹಲಿಯಲ್ಲಿ ನಡೆದಿದೆ.
ಇಲ್ಲಿ ಸರ್ಕಾರ ಮಹಿಳೆಯರಿಗೆ ಉಚಿತ ಬಸ್​ ಸೇವೆ ಆರಂಭಿಸಿದೆ. ಬಸ್​ನಲ್ಲಿ ಉಚಿತವಾಗಿ ಪ್ರಯಾಣಿಸುವ ಉದ್ದೇಶದಿಂದ ಯುವಕನೊಬ್ಬ ಹಿಜಾಬ್​ ಧರಿಸಿ ಲೇಡೀಸ್​ ಸೀಟ್​ನಲ್ಲಿ ಬಂದು ಕುಳಿತಿದ್ದಾನೆ.
ತಲೆಯನ್ನು ಬಟ್ಟೆಯಿಂದ ಮುಚ್ಚಿಕೊಂಡು, ಮುಖಕ್ಕೆ ಮಾಸ್ಕ್ ಹಾಕಿಕೊಂಡು ಬಸ್​​​​ನಲ್ಲಿ ಪ್ರಯಾಣಿಸುತ್ತಿದ್ದ. ಹುಡುಗಿಯರಂತೆ ವರ್ತಿಸಲು ಸಾಕಷ್ಟು ಪ್ರಯತ್ನಿಸಿದ್ದಾನೆ. ಆದರೆ ಆತನ ನಡವಳಿಕೆ ನೋಡಿ ಕಂಡಕ್ಟರ್​ಗೆ ಸಂದೇಹ ಬಂದಿದೆ. ಮಾಸ್ಕ್​ ತೆಗೆಯಲು ಹೇಳಿದರೂ ಯುವಕ ಅದನ್ನು ಆರಂಭದಲ್ಲಿ ವಿರೋಧಿಸಿದ್ದಾನೆ. ನಂತರ ಕಂಡಕ್ಟರ್​ ಬಲವಂತ ಮಾಡಿದಾಗ ನಿಜ ಬಣ್ಣ ಬಯಲಾಗಿದೆ. ಒಳಗೆ ಗಡ್ಡ-ಮೀಸೆ ಇರುವ ಯುವಕ ಕಾಣಿಸಿದ್ದಾನೆ. ಗಡ್ಡ-ಮೀಸೆ ಇದ್ದರೂ ಯುವಕ ಮಹಿಳೆಯ ದನಿಯಲ್ಲಿಯೇ ಮಾತನಾಡಲು ಯತ್ನಿಸಿದ್ದಾನೆ. ಕೊನೆಗೆ ಹಿಜಾಬ್​ ಅನ್ನೂ ತೆಗೆಸಿದ ಕಂಡಕ್ಟರ್​ ಇದರ ವಿಡಿಯೋ ಕೂಡ ಮಾಡಿದ್ದಾರೆ.
ಆರಂಭದಲ್ಲಿ ಹಿಜಾಬ್​, ಮಾಸ್ಕ್​ ತೆಗೆಸುತ್ತಿರುವುದನ್ನು ಕಂಡ ಇತರ ಪ್ರಯಾಣಿಕರು ಕಂಡಕ್ಟರ್​ ಮೇಲೆಯೇ ಹರಿಹಾಯ್ದಿದ್ದರು. ಹುಡುಗಿಯ ಬಳಿ ಇದೆಂಥ ದುರ್ವರ್ತನೆ ಎಂದುಕೊಂಡವರು ಕೆಲವರು. ಕೊನೆಗೆ ಅವರೂ ಬೆಚ್ಚಿಬಿದ್ದಿದ್ದಾರೆ.
ತಂದೆಯನ್ನೇ ಹುಡುಗಿ ಎಂದು ತಿಳಿದು ಲವ್​ ಮಾಡಿದ ಮಗ… ಕಿಲಾಡಿ ಅಪ್ಪನ ಬಲೆಗೆ ಬಿದ್ದವ ಸುಸ್ತೋ ಸುಸ್ತು!

‘ಹಿಂದೂಗಳಲ್ಲದವರಿಗೆ ಅವಕಾಶ ಕೊಡಬಾರ್ದು ಅಂತ ನಿಮ್​ ಕಾಂಗ್ರೆಸ್​ನವರೇ ಮಾಡಿರೋ ರೂಲ್ಸ್​ ಇಲ್ಲಿದೆ ನೋಡ್ಕೋಳಿ…’

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 16 =
Remember me
