ಮುಂಬೈ:ತನ್ನ ಸ್ನೇಹಿತೆ ಎಷ್ಟು ಕರೆ ಮಾಡಿದರೂ ಫೋನ್‌ಕಾಲ್‌ ಸ್ವೀಕರಿಸುತ್ತಿಲ್ಲ ಎಂದು ನೊಂದುಕೊಂಡ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ವಿಚಿತ್ರ ಘಟನೆ ಮುಂಬೈನ ಡಿಯೋನಾರ್ ಪ್ರದೇಶದಲ್ಲಿ ನಡೆದಿದೆ.
24 ವರ್ಷದ ಮಾನವ್ ಲಾಲ್ವಾನಿ ಎಂಬಾತ ಇಂಥದ್ದೊಂದು ಕೃತ್ಯ ಎಸಗಿದ್ದಾನೆ. ಈತ ತನ್ನ ಸ್ನೇಹಿತರ ಜತೆ ನಿನ್ನೆ ಮಧ್ಯರಾತ್ರಿಯವರೆಗೂ ಪಾರ್ಟಿಯಲ್ಲಿ ಇದ್ದ. ಆ ಪಾರ್ಟಿಯಲ್ಲಿ ಈ ಯುವತಿ ಕೂಡ ಇದ್ದಳು. ಅಲ್ಲಿ ಏನಾಗಿದೆಯೋ ಗೊತ್ತಿಲ್ಲ. ಪಾರ್ಟಿ ಮುಗಿಸಿ ವಾಪಸ್‌ ಬಂದಾಗ ಯುವತಿಗೆ ಮಾನವ್ ಕರೆ ಮಾಡಿದ್ದಾನೆ.
ಆದರೆ ಎಷ್ಟೇ ಆದರೂ ಆಕೆ ಕರೆ ಸ್ವೀಕರಿಸಲಿಲ್ಲ. ಅದರಿಂದ ಬೇಸತ್ತ ಯುವಕ ಬೆಳಗ್ಗೆ ಟೆರೇಸ್​ ಮೇಲೆ ಮಗ ನೇಣು ಬಿಗಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಯುವುದಕ್ಕೂ ಮುನ್ನ ಆತ ಯಾರಿಗೋ ಕರೆ ಮಾಡುತ್ತಿದ್ದುದು, ಅತ್ತ ಕಡೆಯವರು ಕಾಲ್‌ ಸ್ವೀಕರಿಸದೇ ಇದ್ದ ಹಿನ್ನೆಲೆಯಲ್ಲಿ ಆತ ಚಡಪಡಿಸುತ್ತಿದ್ದುದಾಗಿ ಕುಟುಂಬಸ್ಥರು ಹೇಳಿದ್ದಾರೆ.
ಯುವಕನ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆಗಾಗಿ ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುತ್ತಿದೆ. ಅವರಿಬ್ಬರ ಮಧ್ಯೆ ಏನಾದರೂ ಜಗಳವಾಗಿತ್ತೋ, ಆಕೆಯ ಮನವೊಲಿಸಲು ಆತ ಕರೆ ಮಾಡಿದ್ದನೋ ಅಥವಾ ಇನ್ನೇನು ಆಗಿದೆಯೋ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ. ಯುವತಿಯ ಹೇಳಿಕೆಯನ್ನು ಸಹ ದಾಖಲಿಸಿಕೊಳ್ಳಲಾಗಿದೆ.
ಆಡಳಿತ ಪಕ್ಷ ಮೊಟ್ಟೆ ತಿನ್ನಲ್ಲ ಎಂದು ವ್ಯಾಪಾರಿಗಳನ್ನು ಎತ್ತಂಗಡಿ ಮಾಡ್ತೀರಾ? ಯಾರು ಏನು ತಿನ್ನಬೇಕೆಂದು ನೀವ್ಹೇಗೆ ನಿರ್ಧರಿಸುತ್ತೀರಿ? ಹೈಕೋರ್ಟ್‌ ತರಾಟೆ

ರಾವತ್‌ ಸಾವಿನ ಬಗ್ಗೆ ನವೆಂಬರ್‌ನಲ್ಲಿಯೇ ಮುನ್ಸೂಚನೆ ಕೊಟ್ಟಿದ್ದ ಜ್ಯೋತಿಷಿ- ಪತ್ರಿಕೆಯಲ್ಲಿಯೂ ಪ್ರಕಟ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × two =
Remember me
