ರಾಜ್​ಕೋಟ್​ (ಗುಜರಾತ್​):ನಾಳೆ ಗಾಂಧಿ ಜಯಂತಿ. ಈ ಸಂದರ್ಭದಲ್ಲಿ ಗಾಂಧೀಜಿಯ ಸಂದೇಶಗಳನ್ನು ಮಕ್ಕಳು ವಿವಿಧ ರೀತಿಯಲ್ಲಿ ಹೇಳುವುದು ಸಹಜ.ಆದರೆ ಇಲ್ಲಿಬ್ಬರು ಪುಟಾಣಿಗಳು ಸ್ವಲ್ಪ ಡಿಫರೆಂಟ್​ ಅಗಿ ಗಾಂಧಿ ಜಯಂತಿ ಆಚರಿಸುತ್ತಿದ್ದಾರೆ. ಕರೊನಾ ವೈರಸ್​ನ ಈ ದಿನಗಳಲ್ಲಿ ಕರೊನಾ ಕುರಿತು ಸಂದೇಶಗಳನ್ನು ಈ ಮಕ್ಕಳು ಪ್ರಸಾರ ಮಾಡಲು ಬಯಸಿದ್ದಾರೆ.
ಕರೊನಾ ಪರೀಕ್ಷೆ ಮಾಡಿಸಿಕೊಳ್ಳಲು ಆಸ್ಪತ್ರೆಗೆ ಹೋಗಿರುವ ಈ ಬಾಲಕ, ಗಾಂಧೀಜಿ ವೇಷ ತೊಟ್ಟುಕೊಂಡಿದ್ದರೆ, ಈತನ ಜತೆಗೆ ಕಸ್ತೂರಬಾ ವೇಷಧಾರಿಯಾಗಿ ಬಾಲಕಿಯೊಬ್ಬಳು ಬಂದಿದ್ದಾಳೆ. ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳುವ ಕುರಿತಂತೆ ಜಾಗೃತಿ ಮೂಡಿಸುವ ಉದ್ದೇಶ ಹೊಂದಿರುವುದಾಗಿ ತಿಳಿಸಿದ್ದಾರೆ ಇವರು.
Gujarat: A 10-year-old boy from Rajkot dressed up as Mahatma Gandhi and went for his#COVID19test.
He said, "My swab samples have been taken for coronavirus test. People should not be apprehensive about the test. Our country will be healthy only if we cooperate." (29.09.2020)pic.twitter.com/pfFoSwsgUb
— ANI (@ANI)September 30, 2020

ಅಂದಹಾಗೆ ಈ ಮಕ್ಕಳು ಗುಜರಾತ್‌ನ ರಾಜ್‌ಕೋಟ್‌ನ ನಿವಾಸಿಗಳು.ಎಂಟ್ಹತ್ತು ವರ್ಷದ ಈ ಮಕ್ಕಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸುದ್ದಿ ಮಾಡುತ್ತಿದ್ದಾರೆ.
“ನನ್ನ ಸ್ವಾಬ್‌ ಸ್ಯಾಂಪಲ್ ‌ಗಳನ್ನು ಟೆಸ್ಟ್ ‌ಗೆ ತೆಗೆದುಕೊಳ್ಳಲಾಗಿದೆ. ಈ ಪರೀಕ್ಷೆ ಬಗ್ಗೆ ಜನರು ಭಯ ಹೊಂದಬಾರದು. ನಾವು ಸಹಕಾರ ಕೊಟ್ಟಲ್ಲಿ ನಮ್ಮ ದೇಶ ಆರೋಗ್ಯಯುತವಾಗಿರಲಿದೆ” ಎಂದು ಬಾಲಕ ಹೇಳಿದ್ದಾನೆ.
ಚೀನಿಯರ ಎದೆನಡುಗಿಸಲು ಸಜ್ಜುಗೊಂಡಿದೆ ‘ನಿರ್ಭಯ್‌’ ಸಬ್‌ಸಾನಿಕ್‌ ಕ್ಷಿಪಣಿ

ದುರ್ಗಾವತಾರಕ್ಕೆ ಮುಸ್ಲಿಮರಿಂದ ಬೆದರಿಕೆ: ಲಂಡನ್​ನಲ್ಲಿ ಭದ್ರತೆ ಕೇಳಿದ ಸಂಸದೆ ನುಸ್ರತ್

ಹತ್ರಾಸ್​ ಗ್ಯಾಂಗ್​ರೇಪ್​ ಪ್ರಕರಣ: ಯೋಗಿ ಸರ್ಕಾರಕ್ಕೆ ಮಾನವ ಹಕ್ಕುಗಳ ಆಯೋಗದಿಂದ ನೋಟಿಸ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 4 =
Remember me
