ನ್ಯೂಯಾರ್ಕ್​:ವಧು- ವರ ಬೇಕಾಗಿದ್ದಾರೆ ಎಂದು ಜಾಹೀರಾತು ನೀಡುವುದು ಹೊಸದೇನಲ್ಲ. ಆದರೆ ಇಲ್ಲೊಬ್ಬಳು ಬಾಯ್​ಫ್ರೆಂಡ್​ ಬೇಕಾಗಿದ್ದಾನೆ ಎಂದು ಜಾಹೀರಾತು ನೀಡಿ ಸಾಮಾಜಿಕ ಜಾಲತಾಣದಲ್ಲಿ ಭಾರಿ ಸುದ್ದಿಯಾಗಿದ್ದಾಳೆ. ಅಷ್ಟಕ್ಕೂ ಬಾಯ್​ಫ್ರೆಂಡ್​ ಕೇಳಿರುವುದು ತನ್ನ ಅತ್ತೆಗೆ!
ನ್ಯೂಯಾರ್ಕ್​ನ ಹುಡ್ಸನ್​ ನಿವಾಸಿಯಾದ ಮಹಿಳೆಯು ತನ್ನ 51 ವರ್ಷ ಪ್ರಾಯದ ಅತ್ತೆಗೆ ಬಾಯ್​ಫ್ರೆಂಡ್​ ಬೇಕು. ಮಾವ ಇಲ್ಲದೇ ಇರುವ ಕಾರಣ ಬಾಯ್​ಫ್ರೆಂಡ್​ ಬೇಕಾಗಿದ್ದಾನೆ 40- 60 ವರ್ಷ ಪ್ರಾಯದವನ ಹುಡುಕಾಟದಲ್ಲಿದ್ದೇವೆ. ಗುತ್ತಿಗೆ ಆಧಾರದ ಮೇಲೆ ಬಾಯ್​ಫ್ರೆಂಡ್​ ಬೇಕು. ಆಯ್ಕೆಯಾದ ವ್ಯಕ್ತಿಗೆ ಒಂದು ಸಾವಿರ ಡಾಲರ್​ (ಸುಮಾರು 75 ಸಾವಿರ ರೂಪಾಯಿ) ನೀಡಲಾಗುವುದು ಎಂದು ಜಾಹೀರಾತಿನಲ್ಲಿ ಬರೆಯಲಾಗಿದೆ. ಅಷ್ಟಕ್ಕೂ ಈ ಬಾಯ್​ಫ್ರೆಂಡ್ ಬೇಕಾಗಿರುವುದು ಮದುವೆಗೆ ಹೋಗಲು, ಕೇವಲ ಎರಡು ದಿನ ಮಾತ್ರ ಎಂದು ಬರೆಯಲಾಗಿದೆ.
ಬಾಯ್​ಫ್ರೆಂಡ್​ ಆಗಬಯಸುವ ವ್ಯಕ್ತಿಗೆ ನೃತ್ಯ ಮಾಡಲು ತಿಳಿದಿರಬೇಕು ಹಾಗೂ ಆತ ಉತ್ತಮ ಸಂಭಾಷಣೆ ನಡೆಸುವವನಾಗಿರಬೇಕು ಎಂದೂ ಹೇಳಲಾಗಿದೆ. ಅನೇಕರು ಇದು ಸೋಶಿಯಲ್​ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳಲು ಮಾಡಿದ ತಂತ್ರ ಎಂದು ಕಮೆಂಟ್​ ಮಾಡಿದ್ದಾರೆ.
ಚುನಾವಣೆ ಹೊಸ್ತಿಲಲ್ಲೇ ಕಾಂಗ್ರೆಸ್​ಗೆ ಬಿಗ್​ ಶಾಕ್​! ಅಧ್ಯಕ್ಷ ಸೇರಿದಂತೆ ಎಂಟು ಮಂದಿ ಶಾಸಕರು ಬಿಜೆಪಿಗೆ ಸೇರ್ಪಡೆ

‘ರಾಧಾ ಕಲ್ಯಾಣ’ ನಟಿಯೀಗ ತುಂಬು ಗರ್ಭಿಣಿ: ಸೀಮಂತದ ಫೋಟೋ ವೈರಲ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:13 + twenty =
Remember me
