ಮುಂಬೈ:ಇನ್ನುಮುಂದೆ ಭಾರತೀಯ ಸಂವಿಧಾನವನ್ನು ಅಂಧರು ಕೂಡ ಓದಿ ತಿಳಿದುಕೊಳ್ಳಬಹುದಾಗಿದೆ. ಏಕೆಂದರೆ ಸಂವಿಧಾನದ ಸಂಪೂರ್ಣ ಪುಸ್ತಕವನ್ನು ಬ್ರೈಲ್​ ಲಿಪಿಯಲ್ಲಿ ಪ್ರಿಂಟ್​ ಮಾಡಲಾಗಿದೆ.
ಈ ವಿಶೇಷ ಪುಸ್ತಕವು ಈಚೆಗೆ ಮುಂಬೈನಲ್ಲಿ ಬಿಡುಗಡೆಯಾಗಿದೆ. ಮಹಾರಾಷ್ಟ್ರದ ಸಾಮಾಜಿಕ ನ್ಯಾಯ ಸಚಿವ ಧನಂಜಯ್ ಮುಂಡೆ ಬ್ರೈಲ್ ಲಿಪಿಯಲ್ಲಿ ರಚಿತವಾದ ಭಾರತೀಯ ಸಂವಿಧಾನದ ಪ್ರತಿಯನ್ನು ಬಿಡುಗಡೆಗೊಳಿಸಿದ್ದಾರೆ. ಅಂಧರು ಕೂಡ ಸಂವಿಧಾನವನ್ನು ಓದುವ ಅವಕಾಶ ಸಿಗಬೇಕು ಎಂಬ ಉದ್ದೇಶದಿಂದ ಮಹಾರಾಷ್ಟ್ರ ಸರ್ಕಾರ ಈ ಕಾರ್ಯ ಕೈಗೊಂಡಿದೆ ಎಂದು ಅವರು ಹೇಳಿದರು.
ಥಾಣೆ ಮೂಲದ ಅಸ್ತಿತ್ವ ಎಂಬ ಎನ್​ಜಿಒ ಸಂಸ್ಥೆಯೊಂದು ಸಂವಿಧಾನದ ಪ್ರತಿಯನ್ನು ತಯಾರಿಸಿದೆ. ಇಂದು ಅಂಧರ ಸ್ನೇಹಿಯಾಗಿರುವ ಅನೇಕ ಪುಸ್ತಕಗಳು ಬಂದಿರುವಾಗ ನಿತ್ಯ ಜೀವನಕ್ಕೆ ಆಧಾರವಾಗಿರುವ ಭಾರತೀಯ ಸಂವಿಧಾನದಂಥ ಮಹತ್ವದ ಪುಸ್ತಕದಲ್ಲಿ ಇರುವ ಅಂಶಗಳಿಂದ ಅಂಧರು ವಂಚಿತರಾಗಬಾರದು ಎಂಬ ಉದ್ದೇಶದಿಂದ ಇಂಥದ್ದೊಂದು ಯೋಚನೆ ಮಾಡಿ ಬ್ರೈಲ್​ ಲಿಪಿಯಲ್ಲಿ ಹೊರತಂದಿರುವುದಾಗಿ ಸಂಸ್ಥೆ ಹೇಳಿದೆ.
ಎಲ್ಲ ಅಂಗಾಂಗಗಳು ಸರಿಯಿದ್ದರೂ ಎಲ್ಲಾ ವಿಷಯಗಳನ್ನು ತಿಳಿದುಕೊಳ್ಳಬೇಕು ಎನ್ನುವ ಹಂಬಲ ಇರುವವರು ಅತ್ಯಂತ ವಿರಳ. ಆದರೆ ಸಾಮಾನ್ಯ ಜನರಿಗೆ ಹೋಲಿಸಿದರೆ ಅಂಧರಲ್ಲಿ ತಿಳಿದುಕೊಳ್ಳಬೇಕು ಎನ್ನುವ ಮಹಾತ್ವಾಕಾಂಕ್ಷೆ, ಹೆಚ್ಚು ಹೆಚ್ಚು ಅಧ್ಯಯನಶೀಲರಾಗಬೇಕು ಎನ್ನುವ ಆಸೆ ಹೆಚ್ಚು ಎನ್ನಲಾಗಿದೆ.
ಆದರೆ ಅತ್ಯಲ್ಪ ಮಂದಿ ಅರಿತಿರುವ ಸಂವಿಧಾನದಂಥ ಪುಸ್ತಕದ ಕುರಿತು ಅವರಿವರ ಬಳಿ ಕೇಳಿ ತಿಳಿದುಕೊಳ್ಳುವುದಕ್ಕಿಂತಲೂ ಅಂಧರೇ ಖುದ್ದಾಗಿ ಅದನ್ನು ಅರ್ಥೈಸಿಕೊಂಡು, ಅರಿತರೆ ಅದರ ಆಳವಾದ ವಿಚಾರಧಾರೆಗಳನ್ನು ತಿಳಿದುಕೊಳ್ಳಲು ಸಾಧ್ಯ ಎನ್ನುವ ಕಾರಣಕ್ಕೆ ಸಂಸ್ಥೆ ಇಂಥದ್ದೊಂದು ದಿಟ್ಟ ಹೆಜ್ಜೆ ಇಟ್ಟಿದೆ.
ಬಿಜೆಪಿ ನಾಯಕರ ಕ್ರಿಮಿನಲ್​ ಕೇಸ್​ ವಾಪಸ್ ಪ್ರಕರಣ- ಸರ್ಕಾರಕ್ಕೆ ಶಾಕ್​ ಕೊಟ್ಟ ಹೈಕೋರ್ಟ್

ಅಟಲ್​ ಕವನಕ್ಕೆ ನೃತ್ಯದ ಮೆರುಗು; ಅಪೂರ್ವ ನಾಯಕನ ಜನ್ಮದಿನಕ್ಕೆ ಹೀಗೊಂದು ಗೌರವ…

ಮಕ್ಕಳಾಗಿಲ್ಲವೆಂದು ಇನ್ನೊಂದು ಮದ್ವೆಯಾದರೆ ಇಬ್ರಿಗೂ ಮಕ್ಕಳಾದವು: ಈಗ ಆಸ್ತಿಯ ಭಾಗ ಹೇಗೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 + 17 =
Remember me
