ಬ್ರೆಜಿಲ್‌:ದಯವಿಟ್ಟು ನನ್ನನ್ನು ಗೆಲ್ಲಿಸಿ, ಇಲ್ಲದೇ ಹೋದರೆ ನಾನು ಕೊಲೆಯಾಗುತ್ತೇನೆ. ನನಗೆ ಇರುವುದು ಮೂರು ಆಯ್ಕೆ. ಗೆಲ್ಲಬೇಕು, ಇಲ್ಲವೇ ಕೊಲೆಯಾಗಬೇಕು, ಒಂದು ವೇಳೆ ಕೊಲೆಯಾಗದಿದ್ದರೂ ನನ್ನನ್ನು ಅರೆಸ್ಟ್‌ ಮಾಡ್ತಾರೆ. ಆದ್ದರಿಂದ ನನ್ನನ್ನು ಗೆಲ್ಲಿಸಿ…
ಹೀಗೆಂದು ಗೋಗರೆಯುತ್ತಿರುವವರು ಬ್ರೆಜಿಲ್‌ನ ವಿವಾದಿತ ಅಧ್ಯಕ್ಷ ಎಂದೇ ಹೆಸರುವಾಸಿಯಾಗಿರುವ ಬೋಲ್ಸೊನಾರೊ. ಸದಾ ಒಂದಿಲ್ಲೊಂದು ಹೇಳಿಕೆ ಕೊಡುತ್ತಾ ವಿವಾದ ಸೃಷ್ಟಿಸುತ್ತಿರುವ ಬೋಲ್ಸೊನಾರೊ ಈಗ ಮತ್ತೆ ಸುದ್ದಿಯಲ್ಲಿದ್ದಾರೆ. 2022ರ ಅಕ್ಟೋಬರ್ 2ರಂದು ಬ್ರೆಜಿಲ್ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು ತಮ್ಮನ್ನು ಗೆಲ್ಲಿಸುವಂತೆ ಅವರು ಮನವಿ ಮಾಡಿಕೊಂಡಿರುವ ಪರಿ ಇದು.
ಚುನಾವಣೆಯ ಹಿನ್ನೆಲೆ ಏರ್ಪಡಿಸಿದ್ದ ಸಭೆಯಲ್ಲಿ ತಮ್ಮದೇ ಪಕ್ಷದ ನಾಯಕರ ಎದುರು ಈ ಮಾತನ್ನು ಅವರು ಹೇಳಿದ್ದಾರೆ. ತಾವು ಗೆಲ್ಲದೇ ಹೋದರೆ ವಿರೋಧಿಗಳು ತಮ್ಮನ್ನು ಕೊಲೆ ಮಾಡುತ್ತಾರೆ, ಇಲ್ಲವೇ ಅವರು ವಿನಾ ಕಾರಣ ತಮ್ಮನ್ನು ಯಾವುದಾದರೂ ಕೇಸ್‌ನಲ್ಲಿ ಸಿಲುಕಿಸಿ ಅರೆಸ್ಟ್‌ ಮಾಡುತ್ತಾರೆ ಎನ್ನುವುದು ಈ ಅಧ್ಯಕ್ಷರ ಆರೋಪ. 2018ರಲ್ಲಿ ಮೋಸ ನಡೆದಿತ್ತು. ಮತಯಂತ್ರ ಸರಿಯಿರಲಿಲ್ಲ. ಆದರೂ ಹೇಗೆ ನಾನು ಗೆಲ್ಲಲು ಸಾಧ್ಯವಾಗಿದೆ. ಈಗ ಮತ್ತ ಎಡವಟ್ಟಾಗುವ ಸಾಧ್ಯತೆ ಇದ್ದು, ಏನಾದರೂ ಮಾಡಿ ನನ್ನನ್ನು ಗೆಲ್ಲಿಸಿ ಎಂದಿದ್ದಾರೆ.ಬ್ರೆಜಿಲ್‌ ಸ್ಮಗ್ಲರ್‌ಗಳ ಸ್ವರ್ಗ, ರೌಡಿಗಳ ಅಡ್ಡೆ ಎಂಬೆಲ್ಲಾ ಹೆಸರುಗಳಿಂದ ಕುಖ್ಯಾತಿ ಪಡೆದಿದೆ. ಇಲ್ಲಿ ಪ್ರತಿಭಟನೆ, ಹಿಂಸಾಚಾರ ಭುಗಿಲೆದ್ದರೆ ಭದ್ರತಾ ಪಡೆಗಳು ಪರದಾಡುವ ಸ್ಥಿತಿ ಇದೆ. ಇಂಥ ಸಂದರ್ಭವಿದ್ದರೂ ತಮ್ಮ ಅಧಿಕಾರಾವಧಿಯಲ್ಲಿ ಸ್ವಲ್ಪವೂ ಸರಿಯಾದ ಕೆಲಸ ಮಾಡದೇ ಕೆಟ್ಟ ಹೆಸರು ಪಡೆದುಕೊಂಡಿರುವ ಬೋಲ್ಸೊನಾರೊಗೆ ಜನ ಬೇಸತ್ತು ಹೋಗಿರುವ ಆರೋಪವಿದೆ. ಇವುಗಳ ನಡುವೆಯೇ ವಿವಾದಾತ್ಮಕ ಹೇಳಿಕೆ ಕೊಡುತ್ತಾ ಹಿಂಸೆಗೆ ಪ್ರಚೋದನೆಯನ್ನು ಇವರು ಕೊಡುತ್ತಿರುವುದಾಗಿ ವಿಪಕ್ಷಗಳು ದೂರುತ್ತಿವೆ.
ಕರೊನಾ ನಿಯಂತ್ರಣದ ವಿಚಾರದಲ್ಲಿ ಈಗಾಗಲೇ ಬ್ರೆಜಿಲ್‌ ಸಂಸತ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಪರಿಸರ ಸಂರಕ್ಷಣೆ ವಿಚಾರದಲ್ಲೂ ಬೋಲ್ಸೊನಾರೊ ಸರ್ಕಾರದ ಅಸಡ್ಡೆಯಿಂದ ಜನರು ಉರಿದುಬೀಳುತ್ತಿದ್ದಾರೆ. ಏನಾದರೂ ಕೆಲಸ ಮಾಡಿ ಎಂದರೆ ವಿವಾದಾತ್ಮಕ ಹೇಳಿಕೆ ಕೊಡುತ್ತಾ ಕಾಲ ಕಳೆಯುತ್ತಿರುವ ಅಧ್ಯಕ್ಷ ಇದೀಗ ಇಂಥ ಹೇಳಿಕೆ ನೀಡಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.
3 ಎಕರೆಗಾಗಿ ನಾಲ್ವರು ಸಹೋದರರ ಭೀಕರ ಹತ್ಯೆ: ನೋಡಲಾಗುತ್ತಿಲ್ಲ ಹೆತ್ತಾಕೆಯ ಕಣ್ಣೀರು- 9 ಮಂದಿ ಅರೆಸ್ಟ್‌

ಬೆಂಗಳೂರಲ್ಲೊಂದು ಕುತೂಹಲದ ಕೇಸ್‌: ಸ್ಕೂಟರ್‌ ಕದ್ದು ಸಿಕ್ಕಿಬಿದ್ದ- ಇವನ ಬಳಿಯಿತ್ತು ವರ್ಷದ ಹಿಂದೆ ಕಾಣೆಯಾದ ಮಗು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen − two =
Remember me
