ಸಮಸ್ತೀಪುರ (ಬಿಹಾರ):ಆಸ್ಪತ್ರೆಗಳಲ್ಲಿ ಭ್ರಷ್ಟಾಚಾರ, ಹಣದ ದಾಹದ ವಿಷಯ ಹೊಸತೇನಲ್ಲ. ಲಕ್ಷ ಲಕ್ಷಗಟ್ಟಲೆ ಹಣ ಕೊಟ್ಟರೂ ಹಲವು ಆಸ್ಪತ್ರೆಗಳ ವೈದ್ಯರ ಹಣದ ದಾಹ ತೀರದೇ ಕೊನೆಗೆ ಶವವನ್ನೂ ಕೊಡದೇ ಹಿಂಸಿಸುವ ಘಟನೆಗಳು ಮೇಲಿಂದ ಮೇಲೆ ವರದಿಯಾಗುತ್ತಲೇ ಇರುತ್ತವೆ.
ಅಂಥದ್ದೇ ಒಂದು ಹಣದ ದಾಹಕ್ಕೆ ಒಳಗಾಗಿರುವ ವೃದ್ಧ ದಂಪತಿ ಇದೀಗ ಭಿಕ್ಷೆ ಬೇಡುವ ದಾರುಣ ಸ್ಥಿತಿ ಉಂಟಾಗಿದೆ. ಅದೂ ಮೃತಪಟ್ಟಿರುವ ಮಗನ ಶವವನ್ನು ಪಡೆಯುವುದಕ್ಕಾಗಿ! ಶವ ನೀಡಬೇಕು ಎಂದು 50 ಸಾವಿರ ರೂಪಾಯಿ ಲಂಚ ನೀಡಿ ಎಂದು ಆಸ್ಪತ್ರೆ ಸಿಬ್ಬಂದಿ ಕೇಳಿರುವ ಹಿನ್ನೆಲೆಯಲ್ಲಿ ಈ ದಂಪತಿ ಈಗ ಅದಕ್ಕಾಗಿ ಭಿಕ್ಷೆ ಬೇಡುತ್ತಿದ್ದಾರೆ!
ಇಂಥದ್ದೊಂದು ದಾರುಣ ಘಟನೆ ನಡೆದಿರುವುದು ಬಿಹಾರದ ಸಮಸ್ತೀಪುರದಲ್ಲಿ. ಕಳೆದ ಕೆಲ ದಿನಗಳ ಹಿಂದೆ ಬಡ ದಂಪತಿ ಮಗ ಮನೆಯಿಂದ ಕಾಣೆಯಾಗಿದ್ದನು. ಇದಾದ ಬಳಿಕ ಆತನ ಮೃತದೇಹ ಸಮಸ್ತೀಪುರ ಸದರ್​ ಆಸ್ಪತ್ರೆಯಲ್ಲಿದೆ ಎಂದು ದಂಪತಿಗೆ ಕರೆ ಬಂದಿದೆ. ಶವ ಪಡೆದುಕೊಳ್ಳಲು ಅಲ್ಲಿಗೆ ಹೋದಾಗ 50 ಸಾವಿರ ರೂಪಾಯಿ ಲಂಚ ಕೇಳಿದ್ದಾರೆ. ನಾವು ಬಡವರಾಗಿದ್ದು, ಅಷ್ಟೊಂದು ಹಣ ನೀಡಲು ಸಾಧ್ಯವಿಲ್ಲ ಎಂದು ಕೇಳಿಕೊಂಡಿರುವ ಹೊರತಾಗಿ ಕೂಡ ಇವರ ಮಾತನ್ನು ಸಿಬ್ಬಂದಿ ಕೇಳಿಲ್ಲ. ಹೀಗಾಗಿ, ಹಣ ಹೊಂದಿಸಲು ಮನೆ ಮನೆಗೆ ತೆರಳಿ ಭಿಕ್ಷೆ ಕೇಳುತ್ತಿದ್ದಾರೆ.
ಹೀಗೆ ಭಿಕ್ಷೆ ಬೇಡುತ್ತಿರುವ ವಿಡಿಯೋ ವೈರಲ್‌ ಆಗಿದ್ದು, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈ ಆಸ್ಪತ್ರೆ ಸಿಬ್ಬಂದಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವ ಕಾರಣ, ಸಂಬಳ ಸರಿಯಾಗಿ ಸಿಗುತ್ತಿಲ್ಲ. ಆದ್ದರಿಂದ ಈ ರೀತಿ ಹಣ ಕೀಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಇಲ್ಲಿದೆ ನೋಡಿ ವಿಡಿಯೋ:
Bihar: समस्तीपुर में जवान बेटे का पोस्टमार्टम कराने के लिए माता-पिता ने किया चंदा इकट्ठा
पोस्टमार्टम कर्मी ने कहा – "50 हज़ार लाओ और बेटे का शव ले जाओ"pic.twitter.com/W5cVXD1XG0
— News24 (@news24tvchannel)June 8, 2022

ಚಿತ್ರನಟ ಜೈಜಗದೀಶ್ ಅವರಿಂದ ಹಲ್ಲೆ? ಪೊಲೀಸ್‌ ಠಾಣೆಯಲ್ಲಿ ದಾಖಲಾಯ್ತು ದೂರು!

ಕೊಲೆಗೆ ಹೊಸಪೇಟೆಯ ಕಾನ್ಸ್‌ಟೆಬಲ್‌ ಕೊಟ್ಟ ಸುಪಾರಿ- ಹತ್ಯೆ ಮಾಡಲು ಹೆದರಿದವ ಬಿಟ್ಟ ಬಾಯಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + eight =
Remember me
