ಫಿರೋಜಾಬಾದ್‌ (ಉತ್ತರ ಪ್ರದೇಶ):ಸ್ನಾನಕ್ಕೆಂದು ಗ್ಯಾಸ್‌ ಗೀಸರ್‌ ಬಳಸುತ್ತಿದ್ದರೆ ತುಂಬಾ ಎಚ್ಚರಿಕೆಯಿಂದ ಇರಿ. ಇದಾಗಲೇ ಕೆಲ ದಿನಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಅನಿಲ ಸೋರಿಕೆಯಿಂದ ತಾಯಿ, ಮಗು ಮೃತಪಟ್ಟಿರುವ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಮದುಮಗಳೊಬ್ಬಳು ತನ್ನ ಪ್ರಾಣ ಕಳೆದುಕೊಂಡಿರುವ ಘಟನೆ ಉತ್ತರ ಪ್ರದೇಶ ರಾಜ್ಯದ ಫಿರೋಜಾಬಾದ್‌ನಲ್ಲಿ ನಡೆದಿದೆ.
27 ವರ್ಷದ ಬ್ಯಾಂಕ್ ಉದ್ಯೋಗಿ ನಿಧಿ ಗುಪ್ತಾ ಮದುವೆಯಾಗಿ ಮೂರೇ ದಿನಕ್ಕೆ ಪ್ರಾಣ ಕಳೆದುಕೊಂಡಿದ್ದಾರೆ. ಬಳೆ ಉದ್ಯಮಿ ನಿಶ್ಚಲ್ ಗುಪ್ತಾ ಎಂಬುವರನ್ನು ಮೂರು ದಿನಗಳ ಹಿಂದೆ ಮದುವೆಯಾಗಿದ್ದ ನಿಧಿ ಗ್ಯಾಸ್‌ ಗೀಜರ್‌ಗೆ ಬಲಿಯಾಗಿದ್ದಾರೆ.
ಆಗಿದ್ದೇನು?ನಿಧಿಯ ಗಂಡನ ಮನೆಯ ಬಾತ್‌ರೂಂಗೆ ಗ್ಯಾಸ್ ಗೀಸರ್ ಅಳವಡಿಸಲಾಗಿದೆ. ಗ್ಯಾಸ್‌ ಲೀಕ್‌ ಆಗಿ ಸೋರುತ್ತಿತ್ತು. ಅದು ವಾಸನೆ ಬೀರುತ್ತಿದ್ದರೂ ನಿಧಿ ಅದನ್ನು ಅಷ್ಟು ಗಮನಿಸಲೇ ಇಲ್ಲ. ಸ್ನಾನಕ್ಕಿಳಿದ ಅವರು ಬಾತ್‌ರೂಮಿನ ಬಾಗಿಲು ಹಾಕಿಕೊಂಡಿದ್ದಾರೆ. ಅಲ್ಲಿಗೆ ಹೋಗಿ ಉಸಿರು ಎಳೆದುಕೊಂಡದ್ದೇ ಉಸಿರೇ ಕಟ್ಟಿದೆ. ಜೋರಾಗಿ ಕಿರುಚಾಡಿದ ಅವರು ಬಾಗಿಲು ಬಡಿದಿದ್ದಾರೆ. ಆದರೆ ಅದು ಹೊರಗಿನವರಿಗೆ ಕೇಳಿಸುವ ಮೊದಲೇ ವಿಷಾನಿಲ ಆಕೆಯ ದೇಹ ಸೇರಿ ಪ್ರಾಣಪಕ್ಷಿ ಹಾರಿ ಹೋಗಿದೆ!
ಮದುವೆಯ ಮನೆಯಾಗಿದ್ದರಿಂದ ನೆಂಟರಿಷ್ಟರು ತುಂಬಿದ್ದರು. ಮನೆಯಲ್ಲಿ ಗಲಾಟೆ ಜೋರಾಗಿತ್ತು. ನಿಧಿ ಉಸಿರುಗಟ್ಟಿದಾಗ ಬಾಗಿಲು ತೆರೆಯುವ ಪ್ರಯತ್ನ ಮಾಡಿದ್ದಾರೆ. ಆ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ. ಆದ್ದರಿಂದ ಜೋರಾಗಿ ಬಾಗಿಲು ಬಡಿದರೂ ಅದು ಗಲಾಟೆಯ ಮನೆಯಲ್ಲಿ ಕೇಳಿಸಲೇ ಇಲ್ಲ. ಹೊತ್ತು ಕಳೆದರೂ ನಿಧಿ ಹೊರಗೆ ಬರದಾಗ ನೆಂಟರು ಬಾಗಿಲು ಬಡಿದಿದ್ದಾರೆ. ಯಾವುದೇ ಸೂಚನೆ ಒಳಗಿನಿಂದ ಬರದಾಗ ಗಾಬರಿಯಾಗಿದ್ದಾರೆ.
ನಂತರ ಬಾಗಿಲು ಒಡೆದು ನೋಡಿದಾಗ ನಿಧಿ ಅಲ್ಲಿಯೇ ಶವವಾಗಿ ಬಿದ್ದಿದ್ದರು. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಮುಂದುವರೆಸಿದ್ದಾರೆ.
ತಜ್ಞರು ಹೇಳುವುದೇನು?
ಗ್ಯಾಸ್ ಗೀಸರ್‌ನೊಳಗೆ ಕಾರ್ಬನ್ ಮೊನಾಕ್ಸೈಡ್ ಎಂಬ ಅನಿಲ ಇರುತ್ತದೆ. ಇದು ಉಸಿರಾಡಿದರೆ ತುಂಬಾ ಅಪಾಯಕಾರಿ. ಮನುಷ್ಯನ ದೇಹಕ್ಕೆ ಸೇರಿದರೆ ಕೇಂದ್ರ ನರಮಂಡಲವನ್ನು ಹಾನಿ ಮಾಡುತ್ತದೆ. ಬಳಿಕ ಹೃದಯದ ಮೇಲೆ ಹೆಚ್ಚು ಅವಲಂಬಿತವಾಗಿರುವ ಅಂಗ ವ್ಯವಸ್ಥೆಯೂ ಹಾಳಾಗುತ್ತದೆ. ಇವೆಲ್ಲಾ ಆಗಲು ಐದು ನಿಮಿಷವೂ ಹಿಡಿಯುವುದಿಲ್ಲ. 2-3 ನಿಮಿಷಗಳಲ್ಲಿಯೇ ಉಸಿರಾಟದ ತೊಂದರೆ ಕಾಣಿಸಿಕೊಂಡು ಮನುಷ್ಯ ಪ್ರಜ್ಞಾಹೀನನಾಗುತ್ತಾನೆ. ಕೂಡಲೇ ಸಾವು ಸಂಭವಿಸುತ್ತದೆ.
ಪಕ್ಕದ ಮನೆಯ ಮಹಿಳೆಯನ್ನು ಎಳೆದೊಯ್ದ ಪತಿ- ರೇಪ್‌ ಮಾಡುವಾಗ ವಿಡಿಯೋ ಮಾಡಿದ ಪತ್ನಿ!

VIDEO: ಹಿಜಾಬ್‌ ವಿವಾದ- ಗಲಾಟೆ ಮಾಡ್ಬೇಡಿ ಎಂದು ಶಿಕ್ಷಕಿ ಮನವಿ ಮಾಡಿದ್ರೆ, ಈ ವಿದ್ಯಾರ್ಥಿನಿ ಹೇಳಿದ್ದು…

ಹಿಜಾಬ್‌ ಧರಿಸಿ ಪೋರ್ನ್‌ ವಿಡಿಯೋ ಶೂಟಿಂಗ್‌: ನೀಲಿಚಿತ್ರ ತಾರೆಗೆ ತಾಲಿಬಾನಿಗಳಿಂದ ಕೊಲೆ ಬೆದರಿಕೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − seventeen =
Remember me
