ಬೆತುಲ್​ (ಮಧ್ಯಪ್ರದೇಶ):ಮದುಮಗಳೊಬ್ಬಳು ಟ್ರ್ಯಾಕ್ಟರ್ ಓಡಿಸಿಕೊಂಡು ಕಲ್ಯಾಣ ಮಂಟಪಕ್ಕೆ ಬಂದು ಗಮನ ಸೆಳೆದಿರುವ ಘಟನೆ ಮಧ್ಯಪ್ರದೇಶದ ಬೆತುಲ್​ನಲ್ಲಿ ನಡೆದಿದೆ.
ಮೇ. 25ರಂದು ನಡೆದ ಮದುವೆ ಸಮಾರಂಭದಲ್ಲಿ ವಧು ಟ್ರ್ಯಾಕ್ಟರ್​ ಏರಿ ಬಂದಿದ್ದಾಳೆ. ಮಧ್ಯಪ್ರದೇಶದ ಬೆತುಲ್ ಜಿಲ್ಲೆಯ ಜವ್ರಾ ಗ್ರಾಮದ ನಿವಾಸಿ ಭಾರತಿ ತಾಗ್ಡೆ ಹೀಗೆ ಟ್ರ್ಯಾಕ್ಟರ್​ ಏರಿ ಬಂದವರು . ಇದರ ವಿಡಿಯೋ ಭಾರಿ ವೈರಲ್​ ಆಗಿದ್ದು, ಹಲವಾರು ಮಂದಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಉದ್ಯಮಿ ಆನಂದ್ ಮಹೀಂದ್ರಾ ಕೂಡ ಇದನ್ನು ಮನಸಾರೆ ಕೊಂಡಾಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಆನಂದ ಮಹೀಂದ್ರಾ, ‘ವಧು ಭಾರತಿ ಡ್ರೈವಿಂಗ್ ಸ್ವರಾಜ್​​’ ಎಂದು ಟ್ವೀಟ್ ಮಾಡಿದ್ದು, Brand Makes Sense… ಎಂದು ಬರೆದುಕೊಂಡಿದ್ದಾರೆ. ಮಹೀಂದ್ರಾ ಅವರು ಹೀಗೆ ಟ್ವೀಟ್​ ಮಾಡುವುದಕ್ಕೆ ಕಾರಣ, ವಧು ಓಡಿಸಿಕೊಂಡು ಬಂದಿರುವ ಟ್ರ್ಯಾಕ್ಟರ್ ಆನಂದ್ ಮಹೀಂದ್ರಾ ಕಂಪೆನಿಗೆ ಸೇರಿದ್ದು.
ಕಳೆದ ಕೆಲ ದಿನಗಳ ಹಿಂದೆ ಯುವತಿಯೊಬ್ಬಳು ಕಲ್ಯಾಣ ಮಂಟಪಕ್ಕೆ ಕುದುರೆ ಏರಿ ಬಂದು ಎಲ್ಲರ ಗಮನ ಸೆಳೆದಿದ್ದಳು. ಈ ಘಟನೆ ಕೂಡ ಮಧ್ಯಪ್ರದೇಶದ ಬೆತುಲ್​ದಲ್ಲಿ ನಡೆದಿತ್ತು.
ವಿಡಿಯೋ ಇಲ್ಲಿದೆ ನೋಡಿ:
Watch: Bride Comes Driving Tractor To Wedding Venue In Madhya Pradeshhttps://t.co/QdMbxkLcyhpic.twitter.com/9IESQKEVQh
— NDTV (@ndtv)May 27, 2022

ಪ್ರೇಮಿಗಾಗಿ ಜೀವದ ಹಂಗುತೊರೆದು ಗಂಟೆಗಟ್ಟಲೆ ನದಿಯಲ್ಲಿ ಈಜಿದಳು: ಆತನನ್ನೇ ಮದ್ವೆಯಾಗಿ ಅರೆಸ್ಟ್​ ಆದಳು!

ಸುಂದರಿ ಸಿಕ್ಕಳೆಂದು ಐದು ಲಕ್ಷ ರೂ. ವಧುದಕ್ಷಿಣೆ ಕೊಟ್ಟರು… ಮದ್ವೆಯಾದ ಮೇಲೆ ತಿಳಿಯಿತು ಅವಳು ಇವಳಲ್ಲವೆಂದು!

ವಾಣಿಜ್ಯ ಬಳಕೆಯ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ ಇಳಿಕೆ: ಇಂದಿನ ದರ ಎಷ್ಟಿದೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 4 =
Remember me
