ಮದುವೆ ಮಂಟಪದಲ್ಲಿಯೇವರನ ಮೇಲೆ ಭಾರಿ ಸಿಟ್ಟುಮಾಡಿಕೊಂಡ ವಧುವು, ಆತನಿಗೆ ತಿನ್ನಿಸುತ್ತಿರುವ ಸಿಹಿಯನ್ನೇ ಎಸೆದಿರುವ ಘಟನೆಯೊಂದು ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್‌ ಆಗಿದೆ.ಇದರ ವಿಡಿಯೋ ಎಲ್ಲೆಡೆ ಹರಿದಾಡುತ್ತಿದ್ದು, ಪಾಪ! ಈಗಲೇ ಹೀಗಾದರೆ ಮುಂದೆ ಆ ಗಂಡನ ಗತಿಯೇನು ಎಂದು ಕಮೆಂಟಿಗರು ತಮಾಷೆ ಮಾಡುತ್ತಿದ್ದರೆ, ಪಾಪ ಮದುವೆಗೆ ಇಷ್ಟವಿಲ್ಲದ ಹಾಗೆ ಕಾಣುವ ಆ ವರನನ್ನು ಕಟ್ಟಿಕೊಂಡು ಈ ಯುವತಿಯ ಪಾಡೇನು ಎಂದು ಇನ್ನು ಕೆಲವರು ಹೇಳುತ್ತಿದ್ದಾರೆ. ಈ ಘಟನೆ ನಡೆದಿರುವುದು ಎಲ್ಲಿ ಎಂಬ ಬಗ್ಗೆ ಸರಿಯಾದ ಮಾಹಿತಿ ಇಲ್ಲ. ಒಬ್ಬೊಬ್ಬರು ಒಂದೊಂದು ಊರಿನ ಹೆಸರನ್ನು ಹೇಳುತ್ತಿದ್ದಾರೆ.
ನಿಜವಾಗಿಯೂ ವಧು ಇಷ್ಟೆಲ್ಲಾ ಕೋಪ ಮಾಡಿಕೊಂಡದ್ದು ಏಕೆ ಎಂಬ ಬಗ್ಗೆ ನಿಖರ ಕಾರಣಗಳು ಯಾರಿಗೂ ಗೊತ್ತಿಲ್ಲ. ಆದರೆ ವಿಡಿಯೋ ನೋಡಿದರೆ ತಿಳಿಯುವುದು ಇಷ್ಟೇ. ಮದುವೆ ನಡೆಯುತ್ತಿದ್ದು, ವೇದಿಕೆಯ ಮೇಲೆ ವಧು-ವರ ಇಬ್ಬರೂ ನಿಂತಿದ್ದಾರೆ. ಮದುವೆಯ ಸಂಪ್ರದಾಯದಂತೆ ವರನಿಗೆ ಸಿಹಿ ತಿನಿಸಲು ಹಿರಿಯರು ಹೇಳುತ್ತಿದ್ದಂತೆಯೇ ಮದುಮಗಳು ಸಿಹಿಯನ್ನು ತಂದು ವರನಿಗೆ ತಿನ್ನಿಸಲು ಮುಂದಾಗಿದ್ದಾಳೆ. ಆದರೆ ಯಾಕೋ ಅದನ್ನು ತಿನ್ನಲು ವರ ಹಿಂಜರಿದಿದ್ದಾನೆ. ಅಷ್ಟೇ.
ಇದರಿಂದ ಸಿಟ್ಟುಗೊಂಡ ವಧು ಅಲ್ಲಿಯೇ ಅದನ್ನು ಎಸೆದು ಕೈ ಒರೆಸಿಕೊಂಡಿದ್ದಾಳೆ. ಇದನ್ನು ಯೂಟ್ಯೂಬ್ ಇಂಡಿಯಾ ಎಂಬ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿದೆ.
ನೀವೂ ನೋಡಿ ಈ ವಿಡಿಯೋ:


A post shared by Tube indian 💀🇮🇳 (@tube.indian)

‘ಹೃದಯ ತಜ್ಞ’ ವಿಧವೆಗೆ ನೀಡಿದ ಉಡುಗೊರೆ- ಮಹಿಳೆ ಮನೆಗೆ ಬಂದದ್ದು ಸಚಿವೆಯ ನೋಟಿಸ್‌!

ವಿಜಯ್‌ ಬದುಕಿರುವ ಚಿಕ್ಕ ಆಸೆಯೂ ಕಮರಿಹೋಯ್ತು: ಅಧಿಕೃತ ಘೋಷಣೆಯೊಂದೇ ಬಾಕಿ- ನಾಳೆ ಅಂತ್ಯಕ್ರಿಯೆ

ಅವಳು ಗಂಡ- ಇವಳು ಹೆಂಡತಿ! ಏಳು ವರ್ಷ ‘ಸಂಸಾರ’ ಮಾಡಿ ಓಡಿಹೋಗಿ ಮದುವೆಯಾದ ಸ್ನೇಹಿತೆಯರು…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 − 6 =
Remember me
