ಬಿಜನೂರು (ಉತ್ತರ ಪ್ರದೇಶ):ಮದುವೆ ಎನ್ನುವುದು ಸ್ವರ್ಗದಲ್ಲಿಯೇ ಆಗುತ್ತದೆ ಎನ್ನುವ ನಾಣ್ಣುಡಿ ಇದೆ. ಈ ಭೂಮಿಯ ಮೇಲೆ ನಡೆಯುವುದು ನಿಮಿತ್ತ ಮಾತ್ರ ಎನ್ನುತ್ತಾರೆ. ಇದೇ ಕಾರಣಕ್ಕೆ ಎಷ್ಟೋ ಬಾರಿ ಗಂಡು-ಹೆಣ್ಣಿನ ಮದುವೆ ಫಿಕ್ಸ್​ ಆಗಿದ್ದರೂ ಕೊನೆಯ ಘಳಿಗೆಯಲ್ಲಿ ಮುರಿದು ಹೋಗುವುದಿದೆ.
ಇದೇ ರೀತಿಯ ಒಂದು ಘಟನೆ, ಆದರೆ ಎಲ್ಲವುಗಳಿಗಿಂತ ಭಿನ್ನ ಹಾಗೂ ಅಚ್ಚರಿ ಎನಿಸುವ ಘಟನೆಯೊಂದು ಉತ್ತರ ಪ್ರದೇಶದ ಬಿಜನೂರಿನಲ್ಲಿ ನಡೆದಿದೆ.
ಇಲ್ಲಿ ನಡೆದಿದ್ದ ಸಾಮೂಹಿಕ ವಿವಾಹದಲ್ಲಿ ಈ ಜೋಡಿಯ ಮದುವೆಯಾಗಿದೆ. ಆದರೆ ಪ್ರತ್ಯೇಕವಾಗಿ ಮದುವೆ ಮಾಡಲು ಇಚ್ಛಿಸಿದ್ದ ಎರಡೂ ಕುಟುಂಬದವರು ಮದುವೆಗೆ ವ್ಯವಸ್ಥೆ ಮಾಡಿದ್ದರು. ವ್ಯವಸ್ಥೆಯೇನೋ ಚೆನ್ನಾಗಿಯೇ ಆಗಿತ್ತು. ಮದುವೆಯ ಮುಹೂರ್ತ ಮಧ್ಯಾಹ್ನ 1.30ಕ್ಕೆ ಫಿಕ್ಸ್​ ಆಗಿತ್ತು.
ಮಧ್ಯಾಹ್ನ ಕಳೆದು, ಸಂಜೆ ಕಳೆದರೂ ವರನ ಕಡೆಯವರ ಪತ್ತೆಯೇ ಇಲ್ಲ. ಈಗ ಬರುತ್ತೇವೆ, ಆಗ ಬರುತ್ತೇವೆ, ದಾರಿಯ ಮೇಲೆ ಇದ್ದೇವೆ ಎಂದೆಲ್ಲಾ ಹೇಳುತ್ತಿದ್ದ ವರನ ಕಡೆಯವರು ರಾತ್ರಿಯಾಗುತ್ತಾ ಬಂದರೂ ಪತ್ತೆಯೇ ಇಲ್ಲ. ವಧುವಿನ ಕೋಪ ನೆತ್ತಿಗೇರಿತ್ತು, ಇತ್ತ ಆಕೆಯ ಮನೆಯವರು ಕೂಡ ಕಾದೂ ಕಾದೂ ಸುಸ್ತಾಗಿ ಹೋಗಿದ್ದರು.
ಇದನ್ನೂ ಓದಿ:ಡಾನ್ಸ್​ ಮಾಡಲು ವಧುವನ್ನು ಎಳೆದ ವರನ ಸ್ನೇಹಿತರು- ಮುಂದೆ ಆಗಬಾರದ್ದೆಲ್ಲಾ ಆಗೋಯ್ತು!
ಅಂತೂ ರಾತ್ರಿ ವರ ಮತ್ತು ಆತನ ಕುಟುಂಬದವರು ಮಂಟಪ ತಲುಪಿದರು. ವಧುವಿನ ಕಡೆಯವರಿಗೆ ಅದೆಲ್ಲಿಯ ಕೋಪ ಇತ್ತೋ ಗೊತ್ತಿಲ್ಲ. ವರನನ್ನು ಒಂದು ರೂಮಿನಲ್ಲಿ, ಆತನ ಕುಟುಂಬದವರನ್ನು ಇನ್ನೊಂದರಲ್ಲಿ ಕೂಡಿ ಹಾಕಿ ಚೆನ್ನಾಗಿ ಹಲ್ಲೆ ಮಾಡಿದ್ದಾರೆ.
ವರನ ಕಡೆಯವರು ಈ ರೀತಿ ಮಾಡುವುದಕ್ಕೂ, ವಧುವಿನ ಕಡೆಯವರು ಹಲ್ಲೆ ಮಾಡುವುದಕ್ಕೂ ಒಂದು ಕಾರಣವಿದೆ. ಅವನು ಲೇಟಾಗಿ ಬಂದದ್ದೊಂದೇ ಕಾರಣವಲ್ಲ, ಬದಲಿಗೆ ಸಾಮೂಹಿಕ ವಿವಾಹದಲ್ಲಿ ಇಬ್ಬರ ಮದುವೆಯಾದ ಮೇಲೆ ಆತನ ಮನೆಯವರು ವರದಕ್ಷಿಣೆ ಬೇಡಿಕೆ ಇಟ್ಟಿದ್ದರು. ಈ ವಿಷಯದಲ್ಲಿ ಎರಡೂ ಕುಟುಂಬದ ನಡುವೆ ಗಲಾಟೆಯಾಗಿದೆ. ವಧುವಿನ ಮನೆಯವರಿಗೆ ಬುದ್ಧಿ ಕಲಿಸಲು ವರ ರಾತ್ರಿ ಬಂದರೆ, ಅವರಿಗೆ ಬುದ್ಧಿ ಕಲಿಸಲು ಇವರು ಚೆನ್ನಾಗಿ ಹೊಡೆದಿದ್ದಾರೆ.
ಅದಾಗಲೇ ಮದುವೆಯನ್ನು ಕ್ಯಾನ್ಸಲ್​ ಮಾಡುವ ಯೋಚನೆಯನ್ನು ವಧು ಹಾಗೂ ಆಕೆಯ ಪಾಲಕರು ಮಾಡಿಯಾಗಿತ್ತು. ಆದ್ದರಿಂದ ಹಲ್ಲೆ ಮಾಡಿದ ನಂತರ ಮದುವೆ ಕ್ಯಾನ್ಸಲ್​ ಆಗಿದೆ ಎಂದು ಹೇಳಿ ವರ ಹಾಗೂ ಆತನ ಕಡೆಯವರನ್ನು ವಾಪಸ್​ ಕಳಿಸಿದ್ದಾರೆ.
ಇದೇ ವೇಳೆ, ಅದೇ ಸಿಟ್ಟಿನಲ್ಲಿ ಅದೇ ಗ್ರಾಮದ ಯುವಕನ ಜತೆ ಗ್ರಾಮಸ್ಥರ ಸಮ್ಮುಖದಲ್ಲಿ ವಧುವಿನ ಮದುವೆಯನ್ನೂ ನೆರವೇರಿಸಿದ್ದಾರೆ.
ಉಲ್ಟಾ ಹೋದ ಮದುಮಗನ ಕುರ್ತಾ ಎಳೆದ ವಧು- ಫನ್ನಿ ವಿಡಿಯೋ ವೈರಲ್​

ನಾಯಿಗೆ ಹಾಕಲು ರೊಟ್ಟಿ ಮಾಡಿಲ್ಲವೆಂದು ಅಕ್ಕನನ್ನೇ ಗುಂಡಿಕ್ಕಿ ಕೊಂದ ತಮ್ಮ!

ಮದುವೆ ಮನೆಯಲ್ಲಿಯೇ ವರನ ಬ್ಯಾಟಿಂಗ್​- ವಧುವಿನ ಬೌಲಿಂಗ್​: ವಿಡಿಯೋ ವೈರಲ್​

ಕ್ಲಾಸ್​ರೂಂನಲ್ಲಿ ವಿವಾಹ ಪ್ರಕರಣಕ್ಕೆ ಟ್ವಿಸ್ಟ್​- ಮದ್ವೆಯಾಯ್ತು ಅಮಾನ್ಯ: ಮಗಳಿಗೆ ಮನೆಯಲ್ಲಿ ನೋ ಎಂಟ್ರಿ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seventeen − 1 =
Remember me
