ಮದುವೆ ಮನೆಗಳಲ್ಲಿಹಲವಾರು ಬಾರಿ ಹಾಸ್ಯದ ಘಟನೆಗಳು ನಡೆಯುತ್ತಲೇ ಇರುತ್ತವೆ. ಕೆಲವೊಮ್ಮೆ ಅದು ಮದುಮಕ್ಕಳ ಮನೆಯವರಿಗಷ್ಟೇ ತಿಳಿದರೆ, ಎಷ್ಟೋ ಬಾರಿ ವಧು-ವರರಿಗೆ ಮಾತ್ರ ಅದು ಅರಿವಾಗಿರುತ್ತದೆ, ಬಹಿರಂಗವಾಗುವುದೇ ಇಲ್ಲ.
ಆದರೆ ಮದುಮಕ್ಕಳ ಅದೃಷ್ಟ ಸರಿಯಿಲ್ಲದಿದ್ದರೆ ಅದು ವೈರಲ್​ ಆಗುವುದು ಈಗಿನ ಟ್ರೆಂಡ್​. ಅಂಥದ್ದೇ ಒಂದು ಫನ್ನಿ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ.
सच्ची जीवनसाथी आपको हमेशा सही राह दिखाती हैं 😅😅.(Wait till 14th Second)pic.twitter.com/yRJxM2jT4i
— Dipanshu Kabra (@ipskabra)December 14, 2020

ಅಷ್ಟಕ್ಕೂ ಇದೇನು ದೊಡ್ಡ ವಿಷಯವೂ ಅಲ್ಲ, ಅಥವಾ ಮದುಮಕ್ಕಳು ಮುಜುಗರ ಪಡುವ ಸಂಗತಿಯೂ ಅಲ್ಲ. ಸಾಮಾನ್ಯವಾಗಿ ಮದುವೆ ಮನೆಗಳಲ್ಲಿ ಇದು ಆಗುತ್ತಲೇ ಇರುತ್ತದೆ. ಆದರೆ ಇಲ್ಲಿ ನಡೆದಿರುವುದನ್ನು ಮಾತ್ರ ಯಾರೋ ಶೇರ್​ ಮಾಡಿಕೊಂಡಿರುವ ಕಾರಣ, ಫನ್ನಿ ಎನಿಸಿದೆ.ಅಷ್ಟಕ್ಕೂ ಇಲ್ಲಿ ಆಗಿದ್ದೇನೆಂದರೆ ಗುರುದ್ವಾರದಲ್ಲಿ ಮದುವೆ ನಡೆಯುತ್ತಿದೆ. ಧಾರ್ಮಿಕ ವಿಧಿವಿಧಾನಗಳು ನಡೆದ ನಂತರ ಮದುಮಕ್ಕಳಿಗೆ ಸುತ್ತುವರಿಯಲು ಹೇಳಲಾಗುತ್ತದೆ. ಆಗ ಇಬ್ಬರೂ ಏಳುತ್ತಾರೆ. ಆಗ ವರ ಉಲ್ಟಾ ಸುತ್ತುಹೊಡೆಯಲು ರೆಡಿಯಾಗುತ್ತಾನೆ. ಆಗ ತತ್​ಕ್ಷಣ ಎಚ್ಚರಿಸಿದ ವಧು ಆತನ ಕುರ್ತಾ ಎಳೆಯುತ್ತಾಳೆ.
ತತ್​ಕ್ಷಣ ಎಚ್ಚೆತ್ತುಕೊಂಡ ವರ, ವಧುವಿನ ಹಿಂದೆ ಬರುತ್ತಾನೆ. ನಂತರ ವಧು ಆತನಿಗೆ ಮುಂದೆ ಹೋಗಲು ಅನುವು ಮಾಡಿಕೊಟ್ಟು, ತಾನು ಹಿಂದೆ ಹೋಗುತ್ತಾಳೆ. ಯಾರಿಗೂ ತಿಳಿಯದಂತೆ ವಧು ಆ ಕ್ಷಣದಲ್ಲಿ ವರನನ್ನು ರಕ್ಷಿಸುತ್ತಾಳೆ, ತಾನು ಮಾತ್ರ ಏನೂ ಗೊತ್ತಿಲ್ಲದಂತೆ ತಲೆ ತಗ್ಗಿಸಿಕೊಂಡೇ ಇದ್ದಾಳೆ. ವರನಿಗೆ ಮಾತ್ರ ತಾನು ಮಾಡಿದ್ದು ತಪ್ಪಾಗಿದ್ದು ಗೊತ್ತಾಗಿ ಸದ್ದಿಲ್ಲದೇ ವಧುವಿನ ಹಿಂದೆ ಬರುತ್ತಾನೆ.
ಆದರೆ ಯಾರೋ ಕಿಲಾಡಿಗಳು ಈ ವಿಡಿಯೋವನ್ನು ಶೇರ್​ ಮಾಡಿದ್ದು, ಅದೀಗ ಭಾರಿ ವೈರಲ್​ ಆಗಿದೆ. ನಿಜವಾದ ಸಂಗಾತಿ ಸದಾ ಸರಿಯಾದ ಮಾರ್ಗವನ್ನೇ ತೋರುತ್ತಾಳೆ ಎಂಬ ಕ್ಯಾಪ್ಷನ್​ ಹಾಕಲಾಗಿದ್ದು, ಇದಕ್ಕೆ ಸಹಸ್ರಾರು ಮಂದಿ ಕಮೆಂಟ್​ ಮಾಡಿದ್ದಾರೆ.
ಶ್ರೀರಾಮಚಂದ್ರ ಯಾವ ಪಕ್ಷಕ್ಕೆ ಸೇರಿದ್ದು ಎಂದು ತಿಳಿಸಿದ ಮಾಜಿ ಸಿಎಂ ಅಖಿಲೇಶ್​!

ಈಗ ವಿರೋಧಿಸುತ್ತಿರುವ ಕೃಷಿ ಕಾಯ್ದೆ ಬೇಕೆಂದು ಅಂದು ಸರ್ಕಾರದ ವಿರುದ್ಧ ತಿರುಗಿಬಿದ್ದಿದ್ದ ಇದೇ ರೈತರು!

ತೆಂಗಿನಕಾಯಿ ಕೀಳಲು 55 ಅಡಿ ಮರವೇರಿದ, ಗಂಟೆ ಕಳೆದರೂ ಏರಿದವನ ಪತ್ತೆಯೇ ಇಲ್ಲ; ಆಗಿದ್ದೇನು?

https://www.vijayavani.net/s-nyayadevate-14-12-2020/
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − seven =
Remember me
