ಛತ್ತರಪುರ್ (ಮಧ್ಯಪ್ರದೇಶ):ಮದುವೆಯಾಗುವವರೆಗೂ ಸುಮ್ಮನಿದ್ದು ನಂತರ ಪತಿಗೆ ಕೈಕೊಟ್ಟ ಯುವತಿಯೊಬ್ಬಳು ಪ್ರಿಯಕರನ ಜತೆ ಓಡಿಹೋಗಿರುವ ಘಟನೆ ಮಧ್ಯಪ್ರದೇಶದ ಛತ್ತರಪುರ್​ನಲ್ಲಿ ನಡೆದಿದೆ. ಓಡಿಹೋಗಿರುವುದು ಮಾತ್ರವಲ್ಲದೇ ಸುಮಾರು ಐದು ಲಕ್ಷ ರೂಪಾಯಿ ಬೆಲೆ ಬಾಳು ಒಡವೆ ಮತ್ತು ಹಣವನ್ನೂ ತೆಗೆದುಕೊಂಡು ಪರಾರಿಯಾಗಿದ್ದಾಳೆ!
ತವರು ಮನೆಗೆ ಹೋಗಿ ಬರುವುದಾಗಿ ಹೇಳಿದಾಕೆಗಾಗಿ ಪತಿ ಕಾಯುತ್ತ ಕುಳಿತಿದ್ದಾನೆ. ಎಷ್ಟು ದಿನವಾದರೂ ಬರದಾಗ ವಿಷಯ ಬೆಳಕಿಗೆ ಬಂದಿದೆ. ಅಷ್ಟೊತ್ತಿಗಾಗಲೇ ಈ ಯುವತಿ ಪರಾರಿಯಾಗಿದ್ದು, ಪೊಲೀಸ್​ ಠಾಣೆಯಲ್ಲಿ ದೂರು ದಾಖಲಾಗಿದೆ.
ಹೀಗೆ ಪರಾರಿಯಾಗಿರುವ ಯುವತಿಯ ಹೆಸರು ಮೂರ್ತಿ ರೆಕ್ವಾರ್​. 20 ವರ್ಷದ ಈ ಯುವತಿಯ ಮದುವೆ ಕಳೆದ ಡಿಸೆಂಬರ್​ನಲ್ಲಿ ರಾಹುಲ್​ ಎಂಬ ಯುವಕನ ಜತೆ ಆಗಿತ್ತು. ಮದುವೆಯಾಗುವವರೆಗೂ ತನ್ನ ಪ್ರೇಮದ ವಿಷಯವನ್ನು ಬಚ್ಚಿಟ್ಟಿದ್ದಳೋ ಅಥವಾ ಮನೆಯವರು ಒತ್ತಾಯದಿಂದ ಈ ಮದುವೆ ಮಾಡಿದ್ದರೋ ಗೊತ್ತಿಲ್ಲ. ಒಟ್ಟಿನಲ್ಲಿ ಮದುವೆಯನ್ನು ಶಾಸ್ತ್ರೋಕ್ತವಾಗಿ ಮಾಡಿಕೊಂಡಿದ್ದಾಳೆ ಯುವತಿ.
ನಂತರ ಸಂಪ್ರದಾಯದಂತೆ ಮದುಮಗಳನ್ನು ಮದುವೆಯಾದ 18ನೇ ದಿನಕ್ಕೆ ತವರಿಗೆ ಕಳಿಸಬೇಕು. ಮೊದಲೇ ಪ್ಲ್ಯಾನ್​ ಮಾಡಿಕೊಂಡು ಇಟ್ಟುಕೊಂಡಿದ್ದ ಮೂರ್ತಿ ರೆಕ್ವಾರ್​, ತವರು ಮನೆಗೆ ಹೋಗಿದ್ದಾರೆ. ಅಲ್ಲಿಂದ ವಾಪಸ್ ಗಂಡನ ಮನೆಗೆ ವಾಪಸ್ ತೆರಳುವುದಾಗಿ ಹೇಳಿ ಹೊರಟಿದ್ದಾಳೆ.
ಇತ್ತ ಹೊಸ ಪತ್ನಿಗಾಗಿ ಕಾದುಕುಳಿತಿದ್ದ ರಾಹುಲ್​ ಆಕೆಗಾಗಿ ಕಾದು ಕಾದು ಸುಸ್ತಾಗಿದ್ದಾನೆ. ನಂತರ ನೇರವಾಗಿ ಪತ್ನಿಗೆ ತವರಿಗೆ ಹೋಗಿದ್ದಾನೆ. ಪತಿಯ ಮನೆಗೆ ಹೋದಾಕೆ ಅಲ್ಲಿಯೂ ಹೋಗದುದ್ದನ್ನು ಕಂಡು ಎರಡೂ ಕುಟುಂಬದವರಿಗೆ ದಿಗಿಲಾಗಿದೆ.
ಕೇಸ್​ ಪೊಲೀಸ್​ ಠಾಣೆ ಮೆಟ್ಟಿಲೇರಿದೆ. ತನಿಖೆ ಕೈಗೊಂಡ ಪೊಲೀಸರಿಗೆ ಯುವತಿ ಅದೇ ಗ್ರಾಮದ ಭಜ್ಜು ಯಾದವ್ ಎಂಬ ಪ್ರಿಯಕರನ ಜತೆ ಹೋಗಿರುವುದು ತಿಳಿದಿದೆ. ಹೋಗುವಾಗ 5 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣ ಮತ್ತು 20 ಸಾವಿರ ರೂ. ನಗದು ತೆಗೆದುಕೊಂಡು ಹೋಗಿರುವುದು ತಿಳಿದಿದೆ. ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
VIDEO: ಬೆಲ್ಲಿ ಡಾನ್ಸ್​ ಹರಿಬಿಟ್ಟು ಅಭಿಮಾನಿಗಳ ಹುಚ್ಚೆಬ್ಬಿಸಿದ ನಟಿ ಜಾಹ್ನವಿ ಕಪೂರ್​

ನಾನು ಅರ್ಜಿ ಹಾಕಿರಲಿಲ್ಲ, ಸೋತಿದ್ರೆ ಮಂತ್ರಿಯಾಗ್ತಿದ್ದೆಯೇನೋ- ರೇಣುಕಾಚಾರ್ಯ ಕಣ್ಣೀರು

ಗಂಡನ ಹಿಂಸೆಯಿಂದಾಗಿ ತವರು ಸೇರಿ ವಿವಾಹಿತನ ಪ್ರೇಮಪಾಶಕ್ಕೆ ಸಿಲುಕಿಬಿಟ್ಟಿದ್ದೇನೆ: ಪ್ಲೀಸ್​ ಪರಿಹಾರ ಹೇಳಿ

ನನ್ನಂತೆ ಹೊಳೆಯಬೇಕೆ? ಹಾಗಿದ್ದರೆ ಹೀಗೆ ಮಾಡಿ ಎಂದಳು ಈ ಸುಂದರಿ: ಓದಿ ‘ವ್ಯಾಕ್’​ ಅನ್ನಬೇಡಿ!

ಕೆಜಿಎಫ್ 2 ಟೀಸರ್​ ಬಿಡುಗಡೆ ಬೆನ್ನಲ್ಲೇ ಯಶ್​ಗೆ ಬಿಗ್​ ಶಾಕ್​- ನೋಟಿಸ್​ ನೀಡಿದ ಆರೋಗ್ಯ ಇಲಾಖೆ!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:thirteen + two =
Remember me
