ಭುವನೇಶ್ವರ: ಅಮ್ಮನ ಸೆರಗನ್ನು ಹಿಡಿದು ಬೆಳೆದು, ಅಪ್ಪನ ಮಮತೆಯ ರಸವನ್ನು ಉಂಡು 20- 25 ವರ್ಷ ಅಪ್ಪ- ಅಮ್ಮನ ಮುದ್ದು ಮಗಳಾಗಿ ಬೆಳೆದು ಏಕಾಏಕಿ ಪರಿಚಯವೇ ಇಲ್ಲದ ಗಂಡನ ಮನೆಯನ್ನು ಸೇರಬೇಕು ಎನ್ನುವಾಗ ಎಂಥ ಯುವತಿಗಾದರೂ ಅದೊಂದು ರೀತಿಯ ಆತಂಕವೇ. ಪತಿ ಹೇಗೋ, ಆತನ ಮನೆಯವರು ಹೇಗೋ, ಅಲ್ಲಿಯ ಪದ್ಧತಿ, ಸಂಸ್ಕಾರಗಳು ಹೇಗೋ, ಅತ್ತೆ ಹೇಗಿದ್ದಾಳೋ…
ಹೀಗೆ ನೂರು, ಸಾವಿರ ಪ್ರಶ್ನೆಗಳು ತಲೆಯಲ್ಲಿ ಗಿರಕಿ ಹೊಡೆಯುತ್ತಲೇ ತವರನ್ನು ಬಿಟ್ಟು ಗಂಡನ ಮನೆಗೆ ಸೇರುವಾಗ ಬಹುತೇಕ ಯುವತಿಯರದಲ್ಲಿ ದುಗುಡ ಕಾಡುವುದು ಸಹಜವೇ.
ಇದೇ ಕಾರಣಕ್ಕೆ ವಿವಾಹ ಕಾರ್ಯಕ್ರಮಗಳಲ್ಲಿ ಮದುಮಗನಿಗೆ ವಧುವನ್ನು ಅಪ್ಪ- ಅಮ್ಮ ಒಪ್ಪಿಸಿ ಬೀಳ್ಕೊಡುವಾಗ (ಬಿದಾಯಿ) ಎಷ್ಟೋ ಹೆಣ್ಣುಮಕ್ಕಳು ಬಿಕ್ಕಿ ಬಿಕ್ಕಿ ಅಳುವುದುಂಟು. ಆದರೆ ಇದು ಕೆಲವು ದಿನಗಳು ಮಾತ್ರ. ನಂತರ ಗಂಡನ ಮನೆಯಲ್ಲಿ ಹೊಂದಾಣಿಕೆ ಮಾಡಿಕೊಂಡು ತವರನ್ನು ಕಷ್ಟಪಟ್ಟು ಮರೆಯುವುದು ಪ್ರತಿ ಹೆಣ್ಣಿಗೂ ದೇವರು ಕೊಟ್ಟ ವರವೇ.
ಆದರೆ ಬಿದಾಯಿ ಸಮಯದಲ್ಲಿ ತವರನ್ನು ಬಿಟ್ಟುಹೋಗಲಾಗದ ವಧುವೊಬ್ಬಳ ಪ್ರಾಣಕ್ಕೆ ಇದೇ ಕಂಟಕವಾಗಿ ಹೋಗಿದೆ. ಅಪ್ಪನಿಲ್ಲದ ಈ ಯುವತಿ ಅಮ್ಮನನ್ನು ಅಪ್ಪಿಕೊಂಡು ಬಿಕ್ಕಿ ಬಿಕ್ಕಿ ವಧುವಿಗೆ ಹೃದಯಾಘಾತವಾಗಿ ಅಲ್ಲಿಯೇ ಮೃತಪಟ್ಟಿದ್ದಾಳೆ. ಗಂಡನ ಮನೆಗೆ ಸೇರಬೇಕಾದವಳು ಮಸಣ ಸೇರಿದ್ದಾಳೆ!
ಇಂಥದ್ದೊಂದು ದುರ್ಘಟನೆ ನಡೆದಿರುವುದು ಒಡಿಶದ ಸೋನೆಪುರ ಜಿಲ್ಲೆಯ ಜುಲುಂದಾ ಗ್ರಾಮದಲ್ಲಿ. ಗುಪ್ತೇಶ್ವರಿ ಸಾಹು ಅಲಿಯಾಸ್ ರೋಸಿ ಮೃತಪಟ್ಟ ಮಹಿಳೆ.
ಬಾಲಂಗೀರ್ ಜಿಲ್ಲೆಯ ತೆತೆಲ್ಗಾಂವ್ ಗ್ರಾಮದ ಬಿಸಿಕೇಶನ್ ಎಂಬ ಯುವಕನ ಜತೆ ಈಕೆಯ ವಿವಾಹವಾಗಿತ್ತು. ವಿವಾಹ ಮುಗಿದ ಬಳಿಕ ಹೆಣ್ಣೊಪ್ಪಿಸುವ ಕಾರ್ಯ ನಡೆದಿತ್ತು. ಆ ಸಮಯದಲ್ಲಿ ಮಗಳನ್ನು ಕಳುಹಿಸಿಕೊಡಲು ಕುಟುಂಬದವರು ಸಿದ್ಧತೆ ನಡೆಸಿದ್ದರು. ಆದರೆ ಈ ಮುದ್ದುಮಗಳಿಗೆ ಆಗುತ್ತಿದ್ದ ಸಂಕಟ ಅಷ್ಟಿಷ್ಟಲ್ಲ. ಬಿಕ್ಕಿಬಿಕ್ಕಿ ಅತ್ತಿದ್ದಾಳೆ. ಇದೇ ಸಮಯದಲ್ಲಿ ಪ್ರಜ್ಞೆ ಕಳೆದುಕೊಂಡು ನೆಲದ ಮೇಲೆ ಬಿದ್ದಿದ್ದಾಳೆ. ಎಲ್ಲರೂ ಆಕೆಯ ಮುಖಕ್ಕೆ ನೀರು ಸಿಂಪಡಿಸಿ ಆಕೆಯನ್ನು ಉಪಚರಿಸಿದರೂ ಅದಾಗಲೇ ಆಕೆಯ ಉಸಿರು ನಿಂತಿತ್ತು.
ಕೂಡಲೇ ಆಸ್ಪತ್ರೆಗೆ ಒಯ್ದರೂ ಅವಳು ಮೃತಪಟ್ಟಿರುವುದಾಗಿ ವೈದ್ಯರು ಹೋಗಿದ್ದರು.ಈಕೆಯ ತಂದೆ ಕೆಲ ತಿಂಗಳ ಹಿಂದೆ ಮೃತಪಟ್ಟಿದ್ದರಿಂದ ಆಘಾತಕ್ಕೊಳಗಾಗಿದ್ದಳು ರೋಸಿ. ಇದೇ ಸಂದರ್ಭದಲ್ಲಿ ಅವಳ ವಿವಾಹವನ್ನು ಸೋದರಮಾವನ ಕುಟುಂಬದವರು ಹಾಗೂ ಕೆಲ ಸಾಮಾಜಿಕ ಕಾರ್ಯಕರ್ತರು ನಡೆಸಿದ್ದರು.
ಪಶ್ಚಿಮ ಬಂಗಾಳದಲ್ಲಿ ಬಾಂಬ್​ ಬ್ಲಾಸ್ಟ್​: ಟಿಎಂಸಿ ಕಾರ್ಯಕರ್ತರ ಮನೆಯಲ್ಲಿಯೇ ತಯಾರು?

ಕಷ್ಟಪಟ್ಟು ಓದಿಸಿದ ಮಗಳು ಬೇರೆ ಜಾತಿಯವನನ್ನು ಕಟ್ಟಿಕೊಳ್ತೇನೆ ಅಂತಿದ್ದಾಳೆ… ಸತ್ತೋಗೋಣ ಎನಿಸ್ತಿದೆ… ಏನು ಮಾಡಲ?

ಕಾರ್ಯಕ್ರಮದಲ್ಲಿ ಕುಸಿದುಬಿದ್ದ ಸಂಸದೆ ಸಾಧ್ವಿ ಪ್ರಜ್ಞಾ ಸಿಂಗ್: ವಿಮಾನದ ಮೂಲಕ ಆಸ್ಪತ್ರೆಗೆ ದಾಖಲು

ನಾನು ಸೇಫ್​, ನಾನು ಸೇಫ್​- ಜಿಗಿಜಿಗಿದು ಕುಪ್ಪಳಿಸಿದ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
