ಜಬ್ಪುರ್‌ (ಒಡಿಶಾ):ಇತ್ತೀಚಿನ ದಿನಗಳಲ್ಲಿ ಚಿತ್ರ- ವಿಚಿತ್ರ ಕಾರಣಗಳಿಗೆ ಮದುವೆಗಳು ಮುರಿಯುತ್ತಿರುವುದು ವರದಿಯಾಗುತ್ತಿದೆ. ಕನ್ನಡಕವಿಲ್ಲದೇ ವರ ಓದಲಾರ ಎಂದು ವಧು ಮದುವೆಯನ್ನೇ ಕ್ಯಾನ್ಸಲ್‌ ಮಾಡಿದ್ದ ಘಟನೆ ನಿನ್ನೆಯಷ್ಟೇ ನಡೆದಿದೆ. ಅದರ ನಡುವೆಯೇ ಈಗ ಒಡಿಶಾದ ಜಬ್ಪರ್‌ದಲ್ಲಿ ಮಟನ್‌ ಊಟಕ್ಕಾಗಿ ಮದುವೆ ಮುರಿದಿರುವುದ ಮಾತ್ರವಲ್ಲದೇ ವರಮಹಾಶಯ ಬೇರೊಬ್ಬಳಿಗೆ ತಾಳಿ ಕಟ್ಟಿದ್ದಾನೆ!
ಮನತಿರಾ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ರಮಾಕಾಂತ್ ಪತ್ರಾ ಎಂಬ ವರನ ಮದುವೆ ಇದಾಗಿತ್ತು. ಇನ್ನೇನು ಮದುವೆ ಶಾಸ್ತ್ರ ನಡೆಯಬೇಕಿತ್ತು. ಅದಕ್ಕೂ ಮುನ್ನ ಔತಣ ಕೂಟವಿತ್ತು. ಈ ಕೂಟದಲ್ಲಿ ಮಟನ್‌ ಊಟ ರೆಡಿ ಮಾಡುವಂತೆ ವರನ ಕಡೆಯವರು ವಧುವಿನ ಕುಟುಂಬಸ್ಥರಿಗೆ ಹೇಳಿದ್ದರು. ಆದರೆ ಕೆಲವು ಕಾರಣಗಳಿಂದ ವಧುವಿನ ಮನೆಯವರಿಗೆ ಅದು ಸಾಧ್ಯವಾಗಿರಲಿಲ್ಲ. ಊಟದಲ್ಲಿ ಮಟನ್‌ ಇಲ್ಲದ್ದನ್ನು ಕಂಡ ವರ ಅಲ್ಲಿಯೇ ಮದುವೆ ಕ್ಯಾನ್ಸಲ್‌ ಮಾಡಿದ್ದಾನೆ.
ವಧುವಿನ ಕಡೆಯವರು ಎಷ್ಟು ಮನವಿ ಮಾಡಿಕೊಂಡರೂ ಕೇಳದ ಆತ ಅಲ್ಲಿಂದ ಹೊರಟೇ ಹೋಗಿದ್ದಾನೆ., ಬಿಲ್‌ಕುಲ್‌ ಈ ಮದುವೆ ಸಾಧ್ಯವಿಲ್ಲ ಎಂದಿದ್ದಾನೆ. ನಂತರ ಅದೇ ಗ್ರಾಮದಲ್ಲಿ ಇರುವ ಸಂಬಂಧಿಕ ಮನೆಯಲ್ಲಿ ವರನ ಕಡೆಯವರು ಉಳಿದುಕೊಂಡಿದ್ದಾರೆ. ಸಂಬಂಧಿಕರು ಕೂಡ ಅವನ ನಿರ್ಧಾರಕ್ಕೆ ಭೇಷ್‌ ಎಂದಿದ್ದಾರೆ. ಮಾತ್ರವಲ್ಲದೇ ಹೇಗೋ ಮದುಮಗ, ಮದುವೆ ಮಾಡಿಕೊಳ್ಳಲು ಬಂದಾಗಿದೆ, ಕುಟುಂಬಸ್ಥರೂ ಇದ್ದಾರೆ, ಇನ್ಯಾಕೆ ತಡ ಎಂದು ಗ್ರಾಮದ ಹುಡುಗಿಯೊಬ್ಬಳನ್ನು ಮದುವೆಯಾಗಲು ಹೇಳಿದ್ದಾರೆ. ಅದಕ್ಕೆ ಒಪ್ಪಿದ ವರ ಹಾಗೂ ಆತನ ಪಾಲಕರು ಮದುವೆಗೆ ಸಿದ್ಧತೆ ನಡೆಸಿದ್ದಾರೆ, ವರ ಆಕೆಗೆ ತಾಳಿ ಕಟ್ಟಿದ್ದಾನೆ!
ಆದರೆ ಈ ಬಗ್ಗೆ ತಮಗೆ ಯಾವುದೇ ದೂರು ಬಂದಿಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಲವರ್‌ ಜತೆ ಓಡಿಹೋಗಿದ್ದಕ್ಕೆ ಜೈ ಎಂದ ಕೋರ್ಟ್‌- ಆದೇಶ ಕೇಳಿ ಸುಸ್ತಾದ ಗುಟ್ಕಾಪ್ರಿಯ ಪತಿ!

ಐಟಿ ಕ್ಷೇತ್ರದ ದಿಗ್ಗಜನ ದುರಂತ ಅಂತ್ಯ: ವಿಶ್ವದ ಮೊದಲ ಆ್ಯಂಟಿವೈರಸ್‌ ಜನಕ ಜೈಲಿನಲ್ಲಿ ಆತ್ಮಹತ್ಯೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
