ಡೆಹ್ರಾಡೂನ್:ಜನರ ಓಡಾಟಕ್ಕೆ ಎಷ್ಟೋ ಕಡೆ ಸರಿಯಾದ ರಸ್ತೆಗಳೇ ಇಲ್ಲ, ಇನ್ನು ಮೇಲ್ಸೆತುವೆ ಮಾತಂತೂ ಬಲುದೂರವೇ. ಆದರೆ ಉತ್ತರಾಖಂಡದಲ್ಲಿ ಚಿಕ್ಕ ಪ್ರಾಣಿಗಳು, ಹಾವುಗಳು ಹಾಗೂ ಸರಿಸೃಪಗಳು ನಿರಾತಂಕವಾಗಿ ಓಡಾಡಲು ಮೇಲ್ಸೇತುವೆ ನಿರ್ಮಿಸಲಾಗಿದೆ.
.ಪ್ರಾಣಿಗಳು ಸುಗಮವಾಗಿ ರಸ್ತೆ ದಾಟಲು ಅನುಕೂಲವಾಗುವಂತೆ ಅಮೆರಿಕ, ಕೀನ್ಯಾ, ಸಿಂಗಪುರ ಸೇರಿದಂತೆ ಹಲವು ದೇಶಗಳಲ್ಲೂ ಮೇಲ್ಸೇತುವೆ ನಿರ್ಮಾಣ ಮಾಡಲಾಗಿದೆ. ಅದೇ ಮಾದರಿಯಲ್ಲಿ ಇಲ್ಲಿಯೂ ನಿರ್ಮಿಸಲಾಗಿದೆ.
ಜಗತ್ಪ್ರಸಿದ್ಧ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಈ ಸೇತುವೆ ನಿರ್ಮಿಸಲಾಗಿದ್ದು, ಇದೀಗ ಅಪರೂಪದ ಪ್ರಾಣಿಗಳ ಓಡಾಟದ ಪರಿಸರಸ್ನೇಹಿ ಸೇತುವೆ ಎನಿಸಿದೆ. ಈ ರಾಷ್ಟ್ರೀಯ ಉದ್ಯಾನ ಹಾದುಹೋಗುವ ಕಾಲಂಧುಂಗಿ-ನೈನಿತಾಲ್ (ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 109) ಹೆದ್ದಾರಿಯಲ್ಲಿ ರಸ್ತೆ ದಾಟುವಾಗ ವಾಹನಗಳ ಚಕ್ರಗಳಿಗೆ ಸಿಲುಕಿ ಚಿಕ್ಕಪ್ರಾಣಿಗಳು ಸಾಯುತ್ತಿರುವ ಹಿನ್ನೆಲೆಯಲ್ಲಿ ಇಂಥದ್ದೊಂದು ಸೇತುವೆ ನಿರ್ಮಾಣ ಮಾಡಲಾಗಿದೆ.
ಕಾಡಿನೊಳಗೆ ಹಾದು ಹೋಗಿರುವ ಹೆದ್ದಾರಿಯ ಅಕ್ಕಪಕ್ಕದಲ್ಲಿಯೇ ದಟ್ಟ ಕಾಡುಗಳಿವೆ. ಪ್ರಾಣಿಗಳ ನಿಯಮಿತ ಓಡಾಟ ಸ್ಥಳದಲ್ಲಿ ರಸ್ತೆ ಬಂದ ಕಾರಣ ಅವುಗಳ ನಿತ್ಯದ ಬದುಕಿಗೂ ತೊಂದರೆಯಾಗಿತ್ತು. ವಾಹನಗಳಿಗೆ ಸಿಕ್ಕಿ ಅನೇಕ ಪ್ರಾಣಿಗಳು ಸಾಯುತ್ತಿವೆ. ಈ ಹಿನ್ನೆಲೆಯಲ್ಲಿ ಇಂಥದ್ದೊಂದು ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅರಣ್ಯ ಇಲಾಖೆ ಹೇಳಿದೆ.
ಇದನ್ನೂ ಓದಿ:ನನ್ನ ಮಗಳಿಗೆ ಅವಳ ಮಾಜಿ ಬಾಯ್​ಫ್ರೆಂಡ್​ ಕಿರುಕುಳ ಕೊಡುತ್ತಿದ್ದಾನೆ- ಕಾನೂನಿನಡಿ ಪರಿಹಾರವಿದೆಯೆ?
520 ಚಕಿಮೀ ಇರುವ ಈ ರಾಷ್ಟ್ರೀಯ ಉದ್ಯಾನದಲ್ಲಿ ಜೀವವೈವಿಧ್ಯ ಹೇರಳವಾಗಿದೆ. ಹುಲಿ, ಚಿರತೆ, ಆನೆ, ಸರಿಸೃಪಗಳಿರುವ ಕಾಡಿಗೆ ಈಚೆಗೆ ಘೇಂಡಾಮೃಗಗಳನ್ನು ಬಿಡಲಾಗಿದೆ. ಈ ಉದ್ಯಾನದಲ್ಲಿ ನಾಗರಹಾವು, ಹೆಬ್ಬಾವು, ಕೊಳಕುಮಂಡಲ, ಹಸಿರುಹಾವು ಸೇರಿದಂತೆ ಹಲವು ಬಗೆಯ ಹಾವುಗಳು ಗಮನಾರ್ಹ ಸಂಖ್ಯೆಯಲ್ಲಿವೆ.
ದೊಡ್ಡ ಪ್ರಾಣಿಗಳಾದರೆ ದೂರದಿಂದಲೇ ನೋಡಿ ವಾಹನವನ್ನು ನಿಲ್ಲಿಸಬಹುದು ಆದರೆ ಸರಿಸೃಪದಂತಹ ಸಣ್ಣ ಪ್ರಾಣಿಗಳನ್ನು ಸಂಚಾರದ ವೇಳೆ ಗಮನಿಸುವುದು ಕಷ್ಟ ಈ ನಿಟ್ಟಿನಲ್ಲಿ ಅವುಗಳ ರಕ್ಷಣೆಗೆ ಮೇಲುಸೇತುವೆ ಹೆಚ್ಚು ಪೂರಕವಾಗಿದೆ ಎಂದು ರಾಮನಗರ ವಿಭಾಗೀಯ ಅರಣ್ಯ ಅಧಿಕಾರಿ (ಡಿಎಫ್​ಒ) ಚಂದ್ರಶೇಖರ್ ಜೋಶಿ ಹೇಳಿದ್ದಾರೆ.
10 ದಿನಗಳ ಅವಧಿಯಲ್ಲಿ 5 ಅಡಿ ಅಗಲ, 40 ಅಡಿ ಎತ್ತರ ಮತ್ತು 90 ಅಡಿ ಉದ್ದದ ಮೇಲುಸೇತುವೆ ನಿರ್ಮಾಣವಾಗಿದೆ. ಬಿದಿರು, ಸೆಣಬು ಮತ್ತು ಹುಲ್ಲನ್ನು ಬಳಸಲಾಗಿದೆ. ಈ ಸೇತುವೆಯ ನಿರ್ಮಾಣಕ್ಕೆ 2 ಲಕ್ಷ ರೂಪಾಯಿ ಖರ್ಚು ಮಾಡಲಾಗಿದೆ. ಸರಿಸೃಪಗಳ ರಕ್ಷಣೆ ಮಾಡುವ ನಿಟ್ಟಿನಲ್ಲಿ ಸ್ಥಳೀಯ ಗುತ್ತಿಗೆದಾರರು ಕೈ ಜೋಡಿಸಿದ್ದಾರೆ. ಪ್ರಾಣಿಗಳ ಚಲನವಲನವನ್ನು ಗಮನಿಸಲು ಸೇತುವೆಯ ಎರಡೂ ಬದಿಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

ಡಿಸೆಂಬರ್​ನಲ್ಲಿ 8 ದಿನ ಕರ್ನಾಟಕದಲ್ಲಿ ಬ್ಯಾಂಕ್​ ರಜೆ- ಇಲ್ಲಿದೆ ವಿವರ

ಅಮ್ಮಾ ಗ್ಯಾಂಗ್​ರೇಪ್​ ಆಯ್ತು ಎಂದ್ಳು 14ರ ಬಾಲೆ: ಸತ್ಯ ಗೊತ್ತಾಗಿ ಮೂರ್ಛೆಹೋದ ಪಾಲಕರು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:4 × 4 =
Remember me
