ಲಂಡನ್‌:ನಿಜವಾಗಿಯೂ ಏಲಿಯನ್‌ ಎನ್ನುವುದು ಇದೆಯೋ ಅಥವಾ ಅದು ಕಾಲ್ಪನಿಕವೋ ಎಂದು ಇಡೀ ಜಗತ್ತಿನ ಸಂಶೋಧಕರು ಪತ್ತೆ ಹಚ್ಚುತ್ತಿರುವ ನಡುವೆಯೇ ನಟಿಯೂ ಆಗಿರುವ ಬ್ರಿಟಿಷ್‌ ಮಹಿಳೆಯೊಬ್ಬರು ತೀರಾ ಅಚ್ಚರಿ ಹಾಗೂ ವಿಚಿತ್ರ ರೀತಿಯ ಹೇಳಿಕೆ ನೀಡಿದ್ದಾರೆ.
ತಮ್ಮ ಬೆಡ್‌ರೂಮ್‌ ಬಳಿ ಬಂದ ಏಲಿಯನ್‌ ತಮ್ಮನ್ನು ಕರೆದು, ತಮ್ಮ ಲೋಕಕ್ಕೆ ಕರೆದುಕೊಂಡು ಹೋಗಿರುವುದಾಗಿ ಹೇಳಿರುವ ಇವರು, ಭೂಮಿಯ ಮೇಲಿರುವ ಪುರುಷನಿಗಿಂತಲೂ ಏಲಿಯನ್ನೇ ಬೆಸ್ಟ್‌. ಅವುಗಳ ಜತೆ ನನಗೆ ಲವ್‌ ಆಗಿದೆ. ಮುಂದಿನ ಡೇಟಿಂಗ್‌ಗಾಗಿ ಕಾಯುತ್ತಿದ್ದೇನೆ ಎಂದಿದ್ದಾರೆ. ಇನ್ನೂ ಅಚ್ಚರಿ ವಿಷಯ ಎಂದರೆ ಮಧ್ಯರಾತ್ರಿ ನಾಲ್ಕು ಗಂಟೆ ಅವರು ಬೆಡ್‌ರೂಮ್‌ನಿಂದ ಕಾಣೆಯಾಗಿದ್ದು, ಎಲ್ಲಿ ಹುಡುಕಿದರೂ ಸಿಗಲಿಲ್ಲ, ಬೆಳಗ್ಗೆ ಪುನಃ ಹಾಸಿಗೆ ಮೇಲೆ ಇದ್ದರು ಎಂದು ಕುಟುಂಬಸ್ಥರು ಹೇಳಿದ್ದಾರೆ.
ಈ ಮಹಿಳೆಯ ಹೆಸರು ಅಬ್ಬಿ ಬೆಲಾ. ಇವರು ನಟಿ ಕೂಡ. ಸದಾ ಏಲಿಯನ್‌ ಬಗ್ಗೆ ಈಕೆ ಚಿಂತಿಸುತ್ತಿದ್ದರಂತೆ. ಅವರು ಹೇಳಿದ್ದು ಏನೆಂದರೆ, ನನಗೆ ಏಲಿಯನ್ ಬಗ್ಗೆ ಸದಾ ಕುತೂಹಲ ಇದ್ದೇ ಇತ್ತು. ಅನ್ಯಗ್ರಹಜೀವಿ ನನ್ನನ್ನು ಅಪಹರಿಸಬೇಕೆಂದು ಆನ್‌ಲೈನ್‌ನಲ್ಲಿ ಸದಾ ತಮಾಷೆ ಮಾಡುತ್ತಿದ್ದೆ. ಆದರೆ ವಿಚಿತ್ರ ಎಂದರೆ ನಾನು ರಾತ್ರಿ ಮಲಗಿದಾಗ ನನ್ನ ಕನಸಿನಲ್ಲಿ ಒಂದು ಧ್ವನಿ ಕೇಳಿಸಿತು. ನಾಳೆ ಕಿಟಕಿಯ ಪಕ್ಕದಲ್ಲಿ ಕುಳಿತಿರಿ ಎಂದಿತು ದನಿ. ಅಚ್ಚರಿಗೊಂಡ ನಾನು ಮಾರನೇ ದಿನ ಹಾಗೇ ಮಾಡಿದೆ. ಆದರೆ ಅಲ್ಲಿಯೇ ನಿದ್ದೆಗೆ ಜಾರಿದೆ. ನಾನು ನಿದ್ರೆಗೆ ಜಾರುತ್ತಿದ್ದಂತೆ, ಹೊರಗೆ ಹಾರುವ ತಟ್ಟೆ ಕಾಣಿಸಿಕೊಂಡಿತು. ಬೆಡ್‌ರೂಮ್‌ ಬಳಿಯೇ ಪ್ರಕಾಶಮಾನವಾದ ಹಸಿರು ಕಿರಣ ಕಾಣಿಸಿತು. ಬೆಡ್‌ರೂಂ ಒಳಗೇ ಬಂದ ಏಲಿಯನ್‌ ನನ್ನನ್ನು ಎಲ್ಲಿಯೋ ಕರೆದೊಯ್ಯಿತು. ಅಲ್ಲಿ ಐದು ಏಲಿಯನ್ಸ್‌ ಇದ್ದವು.
ಅದರಲ್ಲಿ ಒಂದು ಮನುಷ್ಯರನ್ನು ಹೋಲುತ್ತಿತ್ತು. ತುಂಬಾ ಎತ್ತರ ಮತ್ತು ತೆಳ್ಳಗಿತ್ತು. ಅಲ್ಲಿ ನಾನು ಕೆಲ ಕಾಲ ಕಳೆದೆ. ಪುನಃ ಅವುಗಳ ನನ್ನನ್ನು ಮನೆಗೆ ಹಿಂದಿರುಗಿಸಿದವು. ಮೊದಲು ಇದನ್ನು ನಾನು ನನ್ನ ಕನಸು ಎಂದುಕೊಂಡೆ. ಆದರೆ ನಿಜಕ್ಕೂ ಅದು ಕನಸಾಗಿರಲಿಲ್ಲ. ನಾನು ಹೋಗಿರುವುದು ನಿಜ. ಅಷ್ಟೇ ಅಲ್ಲದೇ ಇದ್ದಕ್ಕಿದ್ದಂತೆಯೇ ನನ್ನ ಕೊಠಡಿಯಿಂದ ಶಬ್ದ ಬಂದು, ನಾನು ಕಾಣೆಯಾಗಿರುವುದನ್ನೂ ನನ್ನ ಕುಟುಂಬದವರು ನೋಡಿದ್ದಾರೆ ಎಂದು ಆಕೆ ಹೇಳಿದ್ದಾಳೆ.
ಒಟ್ಟಿನಲ್ಲಿ ಆ ಅನುಭವವೇ ಬೇರೆ. ಅಲ್ಲಿಗೆ ಹೋದರೆ ಭೂಮಿಯ ಮೇಲಿರುವ ಪುರುಷರಿಗಿಂತಲೂ ಅವೇ ಬೆಸ್ಟ್‌ ಎಂದು ಕಾಣಿಸುತ್ತದೆ, ನನಗೆ ಅವುಗಳ ಮೇಲೆ ಲವ್‌ ಆಗಿದೆ ಎಂದಿದ್ದಾಳೆ ಮಹಿಳೆ. ಈ ಹಿಂದೆ ಕೂಡ ಇದೇ ರೀತಿಯ ಘಟನೆಗಳು ನಡೆದಿರುವುದು ವರದಿಯಾಗಿದ್ದು, ಈ ಬಗ್ಗೆ ವಿಜ್ಞಾನಿಗಳು ಇನ್ನಷ್ಟು ತಲೆ ಕೆಡಿಸಿಕೊಂಡಿದ್ದಾರೆ.
ನೋಡಬಾರದ್ದನ್ನು ಅಮ್ಮ ನೋಡಿದಳು- ಅದಕ್ಕಾಗಿ ವಿಚ್ಛೇದನ ಕೊಟ್ಟೆ: ಬಹು ವರ್ಷಗಳ ಸತ್ಯ ಬಿಚ್ಚಿಟ್ಟ ಶಿಲ್ಪಾ ಶೆಟ್ಟಿ ಪತಿ ಕುಂದ್ರಾ

ಹೇಳಿಬಿಡು ಹುಡುಗಿ… ನೀ ಚುಚ್ಚಿದ್ದು ನನ್ನ ತೋಳಿಗೋ, ಹೃದಯಕ್ಕೋ… ಅದು ಒಲವಿನ ಸೂಜಿಯೋ, ಮೊಂಡಾದದ್ದೊ?

ಲಸಿಕೆ ನೀಡುವಾಗ ಹರಟೆ ಹೊಡೀತಿದ್ದ ನರ್ಸ್‌ ಮಾಡಿದಳು ಎಡವಟ್ಟು- ಎರಡು ಡೋಸ್‌ ಒಟ್ಟಿಗೇ ಪಡೆದವನ ಕಥೆ ಹರೋಹರ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × five =
Remember me
