ಫಿರೋಜಾಬಾದ್ (ಉತ್ತರ ಪ್ರದೇಶ): ಕೆಲವೊಮ್ಮೆ ಜನರು ಕೆಲವು ಪ್ರಯೋಜನ ಪಡೆದುಕೊಳ್ಳಲು ಎಂತೆಂಥ ನೀಚ ಕೃತ್ಯಕ್ಕೂ ಇಳಿಯುತ್ತಾರೆ. ಇದಕ್ಕೆ ಸಾಕ್ಷಿಯಾಗಿದೆ ಉತ್ತರಪ್ರದೇಶದ ಒಂದು ಘಟನೆ.
ಇಲ್ಲಿ ಮುಖ್ಯಮಂತ್ರಿಗಳ ಸಾಮೂಹಿಕ ವಿವಾಹ ಯೋಜನೆ ಅಡಿ ಮದುವೆಯಾಗಿರುವ ವಧು-ವರರಿಗೆ 35 ಸಾವಿರ ರೂಪಾಯಿಗಳನ್ನು ನೀಡಲಾಗುತ್ತದೆ. ಇದರಲ್ಲಿ ವಧುವಿನ ಬ್ಯಾಂಕ್ ಖಾತೆಗೆ 20 ಸಾವಿರ ರೂಪಾಯಿಗಳನ್ನು ಠೇವಣಿ ಮಾಡಿ, 10 ಸಾವಿರ ರೂಪಾಯಿಯನ್ನು ಉಡುಗೊರೆಯಾಗಿ ನೀಡಲಾಗುತ್ತದೆ.
ಇದರ ಪ್ರಯೋಜನ ಬೇರೆಯವರಿಗೆ ಸಿಗಬಾರದು ಎನ್ನುವ ಕಾರಣಕ್ಕೆ ಅಣ್ಣ-ತಂಗಿಯೇ ಈ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿರುವ ಘಟನೆ ನಡೆದಿದೆ! ತಂಗಿಗೆ ಬೇರೆ ಮದುವೆ ಮಾಡಿದರೆ ಹಣ ಆಕೆಯ ಗಂಡನಿಗೆ ಹೋಗುತ್ತದೆ ಎಂದು ಈ ಕೃತ್ಯ ಎಸಗಲಾಗಿದೆ.
ಡಿಸೆಂಬರ್ 11 ರಂದು ಫಿರೋಜಾಬಾದ್‍ನ ತುಂಡ್ಲಾದಲ್ಲಿ ಸಾಮೂಹಿಕ ವಿವಾಹವನ್ನು ಏರ್ಪಡಿಸಲಾಗಿತ್ತು. ಈ ವಿವಾಹದಲ್ಲಿ ಭಾಗಿಯಾಗುವವರಿಗೆ ಈ ಯೋಜನೆ ಸಿಗುವುದು ಎಂದು ಘೋಷಿಸಲಾಗಿತ್ತು. ಈ ಯೋಜನೆ ಪ್ರಯೋಜನ ಪಡೆಯಲು ಇಂಥದ್ದೊಂದು ನೀಚ ಕೃತ್ಯಕ್ಕೆ ಅಣ್ಣ-ತಂಗಿ ಕೈಹಾಕಿದ್ದಾರೆ.
ಈ ಸಾಮೂಹಿಕ ವಿವಾಹದ ವಿಡಿಯೋ ಮಾಡಲಾಗಿತ್ತು. ಇದನ್ನು ನೋಡಿದ ಗ್ರಾಮಸ್ಥರು ಈ ಅಣ್ಣ-ತಂಗಿಯನ್ನು ನೋಡಿ ಬೆಚ್ಚಿಬಿದ್ದಿದ್ದಾರೆ. ಕೂಡಲೇ ಆ ಬಗ್ಗೆ ಸಂಬಂಧಪಟ್ಟವರಿಗೆ ವಿಷಯ ತಲುಪಿಸಿದ್ದಾರೆ. ಆಗಲೇ ಈ ವಿಷಯ ಬೆಳಕಿಗೆ ಬಂದಿದೆ. ಇವರ ವಿರುದ್ಧ ಕೇಸ್‌ ದಾಖಲಾಗಿದೆ.
ಕಳೆದ ವರ್ಷ ಕೂಡ ಇಂಥದ್ದೇ ಒಂದು ಘಟನೆ ನಡೆದಿತ್ತು. ಪಂಜಾಬಿ ವ್ಯಕ್ತಿಯೊಬ್ಬ ತನ್ನ ಸ್ವಂತ ಸಹೋದರಿಯನ್ನು ಆಸ್ಟ್ರೇಲಿಯಾಕ್ಕೆ ಕರೆದೊಯ್ಯುವ ಸಲುವಾಗಿ ಆಕೆಯನ್ನು ಮದುವೆಯಾಗಿದ್ದ. ಇಬ್ಬರೂ ಪ್ರತ್ಯೇಕವಾಗಿ ವೀಸಾಕ್ಕೆ ಅರ್ಜಿ ಸಲ್ಲಿಸಿದ್ದಾಗ ಅದು ರಿಜೆಕ್ಟ್‌ ಆಗುತ್ತಿದ್ದ ಹಿನ್ನೆಲೆಯಲ್ಲಿ ಮದುವೆಯಾಗಿ ನಂತರ ದಂಪತಿ ಎಂದು ಹೇಳುವ ಮೂಲಕ ವೀಸಾಗೆ ಅರ್ಜಿ ಸಲ್ಲಿಸಿ ಸಿಕ್ಕಿಬಿದ್ದಿದ್ದರು.
ಇನ್ಮುಂದೆ ಯುವತಿಯರ ಮದುವೆ ವಯಸ್ಸು 21: ಸಚಿವ ಸಂಪುಟ ಅಸ್ತು- 43 ವರ್ಷಗಳ ಬಳಿಕ ಏಕೀ ಬದಲಾವಣೆ? ಇಲ್ಲಿದೆ ವಿವರ

ಗುಟ್ಟಾಗಿ ಹುಟ್ಟಿದ ಮಗಳನ್ನು ಬರ್ಬರ ಹತ್ಯೆ ಮಾಡಿದ ಟಿವಿ ಓನರ್‌ ಇಂದ್ರಾಣಿ ಕೇಸ್‌ಗೆ ಭಾರಿ ಟ್ವಿಸ್ಟ್‌! ಕಾಶ್ಮೀರದಲ್ಲಿ ಜೀವಂತ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 + 5 =
Remember me
