ಇಸ್ಲಾಮಾಬಾದ್:1947 ಆಗಸ್ಟ್‌ 14ರ ಮಧ್ಯರಾತ್ರಿ… ಭಾರತೀಯರು ಹೆಮ್ಮೆ ಪಡುವ, ಆನಂದಿಸಿದ ದಿನವಿದು. ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ ಸಂತೋಷದಿಂದ ನಲಿದಾಡುವ ದಿನವಿದು. ಆದರೆ ಆ ದಿನ ಭಾರತ ಮತ್ತು ಪಾಕಿಸ್ತಾನ ವಿಭಜನೆಯಾದ ಕಾರಣ, ಅಕ್ಷರಶಃ ನಲುಗಿ ಹೋಗಿರುವ ಕುಟುಂಬಗಳಿಗೆ ಲೆಕ್ಕವೇ ಇಲ್ಲ. ಜೀವ ಕಳೆದುಕೊಂಡವರು ಅಸಂಖ್ಯ ಮಂದಿ. ಒಂದೇ ಕುಟುಂಬದ ಸದಸ್ಯರು ಛಿದ್ರಛಿದ್ರವಾಗಿ ಹೋದ ದಿನ ಕೂಡ ಇದು. ತನ್ನವರನ್ನು ಕಳೆದುಕೊಂಡು, ಕರುಳು ಕುಡಿಗಾಗಿ ರೋಧಿಸಿದ ಜನರು ಅದೆಷ್ಟೋ ಮಂದಿ.
ಅಂಥದ್ದೇ ಒಂದು ಕುಟುಂಬ ಮೊಹಮ್ಮದ್‌ ಸಿದ್ದಿಕ್‌ ಅವರದ್ದು. ಮೊಹಮ್ಮದ್‌ ಅವರಿಗೆ ಆಗಿನ್ನೂ ಮೂರ್ನಾಲ್ಕು ವರ್ಷವಷ್ಟೇ. ಭಾರತದ ವಿಭಜನೆಯಾದಾಗ ಅವರ ಅಣ್ಣ ಹಬೀಬ್‌ ಕಾಣೆಯಾಗಿ ಹೋದರು. ನಂತರ ಅವರು ಸೇರಿದ್ದು ಪಾಕಿಸ್ತಾನವನ್ನು. ತಮ್ಮ ಭಾರತದಲ್ಲಿದ್ದರೆ, ಅಣ್ಣ ಪಾಕಿಸ್ತಾನದಲ್ಲಿ. ಇವರ ಪಾಲಕರು ತಮ್ಮ ಕಂದಮ್ಮಗಳಿಗಾಗಿ ಹುಡುಕಾಟ ನಡೆಸದ ದಿನವೇ ಇಲ್ಲ. ಆದರೆ ಎಲ್ಲವೂ ವ್ಯರ್ಥವಾಗಿ ಹೋಗಿತ್ತು.
ಈ ಘಟನೆ ನಡೆದು ಈಗ 74 ವರ್ಷಗಳೇ ಗತಿಸಿಹೋಗಿವೆ. ಇದೀಗ ಈ ಸಹೋದರರ ಅಪೂರ್ವ ಮಿಲನವಾಗಿದ್ದು, 74 ವರ್ಷಗಳ ಬಳಿಕ ಈ ಇಳಿ ವಯಸ್ಸಿನಲ್ಲಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಕಣ್ಣೀರು ಸುರಿಸುತ್ತಿರುವ ಭಾವನಾತ್ಮಕ ವಿಡಿಯೋ ವೈರಲ್‌ ಆಗಿದೆ.
ಈ ಇಬ್ಬರು ಸಹೋದರರು ಪಾಕಿಸ್ತಾನದ ಗುರುದ್ವಾರ ದರ್ಬಾರ್ ಸಾಹಿಬ್‍ನಿಂದ ಭಾರತಕ್ಕೆ ಸಂಪರ್ಕ ಕಲ್ಪಿಸುವ ಕರ್ತಾರ್‌ಪುರ ಕಾರಿಡಾರ್‌ನಲ್ಲಿ ಮತ್ತೆ ಒಂದಾಗಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿರುವ ಈ ವಿಡಿಯೋ ನೋಡಿ ಎಲ್ಲರೂ ಭಾವುಕರಾಗುವುದು ಖಂಡಿತ.
ಇಲ್ಲಿದೆ ನೋಡಿ ವಿಡಿಯೋ:
Brothers meet after 74 years because of 1947!#pakistan#punjab(I admit, I cried)pic.twitter.com/NddUYBHK09— Manpreet Jassal (@mjassal)January 12, 2022
Brothers meet after 74 years because of 1947!#pakistan#punjab(I admit, I cried)pic.twitter.com/NddUYBHK09
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 3 =
Remember me
