ಭೋಪಾಲ್:ನಿರ್ಭಯಾ ಪ್ರಕರಣದ ಕಹಿ ನೆನಪು ಮಾಸುವ ಮೊದಲೇ ಕಳೆದ ವಾರವಷ್ಟೇ ಅದೇ ರೀತಿಯಲ್ಲಿ ಉತ್ತರ ಪ್ರದೇಶದ ಬದೌನ್​ನಲ್ಲಿ ಮಹಿಳೆಯ ಖಾಸಗಿ ಅಂಗಕ್ಕೆ ರಾಡ್​ ತೂರಿಸಿ ಅತ್ಯಾಚಾರ ಮಾಡಿ ಕೊಲೆ ಮಾಡಿರುವ ಘಟನೆ ನಡೆದಿತ್ತು. ಅದರ ಬೆನ್ನಲ್ಲೇ ಇದೀಗ ಅಂಥದ್ದೇ ಭಯಾನಕ ಘಟನೆ ಮಧ್ಯ ಪ್ರದೇಶದಲ್ಲಿ ನಡೆದಿದೆ.
ಭೋಪಾಲ್‌ನಿಂದ 600 ಕಿ.ಮೀ ದೂರದಲ್ಲಿರುವ ಸಿಧಿ ಜಿಲ್ಲೆಯ ಅಮಿಲಿಯಾ ಪೊಲೀಸ್ ಠಾಣೆ ಬಳಿ ಈ ಘಟನೆ ನಡೆದಿದೆ. ಟೀ ಅಂಗಡಿ ನಡೆಸಿ ಜೀವನ ಮಾಡುತ್ತಿದ್ದ 45 ವರ್ಷದ ವಿಧವೆ ಮೇಲೆ ರಾಡ್​ ತೂರಿಸಿ ಸಾಮೂಹಿಕ ಅತ್ಯಾಚಾರ ಎಸಗಲಾಗಿದೆ.
ಸಂತ್ರಸ್ತೆಯ ಪತಿ ನಾಲ್ಕು ವರ್ಷಗಳ ಹಿಂದೆ ಮೃತಪಟ್ಟಿದ್ದಾರೆ. ಇವರು ಒಬ್ಬರೇ ವಾಸಿಸುತ್ತಿದ್ದ ಜೀವನಕ್ಕಾಗಿ ಟೀ ಅಂಗಡಿ ನಡೆಸುತ್ತಿದ್ದಾರೆ.
ಶನಿವಾರ ರಾತ್ರಿ ಮೂರು ಕಿ.ಮೀ ದೂರದಲ್ಲಿರುವ ಪಕ್ಕದ ಹಳ್ಳಿಯಿಂದ ಮಹಿಳೆಯ ಗುಡಿಸಲಿಗೆ ಬಂದ ಈ ವ್ಯಕ್ತಿಗಳು ನೀರು ಕೇಳಿದ್ದಾರೆ. ಅವರ ಮೇಲೆ ಅನುಮಾನಗೊಂಡಿದ್ದ ಮಹಿಳೆ ನೀರು ಕೊಡಲು ನಿರಾಕರಿಸಿದ್ದಾರೆ.
ಕೂಡಲೇ ಆಕೆಯ ಮೇಲೆ ಪ್ರಾಣಿಯಂತೆ ಎರಗಿದ ಕಾಮುಕರು ಖಾಸಗಿ ಭಾಗಕ್ಕೆ ರಾಡ್​ ತೂರಿಸಿ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಸಂತ್ರಸ್ತೆಯನ್ನು ಸಿಧಿ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿಂದ ರೇವಾದಲ್ಲಿನ ಸಂಜಯ್ ಗಾಂಧಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಹಿಳೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗುತ್ತಿದೆ.
ಮರುಕಳಿಸಿದೆ ನಿರ್ಭಯಾ ಕೇಸ್​: ಕಬ್ಬಿಣದ ರಾಡ್​ ನೂಕಿಸಿ ಅತ್ಯಾಚಾರ ಎಸಗಿ ಕೊಲೆ!

ಪುಣೆಯಿಂದ ಮೂರು ಟ್ರಕ್​ನಲ್ಲಿ ಹೊರಟಿವೆ ಕೋವಿಡ್​ ಲಸಿಕೆ: ರಾಜ್ಯಕ್ಕೆ ಎಷ್ಟು ಸಿಗಲಿದೆ ಗೊತ್ತಾ?

ಡಿಆರ್‌ಡಿಒನಲ್ಲಿ 150 ಅಪ್ರೆಂಟೀಸ್‍ಗಳ ನೇಮಕಕ್ಕೆ ಅರ್ಜಿ ಆಹ್ವಾನ

ನಿಲ್ಲಿಸಿದ್ದ ಕಾರನ್ನು ಮಹಿಳೆ ಸಹಿತ ಅಪಹರಿಸಿದ ದರೋಡೆಕೋರರು! ಮುಂದೆ ಆದದ್ದು ಭಯಾನಕ…

ಹೆಂಡ್ತಿಯೂ ಬೇಕು, ಚಿಕ್ಕಮ್ಮನೂ ಬೇಕು ಎಂದ ಯುವಕ: ಆಂಟಿಯ ತುಂಟಾಟಕ್ಕೆ ಹೆಣವಾದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − twelve =
Remember me
