ನವದೆಹಲಿ:ಭಾರತ್ ಸ್ಟೇಜ್ 4 (ಬಿಎಸ್ 4) ವಾಹನ ಖರೀದಿ ಮಾಡಿ, ನೋಂದಣಿ ಮಾಡಿಕೊಳ್ಳಲಾಗದೇ ಪರದಾಡುತ್ತಿರುವವರಿಗಾಗಿ ಸುಪ್ರೀಂಕೋರ್ಟ್‌ ಸಿಹಿ ಸುದ್ದಿಯೊಂದನ್ನು ನೀಡಿದೆ.
ಅದೇನೆಂದರೆ, ಮಾರ್ಚ್ 31ರ ಗಡುವಿನ ಮೊದಲು ವಾಹನ ಖರೀದಿಸಿದ್ದು, ನೋಂದಣಿ ಸಾಧ್ಯವಾಗದವರಿಗೆ ವಾಹನ ನೋಂದಣಿಗೆ ಸುಪ್ರೀಂಕೋರ್ಟ್ ಅನುಮತಿ ನೀಡಿದೆ. ಈ ಮೊದಲು ವಾಹನ ನೋಂದಣಿಗೆ ಕೋರ್ಟ್‌ ನಿರ್ಬಂಧ ವಿಧಿಸಿತ್ತು.
ಆದರೆ ಈ ಕುರಿತು ಸ್ಪಷ್ಟನೆ ನೀಡಿರುವ ಕೋರ್ಟ್‌ ಲಾಕ್‌ಡೌನ್‌ಕ್ಕಿಂತ ಮುಂಚಿತವಾಗಿ ಅಂದರೆ ಮಾರ್ಚ್‌ 25ಕ್ಕಿಂತ ಮುಂಚಿತವಾಗಿ ಬಿಎಸ್‌-4 ವಾಹನ ಖರೀದಿ ಮಾಡಿರುವವರು ಮಾತ್ರ ನೋಂದಣಿಗೆ ಅರ್ಹರಾಗಿರುತ್ತಾರೆ ಎಂದಿದೆ. ಇದರರ್ಥ ಮಾರ್ಚ್‌ 25ಕ್ಕಿಂತ ಮುಂಚಿತವಾಗಿ ಖರೀದಿ ಮಾಡಿರುವವರ ವಿವರಗಳು ಸರ್ಕಾರಿ ‘ವಾಹನ್‌ ಪೋರ್ಟಲ್‌’ನಲ್ಲಿ ಉಲ್ಲೇಖವಾಗಿರುತ್ತದೆ. ಅಂಥವರು ಮಾತ್ರ ಈಗ ನೋಂದಣಿ ಮಾಡಿಕೊಳ್ಳಲು ಕೋರ್ಟ್‌ ಅನುಮತಿ ನೀಡಿದೆ.ಇದರರ್ಥ ಈ ಅವಧಿಯ ನಂತರ 39 ಸಾವಿರದಷ್ಟು ಬಿಎಸ್‌4 ವಾಹನಗಳು ಮಾರಾಟವಾಗಿದ್ದು, ಅವುಗಳು ನೋಂದಣಿಗೆ ಅರ್ಹವಲ್ಲ.
ಈ ಮೊದಲು ಬಿಎಸ್‌-4 ವಾಹನ ನೋಂದಣಿಗೆ ಮಾರ್ಚ್‌ 31ರ ಗಡುವು ನೀಡಲಾಗಿತ್ತು. ಆದರೆ ತದನಂತರ ಲಾಕ್​ಡೌನ್​ ಘೋಷಣೆಯಾದ ಹಿನ್ನೆಲೆಯಲ್ಲಿ, ಕೋರ್ಟ್​ ನೀಡಿರುವ ಅವಧಿಯೊಳಕ್ಕೆ ಈ ವಾಹನಗಳನ್ನು ಮಾರಾಟ ಮಾಡಲು ಸಾಧ್ಯವಾಗಿಲ್ಲ ಎಂದು ಗೋಗರೆದಿದ್ದ ಭಾರತೀಯ ಆಟೋಮೊಬೈಲ್ ವಿತರಕರ ಸಂಘ (ಎಫ್‌ಎಡಿಎ) ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿ, ಈ ವಾಹನಗಳ ಮಾರಾಟದ ಅವಧಿಯನ್ನು ಸ್ವಲ್ಪ ಮಟ್ಟಿಗಾದರೂ ವಿಸ್ತರಿಸುವಂತೆ ಕೋರಿಕೊಂಡಿತ್ತು. 7 ಲಕ್ಷಕ್ಕೂ ಹೆಚ್ಚು ಬಿಎಸ್ 4 ದ್ವಿ ಮತ್ತು ನಾಲ್ಕು ಚಕ್ರಗಳು, ಸುಮಾರು 15,000 ಪ್ರಯಾಣಿಕ ಕಾರುಗಳು ಮತ್ತು ಸರಿಸುಮಾರು 6,400 ಕೋಟಿ ಮೌಲ್ಯದ ಟ್ರಕ್‌ಗಳು ಮಾರಾಟವಾಗದೆ ಉಳಿದಿವೆ ಎಂದು ಅದು ಹೇಳಿತ್ತು.
ನಂತರ ಸುಪ್ರೀಂಕೋರ್ಟ್​, 2020 ಮಾರ್ಚ್​ 31ಕ್ಕೆ ಮೊದಲು ಮಾರಾಟವಾಗಿ ತಾತ್ಕಾಲಿಕವಾಗಿ ನೋಂದಣಿಯಾಗಿರುವ ವಾಹನಗಳು ಹಾಗೂ ತೆರಿಗೆ ಮತ್ತು ಶುಲ್ಕ ಪಾವತಿಸಿರುವ ಹಾಗೂ ತೆರಿಗೆ ಕಟ್ಟಬೇಕಿರುವ ಎಲ್ಲಾ ವಾಹನಗಳನ್ನು ನೋಂದಣಿ ಮಾಡಿಕೊಳ್ಳಲು ಏಪ್ರಿಲ್​ 30ರವರೆಗೆ ಅವಕಾಶ ನೀಡಿತು.
ದೇಶದಲ್ಲಿ ಲಾಕ್​ಡೌನ್​ ತೆರವುಗೊಳಿಸಿದ ನಂತರ ವಿತರಕರು ತಮ್ಮ ಉಳಿದಿರುವ ಬಿಎಸ್ 4 ದಾಸ್ತಾನುಗಳಲ್ಲಿ 10 ಶೇಕಡಾವನ್ನು 10 ದಿನಗಳವರೆಗೆ ಮಾರಾಟ ಮಾಡಲು ಅವಕಾಶ ಮಾಡಿಕೊಟ್ಟು ನ್ಯಾಯಮೂರ್ತಿಗಳು ಆದೇಶಿಸಿದ್ದರು. ಅಂದರೆ ವಿಸ್ತರಣೆಯ ಅವಧಿಯಲ್ಲಿ ಕೇವಲ 1.05 ಲಕ್ಷ ಬಿಎಸ್ 4 ವಾಹನಗಳನ್ನು ಮಾರಾಟ ಮಾಡಲು ಅನುಮತಿಸಲಾಗಿತ್ತು.
ಇದನ್ನೂ ಓದಿ:ಗುತ್ತಿಗೆ ನಾಕರರು ಕರ್ತವ್ಯಕ್ಕೆ ಹಾಜರಾಗುವ ಗೊಂದಲ ನಿವಾರಿಸಿ
ಇದೀಗ ನೋಂದಣಿಗೆ ಅವಕಾಶ ಮಾಡಿಕೊಡಲಾಗಿದೆ. ಬಿಎಸ್​ 4 ನಿಂದಾಗಿ ಮಾಲಿನ್ಯ ಪ್ರಮಾಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಇದನ್ನು ನಿಷೇಧಿಸಲಾಗಿದೆ. ಅದರ ಬದಲು ಭಾರತ್ ಸ್ಟೇಜ್-6 (ಬಿಎಸ್‌-6) ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಭಾರತ್​ ಸ್ಟೇಜ್​ ಎಂಬುದು ಇಂಧನದ ಗುಣಮಟ್ಟವನ್ನೂ ನಿರ್ಧರಿಸುತ್ತದೆ. ಬಿಎಸ್‌-4 ವಾಹನಗಳಲ್ಲಿ ಬಿಎಸ್‌-4 ಗುಣಮಟ್ಟದ ಇಂಧನವನ್ನು ಬಳಸಲಾಗುತ್ತದೆ.
ಬಿಎಸ್‌-6 ವಾಹನಗಳಲ್ಲಿ ಬಿಎಸ್‌-6 ಇಂಧನವನ್ನೇ ಬಳಸಬೇಕಾಗುತ್ತದೆ. ಬಿಎಸ್‌-4 ಪೆಟ್ರೋಲ್ ಇಂಜಿನ್‌ಗಳ ತಂತ್ರಜ್ಞಾನದಲ್ಲಿ ವ್ಯಾಪಕ ಬದಲಾವಣೆ ಏನೂ ಇರುವುದಿಲ್ಲ. ಹೀಗಾಗಿ ಬಿಎಸ್‌-6 ಪೆಟ್ರೋಲ್ ವಾಹನಗಳ ಬೆಲೆ ಭಾರಿ ಪ್ರಮಾಣದಲ್ಲಿ ಏರಿಕೆಯಾಗುವುದಿಲ್ಲ. ಬಿಎಸ್‌-6 ಪೆಟ್ರೋಲ್ ಇಂಜಿನ್‌ಗಳು ಉಗುಳುವ ಹೊಗೆಯಲ್ಲಿನ ಮಾಲಿನ್ಯಕಾರಕಗಳ ಪ್ರಮಾಣದಲ್ಲಿ ಸ್ವಲ್ಪ ಇಳಿಕೆಯಾಗುತ್ತದೆ. (ಏಜೆನ್ಸೀಸ್​)
ಅಪಾಯದಲ್ಲಿದೆ 18 ಕೋಟಿ ಜನರ ಪ್ಯಾನ್‌ ಕಾರ್ಡ್‌- ಏಕೆ ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:seven − five =
Remember me
