ಲಖನೌ (ಉತ್ತರ ಪ್ರದೇಶ):ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಉತ್ತರ ಪ್ರದೇಶದ ನಿರ್ಮಾಣ ಹಂತದಲ್ಲಿರುವ ಕಟ್ಟಡ ಕುಸಿದು 10 ಮಂದಿ ದಾರುಣವಾಗಿ ಮೃತಪಟ್ಟಿರುವ ಘಟನೆ ನಡೆದಿದೆ. ಘಟನೆಯಲ್ಲಿ ಹಲವರು ಗಾಯಗೊಂಡಿದ್ದಾರೆ.
ಲಖನೌದ ದಿಲ್‌ಶುಕ್‌ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಅವಶೇಷಗಳ ಅಡಿ ಸಿಲುಕಿದ ಓರ್ವನನ್ನು ರಕ್ಷಣಾ ಸಿಬ್ಬಂದಿ ಬಚಾವ್​ ಮಾಡಿದ್ದಾರೆ.
ಈ ಕಟ್ಟಡದ ಬಳಿ ಗುಡಿಸಿಲಿನಲ್ಲಿ ವಾಸಿಸುತ್ತಿದ್ದವರು ವಿಪರೀತ ಮಳೆಯಿಂದಾಗಿ ಗುಡಿಸಿಲಿನಿಂದ ಹೊರಬಂದು ನಿರ್ಮಾಣ ಹಂತದಲ್ಲಿದ್ದ ಈ ಕಟ್ಟಡದ ಸಮೀಪ ಮಲಗಿದ್ದರು. ಆದರೆ ಅಲ್ಲಿಯೂ ಜವರಾಯ ಅವರ ಜೀವವನ್ನು ಬಲಿ ಪಡೆದಿದ್ದಾನೆ!
ಘಟನೆಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ವಿಷಾದಿಸಿದ್ದು, ಮೃತಪಟ್ಟವರ ಕುಟುಂಬಗಳಿಗೆ ತಲಾ 4 ಲಕ್ಷ ರೂ. ಹಾಗೂ ಗಾಯಗೊಂಡವರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ ಮಾಡಿದ್ದಾರೆ. ಅಗತ್ಯವಿರುವ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಡುವುದಾಗಿ ಭರವಸೆ ನೀಡಿದ್ದಾರೆ. ಕಟ್ಟಡದ ಅವಶೇಷಗಳಡಿ ಸಿಲುಕಿರುವ ಜನರ ರಕ್ಷಣೆಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳುವಂತೆಯೂ ಅವರು ಅಧಿಕಾರಿಗಳಿಗೆ ಸೂಚಿಸಿದ್ದಾರೆ. (ಏಜೆನ್ಸೀಸ್​)
UP | Nine people dead and 2 injured after a wall collapsed due to heavy rain in Lucknow. The incident took place in Dilkusha under Cantt: Home Departmentpic.twitter.com/Kxmml42KBe
— ANI UP/Uttarakhand (@ANINewsUP)September 16, 2022

ಅಸಲಿ ದಾಖಲೆ ನೋಡಿ ಜಮೀನು ಕೊಳ್ತೀರಾ? ಈ ಖತರ್ನಾಕ್​ ಗ್ಯಾಂಗ್​ನ​ ಭಯಾನಕ ಸ್ಟೋರಿ ಕೇಳಿ…

ಪೊಲೀಸ್​ ಠಾಣೆ ಕಾಯಲು ನಾಯಿಯ ಬದಲು ಹಾವುಗಳು! ಕೇರಳದಲ್ಲಿ ಹೀಗೊಂದು ಯಶಸ್ವಿ ಪ್ರಯೋಗ…

ಡಿಕೆಶಿಗೆ ಮತ್ತೆ ಶಾಕ್​ ಕೊಟ್ಟ ಇಡಿ: ಸಮನ್ಸ್​ ಜಾರಿ- ಟ್ವೀಟ್​ ಮೂಲಕ ಅಸಮಾಧಾನ ಹೊರಹಾಕಿದ ಕೆಪಿಸಿಸಿ ಅಧ್ಯಕ್ಷ

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:one × 2 =
Remember me
