ಚೆನ್ನೈ:ನಿವಾರ್​ ಚಂಡಮಾರುತ ತಮಿಳುನಾಡು, ಆಂಧ್ರಪ್ರದೇಶಗಳಲ್ಲಿ ಸೃಷ್ಟಿಸಿರುವ ತಲ್ಲಣ ಅಷ್ಟಿಷ್ಟಲ್ಲ. ಇದರ ಬೆನ್ನಲ್ಲೇ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ನಿನ್ನೆ ರಾತ್ರಿಯಿಂದಲೇ ಕೆಲವು ರಾಜ್ಯಗಳಲ್ಲಿ ಭಯಾನಕ ಮಳೆಯಾಗಿದೆ. ಇದರ ಬೆನ್ನಲ್ಲೇ ಇದೀಗ “ಬುರೆವಿ”ಯೂ ಬಂದಿದ್ದು, ಡಿ.4ರಂದು ತಮಿಳುನಾಡು ಕರಾವಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಹಿನ್ನೆಲೆಯಲ್ಲಿ , ತಮಿಳುನಾಡು, ಕೇರಳ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳಲ್ಲಿ ಹೈ ಅಲರ್ಟ್​ ಘೋಷಣೆ ಮಾಡಲಾಗಿದೆ. ಈ ರಾಜ್ಯಗಳಲ್ಲಿ ಭಾರಿ ಪ್ರಮಾಣದ ಮಳೆಯಾಗುವ ಸಾಧ್ಯತೆ ಇದ್ದು, ಕರ್ನಾಟಕದ ಮೇಲೂ ಇದು ಪರಿಣಾಮ ಬೀರಲಿದೆ.
ಈ ಚಂಡಮಾರುತವು ನೈರುತ್ಯ ಬಂಗಾಳ ಕೊಲ್ಲಿಯಲ್ಲಿ ಉಂಟಾಗಿದ್ದು, ಶ್ರೀಲಂಕಾದ ತ್ರೀನ್ ಕೊಮಾಲಿಯಿಂದ 370 ಕಿಮೀ, ಪಂಬನ್​ನಿಂದ 600 ಕಿ.ಮೀ ಮತ್ತು ಕನ್ಯಾಕುಮಾರಿಯಿಂದ 770 ಕಿಲೋ ಮೀಟರ್ ದೂರದಲ್ಲಿ ಕೇಂದ್ರಿಕೃತವಾಗಿದೆ.
ಇದನ್ನೂ ಓದಿ:28 ವರ್ಷ ಮಗನನ್ನು ಕೋಣೆಯಲ್ಲಿ ಕೂಡಿಹಾಕಿದ ತಾಯಿ! ಇಲ್ಲೊಂದು ಭಯಾನಕ ಘಟನೆ…
ಮುಂದಿನ 12 ಗಂಟೆಗಳಲ್ಲಿ ಚಂಡಮಾರುತದ ವೇಗ ತೀವ್ರಗೊಳ್ಳುವ ಸಾಧ್ಯತೆಯಿದ್ದು, ಇಂದು (ಡಿಸೆಂಬರ್ 2) ರಾತ್ರಿಯಿಂದಲೇ ಇದು ಭಯಾನಕ ರೂಪ ತೋರುವ ಸಾಧ್ಯತೆಗಳಿವೆ. ಗಂಟೆಗೆ 75-85 ಗಂಟೆಯ ವೇಗದೊಂದಿಗೆ ಶ್ರೀಲಂಕಾ ಕರಾವಳಿ ಪ್ರದೇಶ ತ್ರೀನ್ ಕೋಮಾಲಿ ದಾಟುವ ಸಾಧ್ಯತೆಯಿರುವುದಾಗಿ ಭಾರತೀಯ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ಕುರಿತಂತೆ ನಿನ್ನೆಯೇ ರಾಷ್ಟ್ರೀಯ ಬಿಕ್ಕಟ್ಟು ನಿರ್ವಹಣ ಸಮಿತಿ (ಎನ್‌ಸಿಎಂಸಿ) ಪರಿಸ್ಥಿತಿಯ ಪರಿಶೀಲನೆ ನಡೆಸಿದೆ. ಕೇಂದ್ರ ಸಂಪುಟ ಕಾರ್ಯದರ್ಶಿ ರಾಜೀವ್‌ ಗೌಬಾ ನೇತೃತ್ವದ ಸಮಿತಿಯು, ತಮಿಳುನಾಡು, ಕೇರಳ, ಲಕ್ಷದ್ವೀಪಗಳಲ್ಲಿ ಮೀನುಗಾರರಿಗೆ ನೀಡಲಾದ ಸಲಹೆ ಹಾಗೂ ರಕ್ಷಣ ಪಡೆಗಳ ನಿಯೋಜನೆ ಕುರಿತು ಪರಿಶೀಲನೆ ನಡೆಸಿದೆ.
ಡಿ.3 ರಂದು ಬೆಳಗ್ಗೆ ಇದು ಮನ್ನಾರ್ ಕೊಲ್ಲಿ ಮತ್ತು ಕೊಮೊರಿನ್ ಪ್ರದೇಶದಲ್ಲಿ ಹೊರಹೊಮ್ಮಲಿದ್ದು, ಡಿ.4 ರಂದು ಕನ್ಯಾಕುಮಾರಿ ಮತ್ತು ಪಂಬನ್ ನಡುವಣ ದಕ್ಷಿಣ ತಮಿಳುನಾಡು ಕರಾವಳಿ ಪ್ರದೇಶದತ್ತ ಚಲಿಸಲಿದೆ ಎಂದು ಪ್ರಾದೇಶಿಕ ಹವಾಮಾನ ಇಲಾಖೆಯ ನಿರ್ದೇಶಕ ಎನ್. ಪೂವಿರಾಸನ್ ತಿಳಿಸಿದ್ದಾರೆ.
ಮನೆಯಲ್ಲೇ ಮಗಳ ಭಯೋತ್ಪಾದನಾ ಚಟುವಟಿಕೆ – ಜೆಎನ್​ಯು ವಿದ್ಯಾರ್ಥಿನಿ ಅಪ್ಪ ಬಿಚ್ಚಿಟ್ಟ ಕರಾಳ ಕಥೆ…

ಮಹಿಳೆ ಮತ್ತು ಐವರು ಮಕ್ಕಳ ಮೇಲೆ ‘ದೆವ್ವ’ದ ಹಲ್ಲೆ- ನಾಲ್ವರ ಸಾವು!

ರಾಯಚೂರು ಯುವತಿಯ ಖತರ್ನಾಕ್​ ಪ್ಲ್ಯಾನ್​ : ಲವರ್ ​ ಜತೆಸೇರಿ ಭಾವಿಪತಿಯನ್ನೇ ಮುಗಿಸಿದಳು!

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:2 × five =
Remember me
