ಮುಂಬೈ:ಐಷಾರಾಮಿ ಬಸ್ ಚಾಲಕನೊಬ್ಬ 4 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಗೋಣಿ ಚೀಲದೊಳಗೆ ತುಂಬಿಸಿ ಮುಂಬೈ-ಅಹಮದಾಬಾದ್ ಹೆದ್ದಾರಿಯ ವಾಲೀವ್ ಬಳಿ ಪೆಟ್ರೋಲ್ ಪಂಪ್ ಬಳಿ ಎಸೆದಿರುವ ಭಯಾನಕ ಘಟನೆ ನಡೆದಿದೆ.
ಭಯಂದರ್​ನ ಭೋಲಾರಂ ಕೊಳೆಗೇರಿ ಬಳಿ ನಿಲ್ಲಿಸಿದ್ದ ಐಷಾರಾಮಿ ಬಸ್ ಒಳಗೆ ಬಾಲಕಿ ಆಟವಾಡುತ್ತಿದ್ದಳು. ಈಕೆಯ ಜತೆಗೆ ಇತರ ಮಕ್ಕಳೂ ಆಟವಾಡುತ್ತಿದ್ದರು. ಇದೇ ವೇಳೆ ಚಾಲಕ ಬಂದಾಗ ಉಳಿದ ಮಕ್ಕಳು ಬಸ್​ನಿಂದ ಇಳಿದಿದ್ದಾರೆ. ಆದರೆ ಬಾಲಕಿ ಮಾತ್ರ ಇಳಿಯಲು ಆಗದೇ ಒಳಗೇ ಉಳಿದುಬಿಟ್ಟಿದ್ದಾಳೆ.
ಬಸ್ಸು ಚಲಿಸಲು ಶುರುವಾದ ಮೇಲೆ ಬಾಲಕಿ ಚೀರಿಕೊಂಡಿದ್ದಾಳೆ. ಆಗಲೇ ಚಾಲಕನಿಗೆ ಆಕೆ ಬಸ್ಸಿನಲ್ಲಿ ಇರುವುದು ತಿಳಿದಿದೆ. ಆತ ಆಕೆಯನ್ನು ನಿರ್ಜನ ಪ್ರದೇಶಕ್ಕೆ ಕೊಂಡೊಯ್ದಿದ್ದಾನೆ. ನಂತರ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ.
ಹುಡುಗಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ಅದೇ ವೇಳೆ ಚಾಲಕ ಆಕೆಯ ಕತ್ತು ಹಿಸುಕಿದ್ದಾನೆ. ಅವಳು ಸತ್ತಳೆಂದು ತಿಳಿದು ಗೋಣಿಚೀಲ ಒಂದರಲ್ಲಿ ಅವಳನ್ನು ತುಂಬಿ ಎಸೆದು ಹೋಗಿದ್ದಾನೆ.
ಗೋಣಿಚೀಲದೊಳಗೆ ಇದ್ದ ಬಾಲಕಿಗೆ ಪ್ರಜ್ಞೆ ಬಂದಾಗ ಅಲ್ಲಾಡಲು ಶುರು ಮಾಡಿದ್ದಾಳೆ. ಸ್ಥಳೀಯರು ಗೋಣಿಚೀಲ ಅಲ್ಲಾಡುವುದನ್ನು ನೋಡಿ ಹೆದರಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಚೀಲವನ್ನು ತೆರೆದಾಗ ಬಾಲಕಿ ಇರುವುದು ಕಾಣಿಸಿದೆ.ಆಕೆಯಿನ್ನೂ ಉಸಿರಾಡುತ್ತಿದ್ದುದರಿಂದ ಕೂಡಲೇ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಿಯೇ ತನ್ನ ಮಗಳು ಕಾಣೆಯಾಗಿರುವುದಾಗಿ ತಾಯಿ ಪೊಲೀಸರಲ್ಲಿ ದೂರು ದಾಖಲಿಸಿದ್ದಾರೆ. ಪೊಲೀಸರು ಹತ್ತಿರದ ಪ್ರದೇಶಗಳ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ.
ಚಾಲಕನನ್ನು ಬಂಧಿಸಲಾಗಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಮತ್ತು ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೊಕ್ಸೊ) ಕಾಯ್ದೆಯ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಆತನ ವಿರುದ್ಧ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದ್ದು, ಆತನನ್ನು ಬಂಧಿಸಲಾಗಿದೆ.
ಲಂಡನ್​ ವೈರಸ್​ನಿಂದಾಗಿ ಮುಂಬೈನಂತೆ ಇಲ್ಲೂ ನೈಟ್​ ಕರ್ಫ್ಯೂ ಇರತ್ತಾ? ಸಿಎಂ ಏನೆಂದ್ರು ಕೇಳಿ…

ಗರ್ಭಪಾತವಾದ ಭ್ರೂಣದಿಂದ ಕೋವಿಡ್​ ಲಸಿಕೆ ತಯಾರಿಸಲು ಸಿಕ್ಕಿತು ಅನುಮತಿ!

ಹೋಂವರ್ಕ್​ ಇಲ್ಲ, ಶಿಕ್ಷೆಯೂ ಇಲ್ಲ… 30 ಗಂಟೆಯ ‘ಪವಾಡ’: ಶಾಲೆಯಲ್ಲಿ ಆಗದ್ದು ಇಲ್ಲಿ ಸಾಧ್ಯವಾಗಿದೆ!

ನೀನು ದಪ್ಪ ಇದ್ದಿ, ಡಿವೋರ್ಸ್​ ಕೊಡುತ್ತೇನೆ ಎನ್ನುತ್ತಿದ್ದಾರೆ ಪತಿ- ಅವರಿಗೆ ವಿಚ್ಛೇದನ ಸಿಗುತ್ತಾ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three × 1 =
Remember me
