ಮುಂಬೈ:ಡ್ರಗ್ಸ್‌ ಕೇಸ್‌ನಲ್ಲಿ ಆರ್ಯನ್‌ ಖಾನ್‌ ಎನ್‌ಸಿಬಿ ಬಲೆಗೆ ಬೀಳುತ್ತಿದ್ದಂತೆಯೇ ಶಾರುಖ್‌ ಖಾನ್‌ಗೆ ಭಾರಿ ಸಂಕಟ ಎದುರಾಗಿದೆ. ಇವರು ನಾಲ್ಕೈದು ವರ್ಷಗಳಿಂದ ಬ್ರ್ಯಾಂಡ್​ ಅಂಬಾಸಿಡರ್​ ಆಗಿ ಕೆಲಸ ಮಾಡುತ್ತಿದ್ದ ಏಷ್ಯುಕೇಶನಲ್​​ ಕಂಪೆನಿ ತನ್ನ ಜಾಹೀರಾತಿನಿಂದ ಶಾರುಖ್‌ ಅವರನ್ನು ತೆಗೆದುಹಾಕಿದೆ. ಈ ಜಾಹೀರಾತಿನಿಂದ ಶಾರುಖ್‌ ವಾರ್ಷಿಕವಾಗಿ ಸುಮಾರು ಐದು ಕೋಟಿ ರೂಪಾಯಿ ಸಂಪಾದನೆ ಮಾಡುತ್ತಿದ್ದರು.
2017ರಿಂದಲೂ ಈ ಕಂಪೆನಿಯ ಬ್ರ್ಯಾಂಡ್​ ಅಂಬಾಸಿಡರ್​ ಆಗಿದ್ದರು ಶಾರುಖ್‌. ಏಷ್ಯುಕೇಶನಲ್​ ಆ್ಯಪ್​ವೊಂದರ ಮುಖಾಂತರ ಮಕ್ಕಳಿಗೆ ಶಿಕ್ಷಣ ಹೇಳುವ ಜಾಹೀರಾತು ಇದು. ಆದರೆ ಮಗನಿಗೇ ಬುದ್ಧಿ ಕಲಿಸಲು, ಉತ್ತಮ ಮಾರ್ಗದರ್ಶನ ತೋರಲು ಆಗದ ತಂದೆ ಬೇರೆ ಮಕ್ಕಳಿಗೆ ಏನು ಹೇಳಿಕೊಟ್ಟಾರು ಎಂದಿರುವ ಕಂಪೆನಿ ಜಾಹೀರಾತಿನಿಂದ ಅವರನ್ನು ಹಿಂದಕ್ಕೆ ಪಡೆದಿದೆ. ಆರ್ಯನ್‌ ಖಾನ್‌ ಎನ್‌ಸಿಬಿ ಬಲೆಗೆ ಬೀಳುತ್ತಿದ್ದಂತೆಯೇ ಈ ಜಾಹೀರಾತಿನ ಬಗ್ಗೆ ಜಾಲತಾಣಗಳಲ್ಲಿ ಭಾರಿ ಟೀಕೆ ಕೇಳಿಬಂದಿದ್ದರಿಂದ ಈ ನಿರ್ಧಾರವನ್ನು ಕಂಪೆನಿ ತೆಗೆದುಕೊಂಡಿದೆ.
ಈ ಮಧ್ಯೆ, ಶಾರುಖ್ ಖಾನ್​ ಅವರ ಡ್ರೈವರ್ಗೂ ಎನ್​​ಸಿಬಿ ನೋಟಿಸ್ ಜಾರಿ ಮಾಡಿದೆ. ಈ ಪ್ರಕರಣದಲ್ಲಿ ಭಾಗಿಯಾಗಿರುವ ಶಂಕೆ ಇರುವ ಸಿನಿರಂಗದ ಹಲವರನ್ನು ಇದಾಗಲೇ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
VIDEO: ಗಂಡನ ಖುಷಿ ಮುಖ್ಯ… ಅದಕ್ಕೇ ನನಗೆ ಮೂಡ್‌ ಇಲ್ಲದಾಗ ಅಮ್ಮನನ್ನು ಅವನ ಬಳಿ ಕಳಿಸ್ತೇನೆ ಎಂದ ಸ್ಟಾರ್‌

‘ಅಮ್ಮಾ, ಸೀಮಂತಕ್ಕೆ ರೆಡಿ ಮಾಡು’ ಎಂದು ಕರೆ ಮಾಡಿದ್ದ ಮಗಳು ತವರು ಸೇರಿದ್ದು ಶವವಾಗಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + 18 =
Remember me
