ಕೋಲ್ಕತಾ:ಸಾಯುವ ಮುನ್ನ ಯಾವುದೇ ವ್ಯಕ್ತಿ ಆರೋಪಿಯ ಕುರಿತು ಏನಾದರೂ ಹೇಳಿಕೆ ನೀಡಿದ್ದರೆ (ಮರಣಪೂರ್ವ ಹೇಳಿಕೆ- dying declaration) ಅದನ್ನು ಸಾಕ್ಷಿಯನ್ನಾಗಿ ಎಂದು ಪರಿಗಣಿಸಬಹುದು ಎಂದು ಕೋಲ್ಕತಾ ಹೈಕೋರ್ಟ್​ ಮಹತ್ವದ ತೀರ್ಪು ನೀಡಿದೆ. ಒಂದು ವೇಳೆ ಸಾಯುವ ವ್ಯಕ್ತಿ ಪ್ರಜ್ಞಾಪೂರ್ವಕವಾಗಿ ಹೇಳಿಕೆ ನೀಡಿದ್ದರೆ ಅದನ್ನು ಸಾಕ್ಷಿಯನ್ನಾಗಿ ಪರಿಗಣಿಸಬಹುದು, ಆರೋಪಿಗೆ ಶಿಕ್ಷೆ ನೀಡಲು ಈ ಹೇಳಿಕೆಯನ್ನು ಬಳಸಬಹುದಾಗಿದೆ ಎಂದು ಕೋರ್ಟ್​ ಹೇಳಿದೆ.
ಕಾನೂನಿಗೆ ದೃಢೀಕರಣ ಬೇಕು ನಿಜ. ಆದರೆ, ಸಾಯುತ್ತಿರುವ ವ್ಯಕ್ತಿ ಪ್ರಜ್ಞಾಪೂರ್ವಕವಾಗಿ ಹೇಳಿಕೆ ನೀಡಿದ್ದರೆ ಅದಕ್ಕೆ ದೃಢೀಕರಣದ ಅಗತ್ಯವಿಲ್ಲ. ಆದ್ದರಿಂದ ಇದೊಂದೇ ಆಧಾರದ ಮೇಲೆ ಆರೋಪಿಯನ್ನು ಅಪರಾಧಿಯಾಗಿಸಿ ಶಿಕ್ಷೆ ನೀಡಬಹುದಾಗಿದೆ ಎಂದು ನ್ಯಾಯಮೂರ್ತಿ ಡೆಬಾಂಗ್ಸು ಬಾಸಕ್​ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.
ತನಿಖಾ ವರದಿಯಲ್ಲಿನ ನ್ಯೂನತೆಗಳ ಕಾರಣದಿಂದಾಗಿ ಆರೋಪಿಯನ್ನು ಆರೋಪಮುಕ್ತಗೊಳಿಸುವುದು ಸರಿಯಲ್ಲ. ಉಳಿದ ಸಾಕ್ಷ್ಯಾಧಾರಗಳು ಆರೋಪಿಯ ವಿರುದ್ಧವಾಗಿ ಇರುವಾಗ, ಕೇವಲ ತನಿಖಾ ಲೋಪದಿಂದಾಗಿ ಆ ವ್ಯಕ್ತಿಯನ್ನು ಆರೋಪಮುಕ್ತಗೊಳಿಸುವುದು ಸಮಂಜಸವಲ್ಲ ಎಂದಿರುವ ಕೋರ್ಟ್​, ಇಂಥ ಸಂದರ್ಭದಲ್ಲಿ ಮರಣಪೂರ್ವ ಹೇಳಕೆ ಮಹತ್ವದ ಪಾತ್ರ ವಹಿಸುತ್ತದೆ ಎಂದು ತಿಳಿಸಿದೆ.
ಘಟನೆ ವಿವರ:ದಂಪತಿ ನಡುವಿನ ಜಗಳ ಮತ್ತು ಸಾವಿನ ಪ್ರಕರಣವೊಂದರ ವಿಚಾರಣೆಯನ್ನು ಕೋರ್ಟ್​ ನಡೆಸಿತು. 2003ರಲ್ಲಿ ಇವರ ವಿವಾಹ ನಡೆದಿತ್ತು. ಆಗಿನಿಂದಲೂ ದಂಪತಿ ನಡುವೆ ಜಗಳವಾಗುತ್ತಿತ್ತು. ಒಂದು ದಿನ ಪತಿ ಸೀಮೆಎಣ್ಣೆ ಸುರಿದು ಪತ್ನಿಗೆ ಬೆಂಕಿ ಹಚ್ಚಿದ. ಸಂಪೂರ್ಣ ಸುಟ್ಟುಹೋಗಿದ್ದ ಮಹಿಳೆ ಸಾಯುವ ಮುನ್ನ ತನ್ನ ಪತಿಯ ಕೃತ್ಯವನ್ನು ತಿಳಿಸಿದ್ದಳು. ಆತ ತನಗೆ ಇಷ್ಟು ವರ್ಷಗಳವರೆಗೆ ಹೇಗೆ ಚಿತ್ರಹಿಂಸೆ ನೀಡುತ್ತಿದ್ದ ಎಂದೂ ಹೇಳಿದ್ದಳು.
ಇದರ ಆಧಾರದ ಮೇಲೆ ಸೆಷನ್ಸ್​ ಕೋರ್ಟ್​ ಜೀವಾವಧಿ ಶಿಕ್ಷೆ ವಿಧಿಸಿತ್ತು. ಕೇವಲ ಪತ್ನಿಯ ಸಾಯುವ ಪೂರ್ವ ಹೇಳಿಕೆ ಆಧಾರದ ಮೇಲೆ ಶಿಕ್ಷೆ ವಿಧಿಸಲಾಗಿದೆ ಎಂದು ದೂರಿದ್ದ ಆತ, ಈ ತೀರ್ಪನ್ನು ಹೈಕೋರ್ಟ್​ನಲ್ಲಿ ಪ್ರಶ್ನಿಸಿದ್ದ. ತನ್ನನ್ನು ಆರೋಪಮುಕ್ತಗೊಳಿಸುವಂತೆ ಹೇಳಿದ್ದ.
ಮೇಲ್ಮನವಿಯ ವಿಚಾರಣೆ ನಡೆಸಿದ ಪೀಠ, ಸೆಷನ್ಸ್​ ಕೋರ್ಟ್​ ನೀಡಿರುವ ತೀರ್ಪು ಸರಿಯಾಗಿದೆ ಎಂದು ಹೇಳುವ ಮೂಲಕ, ಮೃತ ಪತ್ನಿ ಸಾಯುವ ಮುನ್ನ ನೀಡಿರುವ ಹೇಳಿಕೆ ಈತನನ್ನು ಶಿಕ್ಷೆಗೆ ಒಳಪಡಿಸಲು ಸಾಕು ಎಂದಿದೆ.(ಏಜೆನ್ಸೀಸ್​)
ಇಡಿ, ಸಿಬಿಐ ಮನೆಗೇ ಬರ್ಲಿ ಬಿಡಿ… ಇಲ್ಲೇ ಕಚೇರಿ ಮಾಡಿ ಕೊಡುವೆ: ಕೇಂದ್ರಕ್ಕೆ ತೇಜಸ್ವಿ ಯಾದವ್ ಟಾಂಗ್

ನೋಂದಣಿಯಾಗದ ವಿಲ್​ಗೆ ಮಾನ್ಯತೆ ಇದೆಯೊ, ಇಲ್ಲವೋ? ಕಾನೂನು ಹೇಳುವುದೇನು ನೋಡಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:1 − one =
Remember me
