ವಾಷಿಂಗ್ಟನ್‌:ಕ್ಯಾನ್ಸರ್​ ಎಂಬ ಶಬ್ದ ಕೇಳಿದರೆ ನಡುಕ ಉಂಟಾಗುತ್ತದೆ. ಇದಾಗಲೇ ಕ್ಯಾನ್ಸರ್​ ಗುಣಪಡಿಸಲು ಹಲವಾರು ಔಷಧಗಳನ್ನು ಕಂಡುಹಿಡಿದಿದ್ದರೂ, ಈ ನಿಟ್ಟಿನಲ್ಲಿ ಸಂಶೋಧನೆಗಳು ನಡೆಯುತ್ತಲೇ ಇವೆ. ಅದೇ ಇನ್ನೊಂದೆಡೆ ಕೆಲವರು ಕ್ಯಾನ್ಸರ್​ ಗುಣಪಡಿಸಿಕೊಂಡಿರುವ ಉದಾಹರಣೆಗಳೂ ಇವೆ.
ಇದೀಗ ಕ್ಯಾನ್ಸರ್​ ಕ್ಷೇತ್ರದಲ್ಲಿ ವೈದ್ಯಕೀಯ ಲೋಕ ಪವಾಡವೊಂದನ್ನು ಮಾಡಿದೆ. ಕ್ಯಾನ್ಸರ್‌ ರೋಗದ ಇತಿಹಾಸದಲ್ಲೇ ಮೊದಲು ಎಂಬಂತೆ ಅಮೆರಿಕದಲ್ಲೊಂದು ಅಧ್ಯಯನ ನಡೆದಿದ್ದು, ಗುದನಾಳದ ಕ್ಯಾನ್ಸರ್‌ಗೆ ತಯಾರಿಸಲಾಗಿರುವ ಔಷಧ ಸಕ್ಸಸ್​ ಆಗಿದೆ. ಈ ಕ್ಯಾನ್ಸರ್​ಗೆ ತುತ್ತಾಗಿದ್ದ 18 ರೋಗಿಗಳಿಗೆ ಕಳೆದ 6 ತಿಂಗಳಿನಿಂದ ಡೋಸ್ಟರ್‌ಲಿಮಾಬ್‌ ಎಂಬ ಔಷಧವನ್ನು ಪರೀಕ್ಷಾರ್ಥವಾಗಿ ನೀಡಲಾಗಿತ್ತು. ಇದೀಗ ಎಲ್ಲಾ ರೋಗಿಗಳೂ ಕ್ಯಾನ್ಸರ್​ನಿಂದ ಮುಕ್ತರಾಗಿರುವುದಾಗಿ ವರದಿಯಾಗಿದೆ.
ಈ ರೋಗಿಗಳ ಮೇಲೆ ಪ್ರಯೋಗ ನಡೆಸುತ್ತಿದ್ದ ಸಂದರ್ಭದಲ್ಲಿ ಸತತ ಆರು ತಿಂಗಳು ಡೋಸ್ಟರ್‌ಲಿಮಾಬ್‌ ನೀಡಲಾಗಿದೆ. ಇದಾದ ಮೇಲೆ ಅವರನ್ನು ವಿವಿಧ ಪರೀಕ್ಷೆಗಳಿಗೆ ಒಳಪಡಿಸಲಾಗಿದೆ. ಶಾರೀರಿಕ ಪರೀಕ್ಷೆ, ಎಂಡೋಸ್ಕೋಪಿ, ಪಾಸಿಟ್ರನ್‌ ಎಮಿಷನ್‌ ಟೋಮೋಗ್ರಫಿ ಅಥವಾ ಪಿಇಟಿ ಸ್ಕ್ಯಾನ್‌ ಮತ್ತು ಎಂಆರ್‌ಐ ಸ್ಕ್ಯಾನ್‌ ಹೀಗೆ ಎಲ್ಲ ರೀತಿಯ ಪರೀಕ್ಷೆ ಮಾಡಲಾಗಿತ್ತು. ಇವೆಲ್ಲಾ ಪರೀಕ್ಷೆಯಲ್ಲಿ ಬಂದಿರುವ ಫಲಿತಾಂಶ ಕಂಡು ಖುದ್ದು ವೈದ್ಯರೇ ಅಚ್ಚರಿಗೊಂಡಿದ್ದಾರೆ. ರೋಗಿಗಳ ದೇಹದಲ್ಲಿ ಯಾವುದೇ ರೀತಿಯ ಕ್ಯಾನ್ಸರ್ ಇಲ್ಲದಿರುವುದು ಪತ್ತೆಯಾಗಿದೆ ಎಂದು ನ್ಯೂ ಇಂಗ್ಲೆಂಡ್ ಜರ್ನಲ್ ಆಫ್ ಮೆಡಿಸಿನ್‌ನಲ್ಲಿ ಪ್ರಕಟವಾಗಿದೆ. ಈ ಅಧ್ಯಯನಕ್ಕೆ ಔಷಧ ತಯಾರಕ ಕಂಪನಿ ಗ್ಲಾಕ್ಸೊ ಸ್ಮಿತ್‌ಕ್ಲೈನ್ ಕೂಡ ಬೆಂಬಲ ವ್ಯಕ್ತಪಡಿಸಿದೆ.
‘ಕ್ಯಾನ್ಸರ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಂತಹ ಸಂಶೋಧನೆ ನಡೆದಿದೆ ಎಂದು ನಾನು ಭಾವಿಸುತ್ತೇನೆ’ ಎಂದು ಮೆಮೋರಿಯಲ್ ಸ್ಲೋನ್ ಕೆಟರಿಂಗ್ ಕ್ಯಾನ್ಸರ್ ಸೆಂಟರ್‌ನ ಡಾ. ಲೂಯಿಸ್ ಎ. ಡಯಾಜ್ ಜೂನಿಯರ್ ಹೇಳಿದ್ದಾರೆ. ರೋಗಿಗಳು ಆರು ತಿಂಗಳವರೆಗೆ ಪ್ರತಿ ಮೂರು ವಾರಗಳಿಗೊಮ್ಮೆ ಔಷಧವನ್ನು ಸೇವಿಸಿದ್ದಾರೆ ಎಂದು ಅವರು ಹೇಳಿದ್ದಾರೆ.
ಈ ಕ್ಯಾನ್ಸರ್ ರೋಗಿಗಳಿಗೆ ಯಾವುದೇ ಕೀಮೋಥೆರಫಿ ಮತ್ತು ವಿಕಿರಣವನ್ನು ಚಿಕಿತ್ಸೆಯನ್ನು ನೀಡಲಾಗಿಲ್ಲ. ಈ ಚಿಕಿತ್ಸೆಯು ಹೊಸ ಭರವಸೆಯನ್ನು ಮೂಡಿಸಿದೆ. ಆದರೆ, ಈ ನಿಟ್ಟಿನಲ್ಲಿ ಇನ್ನಷ್ಟು ಅಧ್ಯಯನಗಳು ಹಾಗೂ ದೊಡ್ಡ ಮಟ್ಟದ ಪ್ರಯೋಗಗಳು ನಡೆಯಬೇಕು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ.
ಇನ್ಮುಂದೆ ರೈಲಲ್ಲಿ ನೆಮ್ಮದಿಯಿಂದ ಮಾಡಿ ನಿದ್ದೆ, ನಿಮ್ಮ ನಿಲ್ದಾಣ ಬರುತ್ತಲೇ ಎಚ್ಚರಿಸಲಿದೆ ಅಲಾರಾಮ್‌!

‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’

ಹೀಗೂ ಉಂಟು! ತನ್ನದೇ ತಿಥಿ ಕಾರ್ಯದ ದಿನವೇ ಮನೆಯಲ್ಲಿ ಪ್ರತ್ಯಕ್ಷನಾದ ಯುವಕ: ಬೆಚ್ಚಿಬಿದ್ದ ಪಾಲಕರು

23 ವರ್ಷಗಳ ಕ್ರಿಕೆಟ್ ಜೀವನಕ್ಕೆ ಮಿಥಾಲಿ ರಾಜ್​ ಗುಡ್​ಬೈ! ಅಭಿಮಾನಿಗಳು ಶಾಕ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × 3 =
Remember me
