ಮಾವ್‌ಗನ್‌ (ಲಂಡನ್‌):ಅದೃಷ್ಟ ನೆಟ್ಟಗಿದ್ದರೆ ಎಷ್ಟು ಅಡಿ ಮೇಲಿನಿಂದ ಬಿದ್ದರೂ ಏಟಾಗಲ್ಲ ಎನ್ನುವುದು ತೀರಾ ಹಳೆಯ ಮಾತು.
ಅಂಥದ್ದೇ ಒಂದು ಮಾತು ಇಲ್ಲಿ ಅನ್ವಯ ಆಗಿದೆ. ಕಾರು ನಿಯಂತ್ರಣ ತಪ್ಪಿ 20 ಅಡಿ ಮೇಲಿನಿಂದ ಕೆಳಕ್ಕೆ ಬಿದ್ದಿದೆ. ಆದರೆ ಕಾರಿನಲ್ಲಿದ್ದ ದಂಪತಿ ಮಾತ್ರ ಸುರಕ್ಷಿತವಾಗಿದ್ದಾರೆ, ಮಾತ್ರವಲ್ಲದೇ ಅವರು ಬಿದ್ದ ಸ್ಥಳದಲ್ಲಿದ್ದ ದಂಪತಿಗೆ ಸಂಭವಿಸಬಹುದಾದ ಅಪಾಯದಿಂದ ಅವರೂ ಪಾರಾಗಿದ್ದಾರೆ!
ಇಂಥದ್ದೊಂದು ಡಬಲ್‌ ಪವಾಡ ನಡೆದಿರುವುದು ಇಂಗ್ಲೆಂಡ್‌ನ ಮಾವ್‌ಗನ್ ಪೋತ್ ಬೀಚ್‌ ಬಳಿ‌.
ಬೀಚ್‌ ಮೇಲಿನ ರಸ್ತೆಯಲ್ಲಿ ದಂಪತಿ ಕಾರಿನಲ್ಲಿ ಬರುತ್ತಿದ್ದರು. ಈ ಸಮಯದಲ್ಲಿ ಕಾರಿನ ಮೇಲಿನ ಹಿಡಿತ ತಪ್ಪಿದ್ದರಿಂದ ಸುಮಾರು 20 ಅಡಿ ಮೇಲಿಂದ ಕೆಳಕ್ಕೆ ಉರುಳಿದೆ.
ಇದನ್ನೂ ಓದಿ:ಶುರುವಾಗಲಿದೆ ಕತ್ತೆಯ ಹಾಲಿನ ಡೈರಿ: ಬೆಲೆ ಕೇಳಿ ಮೂರ್ಛೆ ಹೋಗ್ಬೇಡಿ!
ಆದರೆ ಅದೃಷ್ಟ ಎಂದರೆ ಇದೇ. ಕಾರು ಬೀಳುವಾಗ ಕಾರು ಬೀಚ್ ಬಳಿಯಿದ್ದ ಟೆಂಟ್ ಒಂದರ ಮೇಲೆ‌ ಸರಿಯಾಗಿ ಬಿದ್ದಿದೆ. ಈ ಹಿನ್ನೆಲೆಯಲ್ಲಿ ಇವರು ಬಚಾವಾದರು. ಆದರೆ ಟೆಂಟ್‌ನಲ್ಲಿ ಯಾರಾದರೂ ಇದ್ದಿದ್ದರೆ, ಅವರು ಪ್ರಾಣ ಕಳೆದುಕೊಳ್ಳುವ ಅಪಾಯವಿತ್ತು. ಆದರೆ ಅಲ್ಲಿದ್ದ ದಂಪತಿಯದ್ದೂ ಅದೃಷ್ಟ. ಕಾರು ಬೀಳುವ ಸ್ವಲ್ಪ ಮುಂಚೆ ಟೆಂಟ್‌ನಲ್ಲಿದ್ದ ದಂಪತಿ ಬೀಚ್ ನೋಡಲು‌ ಹೋಗಿದ್ದರಿಂದ ಪಾರಾಗಿದ್ದಾರೆ.
ಇನ್ನು 20 ಅಡಿ ಮೇಲಿಂದ ಬಿದ್ದು, ಎರಡು ಮೂರು ಪಲ್ಟಿ ಹೊಡೆದರೂ ಏರ್ ಬ್ಯಾಗ್ ಓಪನ್ ಆಗಿಲ್ಲ. ಆದರೂ ಚಾಲಕನಿಗೆ‌ ಚಿಕ್ಕ ಪುಟ್ಟ ಗಾಯ ಹೊರತು ಇನ್ಯಾವುದೇ ಅಪಾಯವಾಗಿಲ್ಲ ಎಂದು ವರದಿಯಾಗಿದೆ.
ಅರ್ಚಕರ ಭೂಸಮಾಧಿ ಸ್ಥಳದಲ್ಲಿ ಸಿಕ್ಕಿದೆ ‘ಸಮಾಧಿ ನಿರ್ಣಯ’ ಪುಸ್ತಕ! ಉತ್ತರ ಸಿಗದ ಮರಣ ರಹಸ್ಯ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − one =
Remember me
