ಲಾಲ್​ಪುರ (ಉತ್ತರಪ್ರದೇಶ):ಭೀಕರ ಅಪಘಾತವೊಂದರಲ್ಲಿ ದರ್ಗಾಕ್ಕೆ ಹೋಗುತ್ತಿದ್ದ ಐವರು ಸ್ಥಳದಲ್ಲಿಯೇ ಮೃತಪಟ್ಟಿರುವ ದಾರುಣ ಘಟನೆ ಉತ್ತರಾಖಂಡದ ಲಾಲ್​ಪುರ ಗ್ರಾಮದಲ್ಲಿ ನಡೆದಿದೆ. ಕಾರು ಮತ್ತು ಟ್ಯಾಂಕರ್ ನಡುವೆ ಡಿಕ್ಕಿ ಹೊಡೆದು ಈ ದುರ್ಘಟನೆ ಸಂಭವಿಸಿದ್ದು, ಮೃತಪಟ್ಟವರೆಲ್ಲರೂ ಕಾರಿನಲ್ಲಿ ಇದ್ದರು.
ಮೃತಪಟ್ಟವರೆಲ್ಲರೂ ಉತ್ತರಾಖಂಡದ ರಾಮ್ ನಗರದ ನಿವಾಸಿಗಳು ಎಂದು ಗುರುತಿಸಲಾಗಿದೆ. ಇವರೆಲ್ಲರೂ ವ್ಯಾಪಾರಿಗಳಾಗಿದ್ದು, ದರ್ಗಾಕ್ಕೆ ತೆರಳುತ್ತಿದ್ದರು. ರಾಮ್​ ನಗರದಿಂದ ಬಿಲ್​ಗ್ರಾಮ್ ಷರೀಫ್‌ಗೆ ಹೋಗುತ್ತಿದ್ದರು. ಒಟ್ಟೂ ಎರಡು ವಾಹನಗಳಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು.
ಮೃತಪಟ್ಟಿವರನ್ನು ಖೇತಾಡಿ ರಾಮನಗರದ ಸಗೀರ್ (35), ಮೊ.ತಾಹಿರ್ (40) ಹಾಗೂ ಮೊ. ಫರೀದ್ (35) ಹಾಗೂ ಭವಾನಿಗಂಜ್​ ನಿವಾಸಿಗಳಾದ ಮುಝಮ್ಮಿಲ್ (36), ಇಮ್ರಾನ್ ಖಾನ್ (38) ಎಂದು ಗುರುತಿಸಲಾಗಿದೆ.
ಲಾಲ್‌ಪುರ ಔಟ್‌ಪೋಸ್ಟ್ ಹೆದ್ದಾರಿ ಬಳಿ ಕಾರು ಪಂಕ್ಚರ್​ ಆಗಿಬಿಟ್ಟಿದೆ. ಆ ಸಂದರ್ಭದಲ್ಲಿ ಎದುರಿಗೆ ಟ್ಯಾಂಕರ್ ಬರುತ್ತಿತ್ತು. ಅದಕ್ಕೆ ಡಿಕ್ಕಿ ಹೊಡೆದಿದೆ. ಈ ರಭಸಕ್ಕೆ ಕಾರಿನಲ್ಲಿ ಕುಳಿತಿದ್ದ ಐವರು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಕಾರಿನಿಂದ ಹೊರ ತೆಗೆದ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ. .
ಈ ಘಟನೆ ಕುರಿತು ಇಜ್ಜತ್‌ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಾಣಾಪಾಯದಿಂದ ಪಾರಾದ ಕಿರಣ್​ ರಾಜ್​: ದೃಷ್ಟಿ ಹೆಚ್ಚಾಯ್ತು ಎಂದು ಬರೆದುಕೊಂಡ ನಟ
‘ಆ ಇನ್ಸ್‌ಪೆಕ್ಟರ್‌ನ ರೌಡಿಸಂ ನನ್ನತ್ರ ನಡಿಯಲ್ಲ, ಎಲ್ಲಾ ಮಾಡೇ ಬಂದವ ನಾನು… ಮೂರನೇ ಕಣ್ಣು ಬಿಟ್ರೆ ಅಷ್ಟೇ..’
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 8 =
Remember me
