ಜೈಪುರ:ಕಾರಿನ ಹ್ಯಾಂಡ್​ಬ್ರೇಕ್​ ಹಾಕದೇ ಇಳಿಜಾರಿನಲ್ಲಿ ಕಾರು ನಿಲ್ಲಿಸಿ ಚಾಲಕ ಹೋದ ಕಾರಣ, ಕಾರು ಉರುಳಿಬಿದ್ದು ಒಂದೇ ಕುಟುಂಬದ ಮೂವರು ಸೇರಿದಂತೆ ನಾಲ್ಕು ಮಂದಿ ದಾರುಣವಾಗಿ ಮೃತಪಟ್ಟಿದ್ದಾರೆ.
ಇಂಥದ್ದೊಂದು ದುರಂತ ನಡೆದಿರುವುದು ಹನುಮನ್‍ಗರ್ ಜಿಲ್ಲೆಯಲ್ಲಿ. ಸಿಕಾರ್​ನಿಂದ ರಾವತ್ಸರ್​ಗೆ ದಂಪತಿ ಅವರ ಮಗಳು ಹಾಗೂ ಸಂಬಂಧಿಯೊಬ್ಬರು ಕಾರಿನಲ್ಲಿ ತೆರಳುತ್ತಿದ್ದರು. ಇಂದಿರಾಗಾಂಧಿ ಕಾಲುವೆ ಸಮೀಪ ಚಾಲಕ ರಮೇಶ್​ ಕುಮಾರ್​ ಕಾರನ್ನು ನಿಲ್ಲಿಸಿ ಮೂತ್ರವಿಸರ್ಜನೆಗೆ ಹೋಗಿದ್ದಾನೆ. ಈ ಸಂದರ್ಭದಲ್ಲಿ ಆತ ಕಾರಿನ ಹ್ಯಾಂಡ್​ಬ್ರೇಕ್​ ಹಾಕಿರಲಿಲ್ಲ.
ಅದು ಇಳಿಜಾರು ಪ್ರದೇಶವಾಗಿದ್ದರಿಂದ ಹ್ಯಾಂಡ್​ಬ್ರೇಕ್​ ಇಲ್ಲದೇ ಕಾರು ಕಾಲುವೆಗೆ ಉರುಳಿಬಿದ್ದಿದೆ. ಅದರಲ್ಲಿದ್ದ ನಾಲ್ಕು ಮಂದಿ ಸ್ಥಳದಲ್ಲಿಯೇ ಅಸುನೀಗಿದ್ದಾರೆ.
ಮೃತಪಟ್ಟವರನ್ನು ವಿನೋದ್ ಕುಮಾರ್(45), ಪತ್ನಿ ರೇಣು(42) ಹಾಗೂ 15 ವರ್ಷದ ಮಗಳು ಮತ್ತು ಅವರ ಸಂಬಂಧಿಕರಾದ ಸುನೀತ ಭತಿ(40) ಎಂದು ಪೊಲೀಸರು ಗುರುತಿಸಿದ್ದಾರೆ. ಮೀನು ಹಿಡಿಯುವವರ ಸಹಾಯದಿಂದ ಶವಗಳನ್ನು ಕಾಲುವೆಯಿಂದ ಹೊರತೆಗೆಯಲಾಗಿದ್ದು, ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
ಇವರ ಕುಟುಂಬದ ಸ್ನೇಹಿತ ರಮೇಶ್ ಕುಮಾರ್ ಅವರು ಕಾರು ಚಲಾಯಿಸುತ್ತಿದ್ದರು. ಅವರ ಅಚಾತುರ್ಯದಿಂದ ಈ ಘಟನೆ ಸಂಭವಿಸಿದೆ ಎಂದು ಹುಮನ್‍ಗರ್ ಪಟ್ಟಣದ ಪೊಲೀಸ್ ಠಾಣೆ ಇನ್‍ಚಾರ್ಜ್ ಲಕ್ಷ್ಮಣ್ ಸಿಂಗ್ ಹೇಳಿದ್ದಾರೆ.
ಅಪ್ಪ ಹಾಕಿದ ಲವ್​ ಜಿಹಾದ್​​ ಕೇಸ್​- ಪುತ್ರಿ ಎಂದಳು ನಮ್ದು ಪ್ಯೂರ್​ ಲವ್​: ಹೈಕೋರ್ಟ್​ ಏನು ಹೇಳ್ತು ನೋಡಿ…

ಪಾಕ್​ ಜೈಲಿನಲ್ಲಿ 18 ವರ್ಷ ಅಕ್ರಮ ಬಂಧನ: ಭಾರತದ ಮಣ್ಣಿಗೆ ನಮಸ್ಕರಿಸಿ ಪ್ರಾಣಬಿಟ್ಟ ಹಸೀನಾ

ರೈತರ ಹೆಸರಿನಲ್ಲಿ ಗಣರಾಜ್ಯೋತ್ಸವದಂದು ಹಿಂಸಾಚಾರ: ಸಿಕ್ಕಿಬಿದ್ದ ಸಿಂಗ್​

ಇತ್ತ ಪತ್ನಿ, ಅತ್ತ ಅಮ್ಮ- ಹಾವು ಮುಂಗುಸಿಯಂತೆ ಇರುವ ಇವರ ನಡುವೆ ಸಿಲುಕಿ ಒದ್ದಾಡುತ್ತಿದ್ದೇನೆ; ಪರಿಹಾರ ಹೇಳಿ ಪ್ಲೀಸ್​…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:19 + one =
Remember me
