ಮೊಹಾಲಿ (ಪಂಜಾಬ್):ವಾಹನ ಚಲಾಯಿಸುತ್ತಿದ್ದ ವೇಳೆ ಸೈಕಲ್‌ ಸವಾರನ ಮೇಲೆ ಕಾರು ಹತ್ತಿಸಿರುವ ಚಾಲಕನೊಬ್ಬ, ಮೃತಪಟ್ಟ ಸೈಕಲ್‌ ಸವಾರನ ಶವವನ್ನು ಕಾರಿನ ಮೇಲೆಯೇ ಹಾಕಿಕೊಂಡು 10 ಕಿ.ಮೀ ಸಾಗಿರುವ ಭಯಾನಕ ಘಟನೆ ಪಂಜಾಬ್‌ನ ಮೊಹಾಲಿಯಲ್ಲಿ ನಡೆದಿದೆ.
ನಿರ್ಮಲ್‌ ಸಿಂಗ್‌ ಎಂಬಾತ ಇಂಥದ್ದೊಂದು ಕೃತ್ಯ ಎಸಗಿದ್ದಾರೆ. ಅಪಘಾತಕ್ಕೀಡಾಗಿದ್ದ ಸೈಕಲ್ ಸವಾರನ ಮೃತದೇಹ ಕಾರಿನ ಟಾಪ್ ಮೇಲೆ ಹೊತ್ತು 10 ಕಿ.ಮೀ ದೂರು ಪ್ರಯಾಣಿಸಿದ್ದಾನೆ. ಇದರ ವಿಡಿಯೋ ವೈರಲ್‌ ಆಗಿದ್ದು, ನಿರ್ಮಲ್ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಅತಿ ವೇಗದಿಂದ ಕಾರು ಚಾಲನೆ ಮಾಡುತ್ತಿದ್ದ ಸಿಂಗ್‌. ಈ ವೇಳೆ ಸೈಕಲ್‌ ಸವಾರ ಎದುರುಗಡೆಯಿಂದ ಸೈಕಲ್‌ ಮೇಲೆ ಸವಾರನೊಬ್ಬ ಬರುತ್ತಿದ್ದ. ಸಿಂಗ್‌ ಆತನ ಮೇಲೆ ಕಾರು ಹಾಯಿಸಿಬಿಟ್ಟಿದ್ದಾನೆ. ಸೈಕಲ್‌ ಸವಾರ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಮುಂದೆ ಯಾರಿಗೂ ತಿಳಿಯದಂತೆ ಶವವನ್ನು ಎಲ್ಲಿಯಾದರೂ ಎಸೆದು ಬರೋಣ ಎಂದುಕೊಂಡ ಸಿಂಗ್‌ ಅದನ್ನು ಕಾರಿನ ಮೇಲೆ ಹಾಕಿಕೊಂಡು ವೇಗದಲ್ಲಿ ಚಲಾಯಿಸಿದ್ದಾನೆ.
ನಂತರ ಸುಮಾರು 10 ಕಿ.ಮೀ ವರೆಗೆ ಕಾರು ಚಲಾಯಿಸಿಕೊಂಡು ಹೋಗಿ, ನಿರ್ಜನ ಪ್ರದೇಶದಲ್ಲಿ ಮೃತ ದೇಹ ಬೀಸಾಕಿ ಪರಾರಿಯಾಗಿದ್ದಾನೆ. ಆದರೆ ಈತನ ಈ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದರ ಆಧಾರದ ಮೇಲೆ ಸಿಂಗ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ಈ ಭಯಾನಕ ವಿಡಿಯೋ ನೋಡಿ: (ಕೃಪೆ The Tribune)

ಕ್ಷಣಕ್ಷಣದ ಮಾಹಿತಿಗಾಗಿ ವಿಜಯವಾಣಿ ಫೇಸ್​ಬುಕ್​ ಪೇಜ್​ ಲೈಕ್ಸ್​ ಮಾಡಿ

ಉನ್ನಾವ್‌- ದಲಿತ ಬಾಲಕಿಯರ ಸಾವಿನ ಕೇಸ್‌ಗೆ ಟ್ವಿಸ್ಟ್‌: ಕೊನೆಗೂ ಸತ್ಯ ಬಾಯಿ ಬಿಟ್ಟ ಯುವಕ

VIDEO: ಮಂಗಳನ ಅಂಗಳದಲ್ಲಿ ಪರ್ಸೆವೆರೆನ್ಸ್ ರೋವರ್: ಜಗತ್ತಿನ ಕಣ್ಣು ಭಾರತದ ಈ ಕುವರಿಯತ್ತ…

ಇವರೇ ನೋಡಿ ಗೂಗಲ್​ ದಾದಿ… ಫೋನ್​ ನಂಬರ್​ಗಳ ನಡೆದಾಡುವ ವಿಶ್ವಕೋಶ ಇವರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four × 1 =
Remember me
