ಚಿತ್ತಾಪುರ (ತೆಲಂಗಾಣ):ರಸ್ತೆಯ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿದ ಕಾರೊಂದು ಬಾವಿಯಲ್ಲಿ ಬಿದ್ದು ಅದರಲ್ಲಿದ್ದ ತಾಯಿ ಮತ್ತು ಮಗ ಮೃತಪಟ್ಟಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. ಇವರ ರಕ್ಷಣೆಗೆ ಹೋಗಿದ್ದ ಈಜುಗಾರ ಕೂಡ ಮೃತಪಟ್ಟಿದ್ದಾರೆ.
ಸಿದ್ದಿಪೇಟ್ ಜಿಲ್ಲೆಯ ದುಬ್ಬಾಕ ಮಂಡಲ್​ನ ಚಿತ್ತಾಪುರದಲ್ಲಿ ಈ ಘಟನೆ ಸಂಭವಿಸಿದೆ. ತಾಯಿ ಮತ್ತು ಮಗ ಕಾರಿನಲ್ಲಿ ರಾಮಯಂಪೇಟೆಯಿಂದ ಸಿದ್ದಿಪೇಟ್​​ ಕಡೆಗೆ ಹೊರಟಿದ್ದರು. ಈ ವೇಳೆ ನಿಯಂತ್ರಣ ತಪ್ಪಿ ಕಾರು ಬಾವಿಯೊಳಗೆ ಬಿದ್ದಿದೆ. ಘಟನೆಯಲ್ಲಿ ಮೇದಕ್ ಜಿಲ್ಲೆಯ ನಿಜಾಂಪೇಟ್​​ ಮಂಡಲದ ನಂದಿಗಾಮ ಗ್ರಾಮದ ಭಾಗ್ಯಲಕ್ಷ್ಮಿ ಹಾಗೂ ಅವರ ಪುತ್ರ 26 ವರ್ಷದ ಅಕುಲ್‌ ಪ್ರಶಾಂತ್‌ ಮೃತಪಟ್ಟಿದ್ದಾರೆ. ಇವರನ್ನು ರಕ್ಷಿಸಲು ಹೋದ ನರಸಿಂಹಲು ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸ್ಥಳೀಯರ ಸಹಾಯದಿಂದ ಕಾರ್ಯಾಚರಣೆ ನಡೆಸಿ, ಬಾವಿಯಲ್ಲಿದ್ದ ನೀರನ್ನು ಮೋಟಾರುಗಳ ಮೂಲಕ ಖಾಲಿ ಮಾಡಿಸಿದ್ದಾರೆ. ನಂತರ ಕ್ರೇನ್ ಸಹಾಯದಿಂದ ಕಾರು ಹಾಗೂ ಮೃತದೇಹಗಳನ್ನು ಹೊರತೆಗೆದಿದ್ದಾರೆ.
ಮೊದಲ ಪತ್ನಿಯನ್ನು ಕೊಂದು ಜೈಲು ಸೇರಿದ: ಹೊರಗೆ ಬಂದು ಮೂವರ ಕೊಲೆ ಮಾಡಿದ!

ತಿರುಪತಿಯಲ್ಲಿ ಮತ್ತೆ ಭೂಕುಸಿತ: ಪ್ರಯಾಣಿಕರು ಸ್ವಲ್ಪದರಲ್ಲಿ ಬಚಾವ್‌- ಟ್ರಿಪ್‌ಗೆ ಹೋಗೋದಿದ್ರೆ ಕ್ಯಾನ್ಸಲ್‌ ಮಾಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + fourteen =
Remember me
