ನವದೆಹಲಿ:ಮನೆಯಲ್ಲಿ ಮಕ್ಕಳು ಇದ್ದರೆ ಕಾರ್ಟೂನ್‌ ಶಿಂಚನ್‌ ಗೊತ್ತೇ ಇರುತ್ತದೆ. ಮಕ್ಕಳ ಅಚ್ಚುಮೆಚ್ಚಿನ ಕಾರ್ಟೂನ್‌ ಪೈಕಿ ಈ ಶಿಂಚನ್‌ ಕೂಡ ಒಂದು.
ಆದರೆ ಇದೇ ಶಿಂಚನ್ ಈಗ ಕಾಲೇಜೊಂದರಲ್ಲಿ ಪರೀಕ್ಷೆ ಬರೆದು ಬಿಎಸ್ಸಿ ಆನರ್ಸ್ ಮೆರಿಟ್ ಲಿಸ್ಟ್‌ನಲ್ಲಿ ಮೊದಲ ಹೆಸರು ಗಳಿಸಿದೆ ಎಂದರೆ ನಂಬುವಿರಾ?
ನೀವು ನಂಬದೇ ಹೋದರೂ ಉತ್ತರ ಬಂಗಾಳದ ಸಿಲಿಗುರಿ ಕಾಲೇಜಿನ ಬಿಎಸ್ಸಿ ಆನರ್ಸ್ ಮೆರಿಟ್ ಪಟ್ಟಿಯಲ್ಲಿ ಇದರ ಹೆಸರು, ಫೋಟೋ ಜತೆ ಇದು ಪಡೆದಿರುವ ಅಂಕಗಳು ಕೂಡ ಕಾಣಿಸಿ, ಕಾಲೇಜಿನಲ್ಲಿ ಕೋಲಾಹಲ ಸೃಷ್ಟಿಸಿದ ಘಟನೆ ನಡೆದಿದೆ.
ಕಳೆದ ವಾರವಷ್ಟೇ ಇದೇ ರೀತಿ ಕೋಲ್ಕತಾದ ಬಿಎ ಆನರ್ಸ್‌ ಪದವಿಯ ಪಟ್ಟಿಯಲ್ಲಿ ಖ್ಯಾತ ಬಾಲಿವುಡ್‌ ತಾರೆ ಸನ್ನಿ ಲಿಯೋನ್‌ ಹೆಸರು ಕಾಣಿಸಿಕೊಂಡು, ಅದೂ ಟಾಪರ್‌ ಆಗಿ ಕಾಣಿಸಿಕೊಂಡು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ದಂಗಾದ ಘಟನೆ ನಡೆದಿತ್ತು.ಅದು ಭಾರಿ ಸುದ್ದಿ ಮಾಡುತ್ತಿದ್ದಂತೆಯೇ ಇತ್ತ ಬಂಗಾಳದ ಕಾಲೇಜಿನಲ್ಲಿ ಕಾರ್ಟೂನ್‌ ಪರೀಕ್ಷೆ ಬರೆದು ಟಾಪರ್‌ ಲಿಸ್ಟ್‌‌ನಲ್ಲಿ ಹೆಸರು ಗಳಿಸಿದೆ!
ಹಾಗೆಂದು ಕನ್‌ಫ್ಯೂಸ್‌ ಆಗುವುದು ಬೇಡ. ಅಷ್ಟಕ್ಕೂ ಆಗಿರುವುದು ಏನೆಂದರೆ, ಈಗ ಕಾಲೇಜುಗಳ ಪ್ರವೇಶಕ್ಕೆ ಆನ್‌ಲೈನ್‌ ಮೂಲಕ ಅರ್ಜಿ ಕರೆಯಲಾಗುತ್ತಿದೆ. ಕಳೆದ ವಾರ ನಟಿ ಸನ್ನಿ ಲಿಯೋನ‌ ಹೆಸರು, ಫೋಟೋ ಬಳಸಿಕೊಂಡು ಯಾರೋ ಕಿಡಿಗೇಡಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ನಕಲಿ ಅಂಕಪಟ್ಟಿ ತಯಾರಿಸಿ ಅದು ಸನ್ನಿ ಲಿಯೋನ್‌ ಅವರದ್ದೇ ಎಂದು ಬಿಂಬಿಸಿ ಟಾಪರ್‌ ಲಿಸ್ಟ್‌ನಲ್ಲಿ ಹೆಸರು ಹಾಕಿದ್ದಾರೆ.
ಇದನ್ನೂ ಓದಿ:ಪದವಿ ಕಾಲೇಜಿಗೆ ಪ್ರವೇಶ ಪಡೆದ ಸನ್ನಿ ಲಿಯೋನ್? ಉಪನ್ಯಾಸಕರು, ವಿದ್ಯಾರ್ಥಿಗಳಲ್ಲಿ ಸಂಚಲನ!
ಅದು ಸಾಕಷ್ಟು ಸುದ್ದಿಯಾಗಿದ್ದರಿಂದ ಇತ್ತ ಬಂಗಾಳದಲ್ಲಿ ಇನ್ನಾರೋ ಕಿಡಿಗೇಡಿಗಳು ಕಾರ್ಟೂನ್‌ ಶಿಂಚನ್‌ ಹೆಸರಿನಲ್ಲಿ ಇದೇ ರೀತಿ ಆನ್‌ಲೈನ್‌ ಅರ್ಜಿ ಸಲ್ಲಿಸಿ, ನಕಲಿ ಅಂಕಪಟ್ಟಿ ಹಾಕಿದ್ದು, ಟಾಪರ್‌ ಲಿಸ್ಟ್‌ನಲ್ಲಿ ಕಾಣಿಸಿಕೊಂಡಿದೆ.ಈ ಬಗ್ಗೆ ತಿಳಿಯುತ್ತಲೇ ಅದನ್ನು ಕಾಲೇಜಿನ ಆಡಳಿತ ಮಂಡಳಿ ಡಿಲೀಟ್‌ ಮಾಡಿದ್ದು, ಕಿಡಿಗೇಡಿಗಳನ್ನು ಪತ್ತೆಹಚ್ಚುವಲ್ಲಿ ನಿರತವಾಗಿದ್ದಾರೆ.
ಈ ಕಾಲೇಜು ಮಾತ್ರವಲ್ಲದೇ ಇತರ ನಾಲ್ಕು ಕಾಲೇಜುಗಳಲ್ಲಿನ ಅರ್ಹತಾ ಪಟ್ಟಿಯಲ್ಲಿಯೂ ಇದೇ ರೀತಿ ಬೇರೆ ಬೇರೆ ಹೆಸರುಗಳು ಕಾಣಿಸಿಕೊಂಡಿರುವುದರಿಂದ ಕಾಲೇಜಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಗಾಯಕ ನೇಹಾ ಕಕ್ಕರ್ ಅವರ ಹೆಸರು ಕೂಡ ಇತ್ತೀಚೆಗೆ ಮಣಿಕ್ಚಕ್ ಕಾಲೇಜಿನ ಬಿಎ ಇಂಗ್ಲಿಷ್ (ಆನರ್ಸ್) ಮೆರಿಟ್ ಪಟ್ಟಿಯಲ್ಲಿ ಕಾಣಿಸಿಕೊಂಡಿತ್ತು.
ಕರೊನಾ ಸೋಂಕು: ಸಚಿವ ಈಶ್ವರಪ್ಪ ಆಸ್ಪತ್ರೆಗೆ ದಾಖಲು

ಹೈಸ್ಕೂಲ್‌ ಮುಗಿಸಿ 18 ವರ್ಷಗಳ ಬಳಿಕ ಈ ಅಪ್ಪ ಕಾಲೇಜು ಸೇರಿದ್ದು ಯಾಕೆ ಗೊತ್ತಾ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:twelve − 1 =
Remember me
