ಜೈಪುರ:ನೌಕರಿ ನೀಡುವುದಾಗಿ ಭರವಸೆ ನೀಡಿ, ಕಳೆದ 10 ತಿಂಗಳಿನಲ್ಲಿ ಇಬ್ಬರು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿರುವ ಗಂಭೀರ ಆರೋಪವನ್ನು ಬಿಜೆಪಿ ಶಾಸಕ ಎದುರಿಸುತ್ತಿದ್ದಾರೆ.
ರಾಜಸ್ಥಾನದ ಗೋಗುಂಡ ವಿಧಾನಸಭೆ ಕ್ಷೇತ್ರದ ಬಿಜೆಪಿ ಶಾಸಕ ಪ್ರತಾಪ್ ಭೀಲ್ ವಿರುದ್ಧ ಕಳೆದ 10 ತಿಂಗಳಲ್ಲಿ ಎರಡು ರೇಪ್‌ ಕೇಸ್‌ ದಾಖಲಾಗಿದೆ. ಒಂದನೇ ಪ್ರಕರಣದಲ್ಲಿ ಕೆಲಸ ಕೊಡಿಸುವ ಭರವಸೆ ನೀಡಿ ನಂತರ ಮದುವೆಯಾಗುವುದಾಗಿ ಹೇಳಿ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ್ದರೆ, ಇನ್ನೊಂದರಲ್ಲಿ ಮದುವೆಯಾಗುವುದಾಗಿ ನಂಬಿಸಿ ರೇಪ್‌ ಮಾಡಿರುವ ಆರೋಪವಿದ್ದು, ಈ ಸಂಬಂಧ 37 ವರ್ಷ ಮಹಿಳೆ ದೂರಿದ್ದಾರೆ.
ತನ್ನನ್ನು ಮದುವೆಯಾಗುವುದಾಗಿ ಹೇಳಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದಾರೆ ಎಂದು ಅಂಬಾಮಾತಾ ಪೊಲೀಸ್ ವರಿಷ್ಠಾಧಿಕಾರಿ ಬಳಿ ಯುವತಿಯೊಬ್ಬಳು ನಿನ್ನೆ ದೂರಿದ್ದು, ಹತ್ತು ತಿಂಗಳ ಹಿಂದೆ ಇದೇ ರೀತಿ ಇನ್ನೊಬ್ಬ ಯುವತಿ ಕೇಸ್‌ ದಾಖಲು ಮಾಡಿದ್ದಳು. ಆಗಿನ ಕೇಸ್‌ಗೆ ಸಂಬಂಧಿಸಿದಂತೆ ಸಿಐಡಿ ತನಿಖೆ ನಡೆಯುತ್ತಿರುವ ನಡುವೆಯೇ ಇನ್ನೊಂದು ದೂರು ದಾಖಲಾಗಿದೆ.
‘ಕೆಲಸ ಕೊಡಿಸುವಂತೆ ಪ್ರತಾಪ್ ಭೀಲ್ ಅವರನ್ನು ಸಂಪರ್ಕಿಸಿದ್ದೆ. ಅವರು ಭರವಸೆ ನೀಡಿದ್ದರು. ಇದೇ ವಿಷಯ ಮಾತನಾಡಲು ಪದೇ ಪದೇ ಕರೆಯುತ್ತಿದ್ದರು. ನಾನು ಹೋದಾಗಲೆಲ್ಲಾ ಅತ್ಯಾಚಾರ ಮಾಡುತ್ತಿದ್ದರು ಎಂದು ಇದೀಗ 37 ವರ್ಷದ ಮಹಿಳೆ ಹೇಳೀದ್ದಾರೆ. ನಂತರ ಮದುವೆಯಾಗುವ ಭರವಸೆ ನೀಡಿದ್ದರು. ನಾನು ನಂಬಿದ್ದೆ. ಪುನಃ ಕರೆಸಿಕೊಂಡು ರೇಪ್‌ ಮಾಡಿ ಮೋಸ ಮಾಡಿದ್ದಾರೆ ಎಂದು ಮಹಿಳೆ ಹೇಳಿದ್ದಾರೆ.
ತಮ್ಮ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ. ಚುನಾವಣೆ ಶೀಘ್ರದಲ್ಲಿ ಇರುವ ಹಿನ್ನೆಲೆಯಲ್ಲಿ ಈ ರೀತಿ ಮಾಡಿಸಲಾಗುತ್ತಿದೆ ಎಂದು ಶಾಸಕ ಆರೋಪಿಸಿದ್ದಾರೆ.
‘20 ವರ್ಷದಲ್ಲಿ ರಾಜ್‌ ಕುಟುಂಬದಲ್ಲೇ ಪುನೀತ್‌ ಹುಟ್ತಾನೆ… ನಾನು ಇರ್ತೇನೋ ಗೊತ್ತಿಲ್ಲ.. ಆದ್ರೆ ಈ ಮಾತು ಬರೆದಿಟ್ಟುಕೊಳ್ಳಿ…’

VIDEO: ಟಿಪ್ಪು ಸುಲ್ತಾನನ ಸಿಂಹಾಸನದ ಕಳಸ ಹರಾಜಿಗೆ- ಇದರ ಬೆಲೆ 15 ಕೋಟಿ ರೂ! ಅಪೂರ್ವ ವಿಡಿಯೋ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 + 13 =
Remember me
