ಭಿಲ್ವಾರ (ರಾಜಸ್ಥಾನ):ರಾಜಸ್ಥಾನದ ಬಿಜೆಪಿ ಮುಖಂಡ ಭನ್ವರ್ ಸಿಂಗ್ ಪಾಲ್ಡಾ ಅವರ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಾಗಿದೆ. ರಿವಾಲ್ವರ್ ತೋರಿಸಿ ಬೆದರಿಸಿ ತಮ್ಮ ಮೇಲೆ ಅತ್ಯಾಚಾರ ನಡೆಸಿರುವುದಾಗಿ ಭಿಲ್ವಾರಾ ಜಿಲ್ಲೆಯ ಸಬ್ ಇನ್ಸ್‌ಪೆಕ್ಟರ್ ದೂರು ದಾಖಲು ಮಾಡಿದ್ದಾರೆ.
2018ರಲ್ಲಿ ನಡೆದಿದೆ ಎನ್ನಲಾದ ಈ ಘಟನೆಗೆ ಸಂಬಂಧಿಸಿದಂತೆ ಮಹಿಳೆ ಇದೀಗ ದೂರು ದಾಖಲಿಸಿದ್ದಾರೆ. ಪಾಲ್ಡಾ ಅತ್ಯಾಚಾರ ಮಾಡಿ, ತನ್ನ ಅಶ್ಲೀಲ ಫೋಟೋಗಳನ್ನು ತೆಗೆದಿದಿದ್ದಾನೆ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ, ಅವುಗಳನ್ನು ವೈರಲ್​ ಮಾಡುವುದಾಗಿ ಬೆದರಿಕೆ ಒಡ್ಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಘಟನೆಗೆ ಸಂಬಂಧಿಸಿದಂತೆ ಪಾಲ್ಡಾ ಹಾಗೂ ಅವರ ಕಾರು ಚಾಲಕ ಸೇರಿದಂತೆ 11 ಜನರ ವಿರುದ್ಧ ದೂರು ದಾಖಲಾಗಿದೆ.
ದೂರಿನಲ್ಲಿ ಇರುವುದು ಏನು?2018ರಲ್ಲಿ ಒಮ್ಮೆ ಭನ್ವಾರ್‌ ಕಾರು ಕೆಟ್ಟುಹೋಗಿತ್ತು. ನಾನು ವಾಸವಿದ್ದ ಕ್ವಾರ್ಟರ್ಸ್‌ ಬಳಿ ಈ ಘಟನೆಯಾಗಿತ್ತು. ಆಗ ಭನ್ವರ್ ಸಿಂಗ್ ಮನೆಗೆ ಬಂದಿದ್ದ. ಕೆಲಕಾಲ ಇದ್ದು ತೆರಳುವುದಾಗಿ ತಿಳಿಸಿದ್ದ. ನಾನು ಒಪ್ಪಿದ್ದೆ. ಆ ಸಮಯದಲ್ಲಿ ನಾನು ಅಡುಗೆ ಕೋಣೆಯಲ್ಲಿದ್ದೆ. ಹಿಂದಿನಿಂದ ಬಂದು ಆತ ದೌರ್ಜನ್ಯ ಎಸಗಿದ್ದಾನೆ ಎಂದು ಮಹಿಳಾ ಅಧಿಕಾರಿ ದೂರಿನಲ್ಲಿ ತಿಳಿಸಿದ್ದಾರೆ. ಇದಾದ ಮೇಲೆ ಇನ್ನೊಂದು ಸಲ ಅಜ್ಮೀರ್‌ನಿಂದ ಭಿಲ್ವಾರಕ್ಕೆ ತೆರಳುತ್ತಿದ್ದಾಗ ಆತ ರಿವಾಲ್ವರ್ ತೋರಿಸಿ ಅತ್ಯಾಚಾರವೆಸಗಿದ್ದಾನೆ. ಬಳಿಕ ಅಶ್ಲೀಲ ಫೋಟೋ ತೆಗೆದುಕೊಂಡಿದ್ದು, ವೈರಲ್​ ಮಾಡುವುದಾಗಿ ಬೆದರಿಸಿದ್ದಾನೆ ಎಂದು ದೂರಿನಲ್ಲಿ ಸಂತ್ರಸ್ತೆ ತಿಳಿಸಿದ್ದಾರೆ.
ಭಾರತೀಯ ದಂಡ ಸಂಹಿತೆಯ ಸೆಕ್ಷನ್ 450, 376 ಡಿ, 3762 ಎನ್, 354, 506, 365, 323 ಮತ್ತು 120ಬಿ ಅಡಿ ಪ್ರಕರಣ ದಾಖಲಾಗಿದೆ.
ವಿವಾಹೇತರ ಸಂಬಂಧದಿಂದ ಮಗು ಆದರೆ ಆಕೆ ಪುರುಷನ ಪತ್ನಿ ಎನಿಸಿಕೊಳ್ತಾಳಾ? ಕಾನೂನು ಏನು ಹೇಳುತ್ತದೆ?

ನಟಿಯರಿಬ್ಬರ ಜಟಾಪಟಿ: ಜಾಲತಾಣದಲ್ಲಿ ಬಿಸಿಬಿಸಿ ವಾತಾವರಣ ಸೃಷ್ಟಿಸಿದ ‘ಶಮಿತಾ ಆಂಟಿ’!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 + 15 =
Remember me
