ಮುಂಬೈ:ಬಾಲಿವುಡ್‌ನ ಸುಪ್ರಸಿದ್ಧ ಗಾಯಕ ಮತ್ತು ನಟ ಯೋ ಯೋ ಹನಿ ಸಿಂಗ್ ಅವರ ವಿರುದ್ಧ ಇದೀಗ ಲೈಂಗಿಕ ದೌರ್ಜನ್ಯದ ಕೇಸ್‌ ದಾಖಲಾಗಿದೆ. ಈ ಕೇಸ್‌ ಅನ್ನು ದಾಖಲು ಮಾಡಿರುವವರು ಖುದ್ದು ಅವರ ಪತ್ನಿ ಶಾಲಿನಿ ತಲ್ವಾರ್‌.
ಶಾಲಿನಿ ಅವರು ಲೈಂಗಿಕ ದೌರ್ಜನ್ಯದ ಕೇಸ್‌ ಮಾತ್ರವಲ್ಲದೇ ಯೋ ಯೋ ವಿರುದ್ಧ ಕೌಟುಂಬಿಕ ಹಿಂಸೆ, ಮಾನಸಿಕ ಕಿರುಕುಳ ಮತ್ತು ಆರ್ಥಿಕ ವಂಚನೆ ಪ್ರಕರಣ ಕೂಡ ದಾಖಲು ಮಾಡಿದ್ದಾರೆ. ‘ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣೆ ಕಾಯ್ದೆ’ ಅಡಿ ದೆಹಲಿಯ ಟಿಸ್ ಹಜಾರಿ ಕೋರ್ಟ್‌ನಲ್ಲಿ ಈ ಪ್ರಕರಣ ದಾಖಲಾಗಿದೆ.
2011ರಲ್ಲಿ ಇವರ ಮದುವೆಯಾಗಿದ್ದು, ಅಂದಿನಿಂದಲೂ ಗಂಡ ತಮ್ಮ ಮೇಲೆ ಸಿಕ್ಕಾಪಟ್ಟೆ ದೌರ್ಜನ್ಯ ಮಾಡುತ್ತಿದ್ದಾರೆ ಎನ್ನುವುದು ಶಾಲಿನಿ ಅವರ ಆರೋಪ. ಕಳೆದ ಬಾರಿ ಕೋವಿಡ್‌ಗೆ ತುತ್ತಾದಾಗ ಸಾಯುವ ಸ್ಥಿತಿಯಲ್ಲಿ ಇದ್ದರೂ ಗಂಡ ಸ್ವಲ್ಪವೂ ಕೇರ್‌ ಮಾಡಲಿಲ್ಲ. ಎಷ್ಟು ಕರೆ ಮಾಡಿದರೂ ನನ್ನ ಸಹಾಯಕ್ಕೆ ಬರಲಿಲ್ಲ ಎಂದು ಅವರು ಆರೋಪಿಸಿದ್ದಾರೆ.
ತಮಗೆ 20 ಕೋಟಿ ರೂಪಾಯಿ ಪರಿಹಾರ, ತಿಂಗಳಿಗೆ 5 ಲಕ್ಷ ರೂಪಾಯಿ ಹಣ, ಮುಂಬೈನ ಪ್ರತಿಷ್ಠಿತ ಜಾಗದಲ್ಲಿ ಫುಲ್‌ ಫರ್ನಿಷ್‌ ಆಗಿರುವ ಬಂಗಲೆ ನೀಡಲು ಆದೇಶಿಸಬೇಕು ಹಾಗೂ ತಾನು ಮದುವೆಯ ವೇಳೆ ನೀಡಿರುವ ವರದಕ್ಷಿಣೆಯನ್ನು ಸಂಪೂರ್ಣವಾಗಿ ಹಿಂದಿರುಗಿಸಲು ಗಂಡನಿಗೆ ಆದೇಶಿಸಬೇಕು ಎಂದು ಶಾಲಿನಿ ಕೋರಿದ್ದಾರೆ.
ಈ ಪ್ರಕರಣವನ್ನು ವಿಚಾರಣೆಗೆ ಕೈಗೆತ್ತಿಕೊಂಡಿರುವ ಕೋರ್ಟ್‌ ಯೋ ಯೋ ಅವರಿಗೆ ನೋಟಿಸ್‌ ಜಾರಿಗೊಳಿಸಿದ್ದು ಇದೇ 28ರ ಒಳಗೆ ಉತ್ತರಿಸುವಂತೆ ಹೇಳಿದೆ.
ಯೋ ಯೋ ಹನಿ ಸಿಂಗ್‌ ಅವರ ನಿಜವಾದ ಹೆಸರು ಹಿರ್ದೇಶ್ ಸಿಂಗ್. ದೀಪಿಕಾ ಪಡುಕೊಣೆ ಮತ್ತು ಸೈಫ್ ಅಲಿ ಖಾನ್ ಚಿತ್ರ ಕಾಕ್ ಟೈಲ್‌ನ ಆಂಗ್ರೇಜಿ ಬೀಟ್ ಹಾಡು ಸೂಪರ್ ಹಿಟ್ ಆದ ಮೇಲೆ ಯೋ ಯೋ ಭಾರಿ ಖ್ಯಾತಿ ಗಳಿಸಿದರು.
ಡಿಸಿಎಂ ಹುದ್ದೆಗೆ ಬೀಳುತ್ತಾ ಕತ್ತರಿ? ನೂತನ ಸಚಿವರಾರು? ಇಂದು ಸಿಗಲಿದೆ ಉತ್ತರ- ಎಲ್ಲರ ಚಿತ್ತ ರಾಜಭವನದತ್ತ

ಭರ್ಜರಿ ಬಿರಿಯಾನಿ ತಂದಿಟ್ಟ ಸಂಕಟ: ವರ್ತೂರ್​ ಪ್ರಕಾಶ್​ ಸೇರಿದಂತೆ 105 ಮಂದಿ ವಿರುದ್ಧ ಎಫ್​ಐಆರ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:4 × 1 =
Remember me
