ಹೈದರಾಬಾದ್‌:ಕಾಶ್ಮೀರಿ ಪಂಡಿತರ ಮೇಲೆ ನಡೆಯುತ್ತಿರುವ ನರಮೇಧಕ್ಕೂ, ಗೋಹತ್ಯೆ ಕಳ್ಳರ ಮೇಲೆ ನಡೆಯುತ್ತಿರುವ ದಾಳಿಗೂ ಯಾವುದೇ ವ್ಯತ್ಯಾಸವಿಲ್ಲ. ಎರಡೂ ಒಂದೇ ರೀತಿಯದ್ದು ಎಂದು ಹೇಳಿರುವ ನಟಿ ಸಾಯಿ ಪಲ್ಲವಿ ವಿರುದ್ಧ ಎಲ್ಲೆಡೆ ಭಾರಿ ಆಕ್ರೋಶ ವ್ಯಕ್ತವಾಗಿದೆ.
ತಮ್ಮ ಹೊಸ ಸಿನಿಮಾ ‘ವಿರಾಟ ಪರ್ವಂ’ ಸಿನಿಮಾದ ಪ್ರಚಾರದ ವೇಳೆ ಯೂಟ್ಯೂಬ್‌ ಚಾನೆಲ್‌ವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಸಾಯಿ ಪಲ್ಲವಿ ಈ ರೀತಿ ಮಾತನಾಡಿದ್ದರು, ಧಾರ್ಮಿಕವಾಗಿ ನೋಡುವುದಾದರೆ ಕಾಶ್ಮೀರಿ ಪಂಡಿತರ ಹತ್ಯೆ ಹಾಗೂ ಗೋವು ಕಳ್ಳಸಾಗಾಣಿಕೆದಾರರನ್ನು ಜೈಶ್ರೀರಾಮ್​ ಎನ್ನುವ ಮೂಲಕ ಹಲ್ಲೆ ಮಾಡುತ್ತಿರುವುದು ಒಂದೇ ಅಲ್ಲವೇ ಎಂದಿದ್ದಾರೆ.
ಇದೀಗ ಇವರ ವಿರುದ್ಧ ದೂರು ದಾಖಲಾಗಿದೆ. ಭಜರಂಗ ದಳದ ನಾಯಕರು ದೂರು ನೀಡಿದ್ದಾರೆ. ಅದೇ ಇನ್ನೊಂದೆಡೆ ಬಿಜೆಪಿಯ ಕೆಲವು ಕಾರ್ಯಕರ್ತರು ಕೂಡ ಈಕೆಯ ವಿರುದ್ಧ ಎಲ್ಲೆಡೆ ದೂರು ದಾಖಲು ಮಾಡುವಂತೆ ಹೇಳಿಕೆ ನೀಡಿದ್ದಾರೆ. ಸದ್ಯ ಬಜರಂಗದಳದ ಕಾರ್ಯಕರ್ತರಿಂದ ಹೈದರಾಬಾದ್‌ನ ಸುಲ್ತಾನ್ ಬಜಾರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಸಂದರ್ಶನದ ವಿಡಿಯೋದಲ್ಲಿ ಏನಿದೆ, ಸಾಯಿ ಪಲ್ಲವಿ ಏನು ಹೇಳಿದ್ದಾರೆ ಅಂತ ನೋಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಯೂಟ್ಯೂಬ್‌ ಚಾನೆಲ್‌ ಸಂದರ್ಶನದಲ್ಲಿ ಮಾತನಾಡಿದ ಸಾಯಿ ಪಲ್ಲವಿ, ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ರಿಲೀಸ್ ಆದಾಗ ಕಾಶ್ಮೀರಿ ಪಂಡಿತರನ್ನು ಕೊಂದರು, ಹತ್ಯೆ ಮಾಡಿದರು. ಅದೇ ರೀತಿ ಹಸುವನ್ನು ವಾಹನದಲ್ಲಿ ಕರೆದುಕೊಂಡು ಹೋಗುತ್ತಿದ್ದ ಮುಸ್ಲಿಮರ ಮೇಲೆ ಹಲ್ಲೆ ಮಾಡಲಾಯಿತು, ಜೈಶ್ರೀರಾಮ್​ ಎನ್ನುತ್ತ ಹಲ್ಲೆ ನಡೆಸಿದರು. ಇದು ಎರಡೂ ಒಂದೇ ಎಂದು ನನ್ನ ಭಾವನೆ. ಅದಕ್ಕೂ ಇದಕ್ಕೂ ಏನು ವ್ಯತ್ಯಾಸವಿದೆ? ಹೆಚ್ಚಿನ ಸಂಖ್ಯೆಯ ಜನರು ಸಣ್ಣ ಗುಂಪಿನ ಮೇಲೆ ದಬ್ಬಾಳಿಕೆ ಮಾಡುವುದು ತಪ್ಪು. ಇಬ್ಬರು ಸಮಾನರ ನಡುವೆ ಯುದ್ಧ ನಡೆಯಬೇಕು ಎಂದಿದ್ದರು.
ಗೋಹತ್ಯೆ ಮಾಡುವವರನ್ನು ಸಾಯಿ ಪಲ್ಲವಿ ಸಮರ್ಥಿಸಿಕೊಳ್ಳುತ್ತಿರುವಂತೆ ಕಾಣುತ್ತಿದೆ. ಕಾಶ್ಮೀರಿ ಪಂಡಿತರಿಗೂ, ಗೋವುಗಳನ್ನು ಕಾನೂನುಬಾಹಿರವಾಗಿ ಸಾಗಾಟ ಮಾಡಿ ಅವುಗಳನ್ನು ಹತ್ಯೆ ಮಾಡುತ್ತಿರುವವರ ನಡುವಿನ ವ್ಯತ್ಯಾಸ ನಟಿಯೊಬ್ಬಳಿಗೆ ತಿಳಿಯದೇ ಇರುವುದು ವಿಷಾದಕರ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಈಕೆಯ ವಿರುದ್ಧ ಎಫ್​ಐಆರ್​ ಕೂಡ ದಾಖಲಾಗಿದೆ.
ಹುಡುಗಿ ಬೇಕಾ, ಗಡ್ಡ ಬೇಕಾ… ನಿರ್ಧಾರ ನಿಮ್ಮದು! ಸಿನಿ ಸ್ಟಾರ್​ಗಳಂತೆ ಕಾಣಬಯಸುವವರಿಗೆ ಫುಲ್​ ಶಾಕ್​

Sign in to your account
Please enter an answer in digits:eleven + twenty =
Remember me
