ಪುಣೆ:ಕಚೇರಿಯ ಕೆಲಸದ ನಿಮಿತ್ತ ಬೇರೆ ಊರಿಗೆ ಹೋಗಬೇಕಿದೆ ಎಂದು ಪತಿ ಪದೇ ಪದೇ ಹೇಳುತ್ತಿದ್ದಾಗ ಈ ಪತ್ನಿ ಮೊದಲಿಗೆ ಗಂಡ ತುಂಬಾ ಕಷ್ಟಪಟ್ಟು ಕೆಲಸ ಮಾಡುತ್ತಿದ್ದಾನೆ ಎಂದೇ ಅಂದುಕೊಂಡಿದ್ದಳು. ಆದರೆ ಪತಿಯ ಮುಖದಲ್ಲಿ ಮಾತ್ರ ಸ್ವಲ್ಪವೂ ಬೇಸರವಿರುತ್ತಿರಲಿಲ್ಲ. ಆಫೀಸ್‌ ಕೆಲಸ ಎಂದಾಗಲೆಲ್ಲಾ ಆತ ಸದಾ ಖುಷಿಯಲ್ಲಿಯೇ ಇರುತ್ತಿದ್ದ, ಸಾಲದು ಎಂಬುದಕ್ಕೆ ಟೂರ್‌ ಮುಗಿಸಿ ಬಂದಾಗಲೂ ಅದೇನೋ ಸಂತಸ.
ಮೊದಮೊದಲು ಇದನ್ನು ಪತ್ನಿ ಅಷ್ಟು ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದರೆ ಬರುಬರುತ್ತಾ ಗಂಡನ ನಡವಳಿಕೆಯಲ್ಲಿ ಸಂದೇಹ ಉಂಟಾಯಿತು. ಅಷ್ಟೇ… ಇದೀಗ ಪತಿ ಕಂಬಿ ಎಣಿಸುವಂತಾಗಿದೆ!
ಈ ಘಟನೆ ನಡೆದಿರುವುದು ಪುಣೆಯಲ್ಲಿ. ಗುಜರಾತ್ ಮೂಲದ ಉದ್ಯಮಿ ಹಾಗೂ ಪ್ರತಿಷ್ಠಿತ ಕಂಪೆನಿಯೊಂದರಲ್ಲಿ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿರುವ ಪತ್ನಿಯ ಘಟನೆ ಇದು.
ಪತಿಯ ಬಗ್ಗೆ ಸಂದೇಹ ಶುರುವಾಗುತ್ತಲೇ ಪತ್ನಿ ಆತನ ಕಾರಿಗೆ ಅವನ ಅರಿವಿಗೆ ಬರದಂತೆ ಜಿಪಿಎಸ್ ಅಳವಡಿಸಿದ್ದಾಳೆ. ಪತ್ನಿಗೆ ಸುಳ್ಳು ಹೇಳಿ ಹೋಟೆಲ್‌ಗಳಲ್ಲಿ ಉಳಿದುಕೊಳ್ಳುವುದು ಪತ್ನಿಗೆ ತಿಳಿಯಿತು.
ಕಳೆದ ವಾರ ಗಂಡ ಬೆಂಗಳೂರಿಗೆ ಹೋಗುತ್ತೇನೆ ಎಂದಿದ್ದ. ಪತ್ನಿಗೆ ಇನ್ನಾವುದೇ ಸಂದೇಹ ಇರಲಿಲ್ಲ. ಮಾಮೂಲಿನಂತೆ ಜಿಪಿಎಸ್‌ ಅಳವಡಿಸಿದ್ದಳು. ಗಂಡ ಹೋಗಿದ್ದ ಪುಣೆಗೆ. ತಾನು ಏನು ಮಾಡಬೇಕು ಎಂದು ಅರಿತಿದ್ದ ಪತ್ನಿ ಕೂಡಲೇ ಗಂಡನ ವಿರುದ್ಧ ಪೊಲೀಸರಲ್ಲಿ ದೂರು ದಾಖಲಿಸಿದಳು. ಕಾರ್ಯಪ್ರವೃತ್ತರಾದ ಪೊಲೀಸರು ಹೋಟೆಲ್‌ ಮೇಲೆ ದಾಳಿ ಮಾಡಿದ್ದಾರೆ.
ಅಲ್ಲಿ ಕೌಂಟರ್‌ನಲ್ಲಿ ವಿಚಾರಿಸಿದಾಗ ವಿಳಾಸಕ್ಕೆಂದು ಕೊಟ್ಟಿದ್ದ ಆಧಾರ್ ಕಾರ್ಡ್‌ ನೋಡಿದಾಗ ಪೊಲೀಸರೇ ಶಾಕ್‌ ಆದರು. ಏಕೆಂದರೆ ತನ್ನ ಆಧಾರ್‌ ಕಾರ್ಡ್‌ ಜತೆ ತನ್ನ ಜತೆಗಿರುವ ಯುವತಿಯ ಪರಿಚಯ ಹೇಳುವ ಆಧಾರ್‌ ಕಾರ್ಡ್‌ ಕೂಡ ಕೊಟ್ಟಿದ್ದ. ಆದರೆ ಅಸಲಿಗೆ ಅದು ಆ ಯುವತಿಯ ಆಧಾರ್ ಕಾರ್ಡ್‌ ಆಗಿರಲಿಲ್ಲ. ಬದಲಿಗೆ ಪತ್ನಿಯ ಆಧಾರ್‌ ಕಾರ್ಡ್ ನೀಡಿ ತನ್ನ ಜತೆಗೆ ಬಂದವಳು ಪತ್ನಿ ಎಂದು ಹೇಳಿದ್ದ. ನಂತರ ತನಿಖೆ ಮಾಡಿದಾಗ ಎಲ್ಲಾ ಹೋಟೆಲ್‌ಗಳಲ್ಲಿಯೂ ಈತ ಇದೇ ರೀತಿ ಮಾಡುತ್ತಿದ್ದುದು ಕಂಡುಬಂತು.
ಸದ್ಯ ಪತಿ ಹಾಗೂ ಆ ಲವರ್‌ ವಿರುದ್ಧ ಕೇಸ್‌ ದಾಖಲಾಗಿದೆ. ಸಿಸಿಟಿವಿ ಫುಟೇಜ್ ಸೇರಿದಂತೆ ಕೆಲವು ಸಾಕ್ಷ್ಯಾಧಾರಗಳನ್ನು ಪೊಲೀಸರು ಸಂಗ್ರಹಿಸಿದ್ದು, ಪತ್ನಿಯ ಆಧಾರ್‌ ಕಾರ್ಡ್‌ ದುರ್ಬಳಕೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ. ಬಹಳ ಬುದ್ಧಿ ಉಪಯೋಗಿಸಿದ ಪತಿರಾಯ ಈಗ ಲವರ್‌ ಜತೆ ಕಂಬಿ ಎಣಿಸುವಂತಾಗಿದೆ.
ಉಪನ್ಯಾಸಕನ ಹುದ್ದೆ ಕೊಡಿಸ್ತೇನೆಂದು ಯುವಕನ ಬಟ್ಟೆ ಬಿಚ್ಚಿ ಯುವತಿ ಜತೆ ಮಲಗಿಸಿದರು! ಶಿರಸಿಯಲ್ಲೊಂದು ಭಯಾನಕ ಕೃತ್ಯ

ಗಂಡ ಸ್ಮಾರ್ಟ್‌ ಇದ್ದಾನೆ, 2 ವರ್ಷಕ್ಕೆ ಇಬ್ಬರು ಮಕ್ಕಳಾಗಿವೆ… ಖರೀದಿಗೆ ಸಂಪರ್ಕಿಸಿ… ಪತಿಯನ್ನು ಹರಾಜಿಗಿಟ್ಟ ಪತ್ನಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eighteen + two =
Remember me
