ಪುಣೆ:ತಮ್ಮ ಮನೆಯ ಗಿಳಿಯೊಂದು ಕಾಣೆಯಾಗಿದ್ದಕ್ಕೆ ಅದನ್ನು ಹುಡುಕಿ ಕೊಟ್ಟವರಿಗೆ ಭಾರಿ ಮೊತ್ತದ ನಗದು ಬಹುಮಾನ ನೀಡಿದ್ದ ಘಟನೆ ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದಿತ್ತು. ಆದರೆ ಇಲ್ಲೊಬ್ಬ ಗಿಳಿ ಮಾಲೀಕನಿಗೆ ತಾನು ಸಾಕಿರುವ ಗಿಳಿಯೇ ತಲೆನೋವಾಗಿ ಪರಿಣಮಿಸಿದೆ. ಏಕೆಂದರೆ ಅದು ಬರೀ ಶಿಳ್ಳೆ ಹೊಡೆಯುತ್ತಿದೆ.
ಹಾಗೆಂದು ತನ್ನ ಗಿಳಿ ಶಿಳ್ಳೆ ಹೊಡೆದರೆ ಮಾಲೀಕನಿಗೆ ಏನೂ ತೊಂದರೆಯಿಲ್ಲ, ತೊದರೆಯಾಗುತ್ತಿರುವುದು ಅಕ್ಕಪಕ್ಕದ ನಿವಾಸಿಗಳಿಗೆ ಅಂತೆ. ಪುಣೆಯ ಶಿವಾಜಿನಗರದ ತುಳಸಿ ಮಾರುಕಟ್ಟೆ ಬಳಿಯ ಮಹಾತ್ಮಗಾಂಧಿ ಕಾಲೋನಿಯಲ್ಲಿ ವಾಸಿಸುತ್ತಿರುವ ಅಕ್ಬರ್ ಅಮ್ಜದ್ ಖಾನ್ ಎನ್ನುವವರು ಗಿಳಿ ಸಾಕಿದ್ದು, ಇದೀಗ ಅವರ ವಿರುದ್ಧ ದೂರು ದಾಖಲಾಗಿದೆ.
‘ಗಿಳಿ ಶಿಳ್ಳೆ ಹೊಡೆದು ತೊಂದರೆ ನೀಡುತ್ತಿದೆ ಎಂದು ನೆರೆಮನೆಯ 72 ವಯಸ್ಸಿನ ಸುರೇಶ ಅಂಕುಶ ಶಿಂಧೆ ಎಂಬುವವರು ದೂರು ದಾಖಲಿಸಿದ್ದಾರೆ. ನಿಮ್ಮ ಗಿಣಿ ನಮಗೆ ತೊಂದರೆ ಕೊಡುತ್ತಿದೆ, ಅದನ್ನು ಬೇರೆಡೆ ಇಡಿ ಎಂದು ಮಾಲೀಕನಿಗೆ ಹೇಳಿದರೂ ಅದನ್ನು ಆತ ಕಿವಿ ಮೇಲೆ ಹಾಕಿಕೊಳ್ಳುತ್ತಿಲ್ಲ. ಅದು ಸಿಳ್ಳೆ ಹೊಡೆಯುತ್ತಿರುವುದಕ್ಕೆ ನನಗೆ ತುಂಬಾ ಹಿಂಸೆ ಆಗುತ್ತಿದೆ ಎಂದಿದ್ದಾರೆ ಸುರೇಶ್​. ಈ ಬಗ್ಗೆ ಕೇಳಿದ್ದರೆ ಆತನನ್ನು ಕೇಳಿದರೆ, ನನ್ನನ್ನೇ ನಿಂದಿಸಿ ಕೊಲೆ ಬೆದರಿಕೆ ಹಾಕಿದ್ದಾನೆ ಎಂದಿದ್ದಾರೆ.
ಸದ್ಯ ಪೊಲೀಸರು ಅಕ್ಬರ್ ಅಮ್ಜದ್ ಖಾನ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. (ಏಜೆನ್ಸೀಸ್​)
ಜ್ಞಾನವಾಪಿ ಮಸೀದಿಯತ್ತ ಹೊರಟ ನೇತಾಜಿ ಮರಿ ಮೊಮ್ಮಗಳ ಬಂಧನ! ಶ್ರಾವಣ ಸೋಮವಾರಕ್ಕೆ ಸಿಗಲಿಲ್ಲ ಶಿವನ ಪೂಜೆ
ಹಂಪಿಯ ಪಾರಂಪರಿಕ ತಾಣಕ್ಕೂ ಎದುರಾಯ್ತು ಜಲಕಂಟಕ! ಮುಳುಗಿಹೋದವು ಐತಿಹಾಸಿಕ ಸ್ಮಾರಕಗಳು
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 3 =
Remember me
