ಮುಂಬೈ:ಚರಂಡಿಯೊಳಕ್ಕೆ ಬಟ್ಟೆಯಲ್ಲಿ ಸುತ್ತಿ ಎಸೆದು ಹೋಗಿದ್ದ ನವಜಾತ ಶಿಶುವೊಂದನ್ನು ಬೆಕ್ಕುಗಳು ಕಾಪಾಡಿದ ಕುತೂಹಲದ ಘಟನೆ ಮುಂಬೈನ ಪಂತ್​ನಗರದಲ್ಲಿ ನಡೆದಿದೆ.
ಆಗ ತಾನೆ ಹುಟ್ಟಿದ ಮಗುವೊಂದನ್ನು ಬಟ್ಟೆಯಲ್ಲಿ ಸುತ್ತಿ ಚರಂಡಿಯಲ್ಲಿ ಎಸೆಯಲಾಗಿತ್ತು. ಇದು ಯಾರ ಗಮನಕ್ಕೆ ಬರಲೂ ಸಾಧ್ಯವಿಲ್ಲವಾಗಿತ್ತು. ಅದು ಕಾಣಿಸದ ಹಿನ್ನೆಲೆಯಲ್ಲಿ ಯಾರೂ ಅದನ್ನು ಗಮನಿಸಿಯೂ ಇರಲಿಲ್ಲ. ಆದರೆ ಇದೇ ವೇಳೆ ಬೀದಿಯಲ್ಲಿ ಹೋಗುತ್ತಿದ್ದ ಕೆಲವು ಬೆಕ್ಕುಗಳು ಚರಂಡಿಯ ಬಳಿ ಬಂದು ವಿಚಿತ್ರ ರೀತಿಯಲ್ಲಿ ಕೂಗಲು ಶುರು ಮಾಡಿವೆ. ಮೊದಮೊದಲಿಗೆ ಇದೇನು ಎಂದು ಗೊತ್ತಾಗದೇ ಜನ ತಮ್ಮ ಪಾಡಿಗೆ ತಾವು ಹೋಗಿದ್ದಾರೆ.
ಆದರೆ ಕೆಲವು ಬೆಕ್ಕುಗಳು ವಿಚಿತ್ರ ಶಬ್ದವನ್ನು ಮುಂದುವರೆಸಿ ಜನರ ಗಮನವನ್ನು ಸೆಳೆಯಲು ಪ್ರಯತ್ನಿಸಿವೆ. ಇದನ್ನು ನೋಡಿದ ಕೆಲವರು ಅನುಮಾನಗೊಂಡು ಚರಂಡಿಯತ್ತ ಬಗ್ಗಿ ನೋಡಿದ್ದಾರೆ. ಆಗ ವಸ್ತ್ರದಲ್ಲಿ ಸುತ್ತಿಟ್ಟ ಒಂದು ವಸ್ತು ಕಂಡಿದೆ. ಮೊದಲಿಗೆ ಅದು ಮಗು ಎಂದು ಗೊತ್ತಾಗಲಿಲ್ಲ. ನಂತರ ಹೋಗಿ ನೋಡಿದಾಗ ಮಗು ಎನ್ನುವುದು ತಿಳಿದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕೂಡಲೇ ಪೊಲೀಸರು ಸ್ಥಳಕ್ಕೆ ಬಂದು ಮಗುವಿನ ರಕ್ಷಣೆ ಮಾಡಿದ್ದಾರೆ. ಈ ಕುರಿತು ಮುಂಬೈ ಪೊಲೀಸರು ಟ್ವೀಟ್​ ಮಾಡಿದ್ದಾರೆ. ಮಗುವನ್ನು ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವರ್ಗಾವಣೆಗೆ ಲಂಚ ಕೊಡ್ಬೇಕಾ? ಸಿಎಂ ಪ್ರಶ್ನೆಗೆ ಶಿಕ್ಷಕರ ಉತ್ತರ ಕೇಳಿ ಪೇಚಿಗೆ ಸಿಲುಕಿ, ತಲೆ ತಗ್ಗಿಸಿದ ಶಿಕ್ಷಣ ಸಚಿವ!

VIDEO: ಟಿಪ್ಪು ಸುಲ್ತಾನನ ಸಿಂಹಾಸನದ ಕಳಸ ಹರಾಜಿಗೆ- ಇದರ ಬೆಲೆ 15 ಕೋಟಿ ರೂ! ಅಪೂರ್ವ ವಿಡಿಯೋ ಇಲ್ಲಿದೆ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − three =
Remember me
