ಲಖನೌ:50ಕ್ಕೂ ಅಧಿಕ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯವೆಸಗಿ ಅವರ ವಿಡಿಯೋ ಮಾಡಿ ಹಾಗೂ ಫೋಟೋ ತೆಗೆದು ಅದನ್ನು ಡಾರ್ಕ್​ವೆಬ್​ ಮೂಲಕ ಮಾರಾಟ ಮಾಡುತ್ತಿದ್ದ ನೀರಾವರಿ ಇಲಾಖೆಯ ಇಂಜಿನಿಯರ್​ ಒಬ್ಬನ ಪತ್ನಿಯೀಗ ಸಿಬಿಐ ಬಲೆಗೆ ಬಿದ್ದಿದ್ದಾಳೆ!
ಕಳೆದ 10 ವರ್ಷಗಳಿಂದ ಈಕೆ ಇಂಥದ್ದೊಂದು ಕೃತ್ಯದಲ್ಲಿ ತೊಡಗಿರುವುದು ಬೆಳಕಿಗೆ ಬಂದಿದೆ. ಚಿತ್ರಕೂಟ, ಹಮಿರ್‌ಪುರ್ ಹಾಗೂ ಬಾಂದಾ ಜಿಲ್ಲೆಗಳಲ್ಲಿ 5 ವರ್ಷದಿಂದ 16 ವರ್ಷ ವಯಸ್ಸಿನ ಸುಮಾರು 50 ಮಕ್ಕಳನ್ನು ಲೈಂಗಿಕ ಶೋಷಣೆಗೆ ಒಳಪಡಿಸಿರುವುದು ಕಳೆದ ವರ್ಷ ಬೆಳಕಿಗೆ ಬಂದಿತ್ತು. ಬಡ ಮಕ್ಕಳನ್ನು ಆಮಿಷ ಒಡ್ಡಿ ಕರೆದುಕೊಂಡು ಬಂದು ಅವರನ್ನು ಲೈಂಗಿಕವಾಗಿ ಬಳಸಿಕೊಂಡು ನಂತರ ಅದರ ಫೋಟೋ ತೆಗೆದು ಇಲ್ಲವೇ ವಿಡಿಯೋ ಮಾಡಿ ಪೋರ್ನ್​ ವೆಬ್​ಸೈಟ್​ಗೆ ಮಾರಾಟ ಮಾಡಲಾಗುತ್ತಿತ್ತು.
ಕೆಲವು ಪೋರ್ನ್​ ವೆಬ್​ಸೈಟ್​ಗಳ ಮೇಲೆ ಸಿಬಿಐ ಕಣ್ಣು ಇಟ್ಟಿದ್ದು, ಕಾರ್ಯಾಚರಣೆ ನಡೆಸುತ್ತಿದೆ. ಅನೇಕ ವಿಡಿಯೋಗಳಲ್ಲಿ ಸುಮಾರು 50 ಮಕ್ಕಳು ಕಾಣಿಸಿಕೊಂಡಿರುವುದು ತನಿಖಾಧಿಕಾರಿಗಳಿಗೆ ಕಾಣಿಸಿದೆ. ಇದರ ಬೆನ್ನಟ್ಟಿ ಹೋಗಿದ್ದ ಅವರಿಗೆ ರಾಮ್​ಭವನ್​ ಎಂಬ ಇಂಜಿನಿಯರ್​ ಒಬ್ಬ ಇದರ ಹಿಂದೆ ಇರುವುದು ತಿಳಿದಿತ್ತು.
ಕಳೆದ ತಿಂಗಳು ಇಂಜಿನಿಯರ್​ ಅನ್ನು ಬಂಧಿಸಲಾಗಿತ್ತು. ಈಗ ಈ ಪ್ರಕರಣದ ಇನ್ನಷ್ಟು ಆಳಕ್ಕೆ ಹೋದಾಗ ಈ ಇಂಜಿನಿಯರ್​ ಪತ್ನಿಯ ಕುತಂತ್ರ ಬಯಲಾಗಿದೆ.
ಮಕ್ಕಳನ್ನು ಈ ಕೃತ್ಯಕ್ಕೆ ಬಳಸಿಕೊಂಡ ನಂತರ ಅವರಿಗೆ ಹಣ, ಉಡುಗೊರೆ, ಮೊಬೈಲ್ ಫೋನ್​ ನೀಡಿ ಯಾರಿಗೂ ವಿಷಯ ತಿಳಿಸದಂತೆ ಹೇಳಲಾಗುತ್ತಿತ್ತು.
ಚಿತ್ರಕೂಟ ನಿವಾಸಿಯಾಗಿರುವ ಈ ಇಂಜಿನಿಯರ್‌ ಹಾಗೂ ಆತನ ಪತ್ನಿ ಸದ್ಯ ಪೊಲೀಸ್​ ಅತಿಥಿ. ಈ ದಂಪತಿಯ ಮನೆಯಲ್ಲಿ ಪರಿಶೀಲನೆ ನಡೆಸಿದಾಗ, ಸುಮಾರು 8 ಲಕ್ಷ ಹಣ, ಮೊಬೈಲ್‌ ಫೋನ್‌ಗಳು, ಲ್ಯಾಪ್‌ಟಾಪ್‌ಗಳು, ವೆಬ್‌–ಕ್ಯಾಮೆರಾ, ಪೆನ್‌ ಡ್ರೈವ್‌, ಮೆಮೊರಿ ಕಾರ್ಡ್‌ ಸೇರಿದಂತೆ ಡೇಟಾ ಸಂಗ್ರಹಿಸುವ ಹಲವು ಸಾಧನಗಳು ಹಾಗೂ ಲೈಂಗಿಕ ಆಟಿಗಳು ದೊರೆತಿದ್ದು ಅವುಗಳನ್ನು ಸಿಬಿಐ ವಶಪಡಿಸಿಕೊಂಡಿದೆ.ಈಗಾಗಲೇ ಇಂಜಿನಿಯರ್​ ನ್ಯಾಯಾಂಗ ವಶದಲ್ಲಿದ್ದು, ಇದೀಗ ಪತ್ನಿಯನ್ನೂ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.
ಈ ಧರ್ಮಗುರುವಿಗೆ 130 ಪತ್ನಿಯರು, 203 ಮಕ್ಕಳು: ಇವರ ಕುತೂಹಲದ ಸ್ಟೋರಿ ಇಲ್ಲಿದೆ…

ಎಸ್‍ಬಿಐಗೆ ಬೇಕಾಗಿದ್ದಾರೆ 100 ಯುವ ಮ್ಯಾನೇಜರ್ಸ್

ತಾತನ ಆಸ್ತಿಯಲ್ಲಿ ಮೊಮ್ಮಕ್ಕಳಿಗೆ ಹಕ್ಕು ಇಲ್ಲವೇ? ಕಾನೂನು ಏನು ಹೇಳುತ್ತದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:17 − 1 =
Remember me
