ನವದೆಹಲಿ:ಸೆಂಟ್ರಲ್ ಬೋರ್ಡ್ ಆಫ್‌ ಸೆಕೆಂಡರಿ ಎಜುಕೇಷೆನ್​ನ (ಸಿಬಿಎಸ್​ಇ) 12ನೇ ತರಗತಿ ಫಲಿತಾಂಶದ ಬೆನ್ನಲ್ಲೇ 10ನೇ ತರಗತಿ ಫಲಿತಾಂಶವೂ ಪ್ರಕಟಗೊಂಡಿದೆ. ಮಾಮೂಲಿನಂತೆ ಇವೆರಡು ತರಗತಿಗಳಲ್ಲಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
ಟರ್ಮ್‌ -2 ಪರೀಕ್ಷೆಯನ್ನು ಕಳೆದ ಏಪ್ರಿಲ್ 26 ರಿಂದ ಮೇ 24 ವರೆಗೆ ನಡೆಸಲಾಗಿತ್ತು. ಸುಮಾರು 21 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಈ ಬಾರಿ ಶೇ 94.40. ಫಲಿತಾಂಶ ದಾಖಲಾಗಿದ್ದು, ಕಳೆದ ಬಾರಿಗಿಂತ ಈ ಸಲ ಫಲಿತಾಂಶದಲ್ಲಿ ಪ್ರಗತಿ ಕಂಡಿದೆ.
ಫಲಿತಾಂಶವನ್ನು cbse.gov.in; cbseresults.nic.in; parikshasangam.cbse.gov.in ಅಥವಾ results.cbse.nic.in ಇಲ್ಲಿಂದ ಪಡೆಯಬಹುದು.
http://cbse.gov.inಅಥವಾhttp://cbresults.nic.inಅಧಿಕೃತ ವೆಬ್​ಸೈಟ್​ಗಳಾಗಿವೆ. ಇವುಗಳನ್ನು ಓಪನ್​ ಮಾಡಿದ ಬಳಿಕ Result ಎಂಬ ಟ್ಯಾಬ್‌ ಮೇಲೆ ಕ್ಲಿಕ್ ಮಾಡಿದಾಗ ಇನ್ನೊಂದು ವೆಬ್‌ಪುಟ ತೆರೆದುಕೊಳ್ಳುತ್ತದೆ. ಅಲ್ಲಿ ಸಿಬಿಎಸ್‌ 10ನೇ ತರಗತಿಗಳ ಫಲಿತಾಂಶ ಲಿಂಕ್‌ ಮೇಲೆ ಕ್ಲಿಕ್‌ ಮಾಡಬಹುದು. ನೋಂದಣಿ ಸಂಖ್ಯೆ, ಶಾಲೆಯ ಸಂಖ್ಯೆ, ಜನ್ಮ ದಿನಾಂಕ, ಪ್ರವೇಶ ಪತ್ರದ ಐಡಿ ನಂಬರ್‌ನ್ನ ನಮೂದಿಸಿದರೆ ನಿಮ್ಮ ರಿಸಲ್ಟ್​ ಸಿಗುತ್ತದೆ.
ವಿದ್ಯಾರ್ಥಿಗಳು ತಮ್ಮ ಡಿಜಿಟಲ್ ಮಾರ್ಕ್ ಶೀಟ್ ಮತ್ತು ಪ್ರಮಾಣಪತ್ರವನ್ನು ಡೌನ್‌ಲೋಡ್ ಮಾಡಬೇಕಾದರೆ ತಮ್ಮ ಶಾಲೆಗಳನ್ನು ಸಂಪರ್ಕಿಸಬೇಕು. ಅಲ್ಲಿಂದ ಮತ್ತು ಡಿಜಿಲಾಕರ್ ಪಿನ್ ಕೇಳಬೇಕು. ಈ ಪಿನ್ ಸಂಖ್ಯೆಯನ್ನು ಭದ್ರತಾ ಕ್ರಮವಾಗಿ CBSE ಪರಿಚಯಿಸಿದೆ.
ಎಸ್​ಎಂಎಸ್​ ಮೂಲಕ ಪಡೆಯಲು, ವಿದ್ಯಾರ್ಥಿಗಳು ತಮ್ಮ ಫೋನ್‌ನ ಸಂದೇಶ ಬಾಕ್ಸ್‌ಗೆ ಹೋಗಿ ತಮ್ಮ CBSE ರೋಲ್ ನಂಬರ್ ಟೈಪ್ ಮಾಡಬೇಕು. ಈಗ ಈ ಸಂದೇಶವನ್ನು 7738299899 ಗೆ ಕಳುಹಿಸಬೇಕು. ಕೆಲವೇ ಸಮಯದಲ್ಲಿ ನಿಮ್ಮ ಫಲಿತಾಂಶವು SMS ಮೂಲಕ ಅದೇ ಸಂಖ್ಯೆಗೆ ಬರುತ್ತದೆ.(ಏಜೆನ್ಸೀಸ್​)
ಸಿಬಿಎಸ್​ಇ 12ನೇ ತರಗತಿ ಫಲಿತಾಂಶ ಪ್ರಕಟ: ಶೇ.92ರಷ್ಟು ವಿದ್ಯಾರ್ಥಿಗಳು ಪಾಸ್​- ರಿಸಲ್ಟ್​ ಹೀಗೆ ನೋಡಿ..

ಇ.ಡಿ. ತೆಕ್ಕೆಯಲ್ಲಿ ಅತ್ತೆ: ರಾಜಕೀಯಕ್ಕೆ ಅಳಿಯನ ಎಂಟ್ರಿ? ಸೋನಿಯಾ ಕುಟುಂಬದಿಂದ ಬಂತೊಂದು ಸುದ್ದಿ…

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:16 − 3 =
Remember me
