ಬೆಂಗಳೂರು:ಮಾಜಿ ಸಚಿವ ಜಾರಕಿಹೊಳಿಯವರ ಅಶ್ಲೀಲ ಸಿಡಿ ಪ್ರಕರಣವಾಗಿ 19 ದಿನ ಕಳೆದರೂ ಇದುವರೆಗೂ ಸಿಡಿಯಲ್ಲಿದ್ದ ಲೇಡಿಯಾಗಲೀ, ಈ ಪ್ರಕರಣದ ಪ್ರಮುಖ ಆರೋಪಿಗಳಾಗಿ ಪೊಲೀಸರಿಗೆ ಸಿಗದೇ ಚಳ್ಳೇಹಣ್ಣು ತಿನ್ನಿಸುತ್ತಾ ತಪ್ಪಿಸಿಕೊಳ್ಳುತ್ತಿದ್ದಾರೆ.
ಇದರಿಂದ ಎಸ್​ಐಟಿ ತಂಡಕ್ಕೆ ಮತ್ತೆ ಸಂಕಷ್ಟ ಶುರುವಾಗಿದೆ. ಇತ್ತ ಸಿಡಿಯಲ್ಲಿರುವ ಮಹಿಳೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಳ್ಳುತ್ತಿದ್ದರೆ, ಇತ್ತ ಆರೋಪಿಗಳು ರಾಜಸ್ಥಾನದಲ್ಲಿ ಇರುವುದು ಪತ್ತೆಯಾಗಿದೆ!
ಆರೋಪಿಗಳ ಅಕೌಂಟ್, ಕಾರ್ಡ್ಸ್, ಡಿಜಿಟಲ್ ವ್ಯಾಲೆಟ್ ಎಲ್ಲವನ್ನೂ ತನಿಖಾಧಿಗಳಿಗೆ ಇದಾಗಲೇ ಫ್ರೀಜ್ ಮಾಡಿದ್ದರು. ಆದ್ದರಿಂದ ಕೈಯಲ್ಲಿ ಇರುವ ದುಡ್ಡು ಖಾಲಿಯಾಗುತ್ತಿದ್ದಂತೆಯೇ ಹಣದ ವ್ಯವಹಾರ ನಡೆಸಲು ಆರೋಪಿಗಳಿಗೆ ಕಷ್ಟಸಾಧ್ಯವಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಅವರು ಸುಲಭದಲ್ಲಿ ಪೊಲೀಸರ ಕೈಗೆ ಬೀಳುವ ಸಾಧ್ಯತೆ ಇತ್ತು.
ಆದರೆ ಇದೀಗ ಆರೋಪಿಗಳು ರಾಜಸ್ಥಾನಕ್ಕೆ ಎಸ್ಕೇಪ್​ ಆಗಿದ್ದು, ಅವರಿಗೆ ಎಲ್ಲಾ ರೀತಿಯ ಹಣಕಾಸಿನ ನೆರವು ಸಿಗುವ ಸಾಧ್ಯತೆ ಇದೆ ಎಂಬ ಆರೋಪ ಕೇಳಿಬರುತ್ತಿದೆ. ಅಲ್ಲಿಯ ಸರ್ಕಾರ ಈ ಆರೋಪಿಗಳಿಗೆ ಎಲ್ಲ ರೀತಿಯಲ್ಲಿ ಸಹಾಯ ಮಾಡುವ ಸಾಧ್ಯತೆ ಇದೆ ಎಂಬ ಕಾರಣದಿಂದಾಗಿ ಪೊಲೀಸರಿಗೆ ಇದೀಗ ದೊಡ್ಡ ತಲೆನೋವಾಗಿಬಿಟ್ಟಿದೆ.
ಇದಕ್ಕೆ ಇಂಬುಕೊಡಲು ಎಂಬಂತೆ ರಾಜಸ್ಥಾನದ ಪೊಲೀಸರಿಂದ ತನಿಖಾಧಿಕಾರಿಗಳಿಗೆ ಸಪೋರ್ಟ್​ ಸಿಗುತ್ತಿಲ್ಲ. ಈ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಕರೆ ಮಾಡಿ ಮಾಹಿತಿ ರವಾನೆ ಮಾಡಲಾಗಿದ್ದು, ಸದ್ಯ ಅಲ್ಲಿನ ಹಿರಿಯ ಅಧಿಕಾರಿಗಳ ಜೊತೆ ಇಲ್ಲಿನ ಹಿರಿಯ ಅಧಿಕಾರಿಗಳ ಮಾತುಕತೆ ನಡೆಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ.ಈ ಹಿನ್ನೆಲೆಯಲ್ಲಿ, ಆರೋಪಿಗಳನ್ನು ಹಿಡಿಯಲು ಮತ್ತಷ್ಟು ಟೀಂ ಕಳಿಸಲು ಎಸ್ಐಟಿ ಚಿಂತನೆ ನಡೆಸಿದೆ.
ಸಿಡಿ ಕೇಸ್​ನ​ ಆರೋಪಿ ಸಹೋದರ ನಾಪತ್ತೆ: ಎಸ್​ಐಟಿಗೆ ಹೈಕೋರ್ಟ್​ ನೋಟಿಸ್​

ಸಿಡಿ ಪ್ರಕರಣ: ವಿಚಾರಣೆಗೆ ಹಾಜರಾದ ಜಾರಕಿಹೊಳಿಗೆ 50 ಪ್ರಶ್ನೆ ಎದುರಾಯ್ತು! ಏನೆಲ್ಲ ಉತ್ತರ ಕೊಟ್ರು ಗೊತ್ತಾ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:nine − seven =
Remember me
