ಚೆನ್ನೈ:ಕೆಲವರಿಗೆ ಸ್ವಾಭಿಮಾನ ಹಾಗೂ ಸ್ವಂತ ಕಾಲ ಮೇಲೆ ನಿಂತು ದುಡಿದು ತಿನ್ನುವ ಮನೋ ಇಚ್ಛೆ ಎಷ್ಟರಮಟ್ಟಿಗೆ ಇರುತ್ತದೆ ಎನ್ನುವುದು ಈ ಘಟನೆಯೇ ಸಾಕ್ಷಿ.
ತಮಿಳುನಾಡು ಬಿಜೆಪಿಯ ಅಧ್ಯಕ್ಷರಾಗಿ, ಈಗ ಕೇಂದ್ರದಲ್ಲಿ ಸಚಿವರಾಗಿರುವ ಎಲ್. ಮುರುಗನ್ ಅವರ ಅಪ್ಪ- ಅಮ್ಮನ ಉದಾಹರಣೆ ಇದು. ಮಗ ಕೇಂದ್ರ ಸಚಿವನಾದರೂ ತಾವು ಮಾತ್ರ ಕೃಷಿ ಕಾರ್ಮಿಕರಾಗಿ ದಿನಗೂಲಿ ನೌಕರರಾಗಿ ದುಡಿಯುತ್ತಿದ್ದಾರೆ ಇವರ ತಂದೆ-ತಾಯಿ. ಆ ಕೆಲಸವನ್ನು ತಾವು ಬಿಡುವುದಿಲ್ಲ ಎಂದಿದ್ದಾರೆ!
ಕೇಂದ್ರ ಮೀನುಗಾರಿಗೆ ಸಚಿವಾಲಯದಲ್ಲಿ ರಾಜ್ಯ ಖಾತೆ ಸಚಿವರಾಗಿರುವ ಎಲ್. ಮುರುಗನ್ ತಮಿಳುನಾಡಿನ ನಮಕ್ಕಲ್‌ನ ಹಳ್ಳಿಯವರು. ಇದೇ ಗ್ರಾಮದಲ್ಲಿ ಇವರ ಅಪ್ಪ-ಅಮ್ಮ ದಿನಗೂಲಿ ಕೃಷಿ ಕಾರ್ಮಿಕರಾಗಿ ದುಡಿಯುತ್ತಿರುತ್ತಿದ್ದಾರೆ. ಮಗನಿಗೆ ಸಕಲ ಸೌಲಭ್ಯ, ಐಷಾರಾಮಿ ಜೀವನ ಸಿಕ್ಕರೂ ತಾವು ಅದಕ್ಕೆ ಒಪ್ಪದೇ ತಮ್ಮ ದುಡಿಮೆಯಿಂದಲೇ ಜೀವನ ಸಾಗಿಸುವುದಾಗಿ ಹೇಳಿದ್ದಾರೆ.
59 ವರ್ಷದ ಅಮ್ಮ ಎಂದಿನಂತೆ ಹೊಲಕ್ಕೆ ಹೋಗಿ ಕಳೆ ಗಿಡಗಳನ್ನು ಕಿತ್ತು, ಸ್ವಚ್ಚಗೊಳಿಸಿ ಕೃಷಿ ಕೆಲಸ ಮಾಡುತ್ತಾರೆ. ಅವರ ಉಡುಗೆ ತೊಡುಗೆ ನೋಡಿದವರು ಯಾರೂ, ಅವರ ಮಗ ಕೇಂದ್ರ ಸಚಿವ ಎನ್ನಲಾರರು. ಕೆಂಪು ಸೀರೆ ಉಟ್ಟು ಅದರ ಮೇಲೆ ಹಳೆಯ ಬಿಳಿ ಶರಟು ಹಾಕಿಕೊಂಡು, ತಲೆಗೆ ಕೆಂಪು ಮುಂಡಾಸು ಸುತ್ತಿಕೊಂಡು ಹೊಲದ ಕಡೆ ನಡೆಯುವ ಎಲ್. ವರುದಮ್ಮಾಳ್ ಜತೆ ಅವರ ಪತಿ, 68 ವರ್ಷದ ಲೋಕನಾಥನ್ ಅವರು ಲುಂಗಿಯುಟ್ಟು ಗುದ್ದಲಿ ಹಿಡಿದು ಕೆಲಸಕ್ಕೆ ಹೋಗುತ್ತಾರೆ.

ನಮ್ಮ ಮಗ ಕೇಂದ್ರ ಸಚಿವನಾಗಿರುವುದಕ್ಕೆ ಖುಷಿಯಿದೆ. ಆದರೆ ಇದಕ್ಕಾಗಿ ಹಿಂದಿನಿಂದಲೂ ಮಾಡಿಕೊಂಡು ಬಂದ ಕೂಲಿ ಕೆಲಸವನ್ನೂ ಬಿಡುವುದಿಲ್ಲ. ನಮ್ಮ ದುಡಿಮೆಯೇ ನಮಗೆ ಮುಖ್ಯ ಎಂದಿದ್ದಾರೆ. ‘ನನ್ನ ಮಗ ಕೇಂದ್ರ ಮಂತ್ರಿಯಾದರೆ ನಾನೇನು ಮಾಡಲಿ? ಅವನ ಈ ಬೆಳವಣಿಗೆಯಲ್ಲಿ ನಮ್ಮ ಪಾತ್ರವೇನೂ ಇಲ್ಲ’ ಎಂದು ಎಲ್. ಮುರುಗನ್ ಅವರ ತಾಯಿ ವರುದಮ್ಮಾಳ್. ಕೇಂದ್ರದಲ್ಲಿ ಮೀನುಗಾರಿಕೆ ಖಾತೆ ರಾಜ್ಯ ಸಚಿವರಾಗಿ ಇತ್ತೀಚೆಗೆ ನೇಮಕವಾದ ತಮಿಳುನಾಡಿನ ಏಕೈಕ ಬಿಜೆಪಿ ಸಂಸದರಾಗಿದ್ದಾರೆ 44 ವರ್ಷದ ಎಲ್. ಮುರುಗನ್. ಇವರು ದಲಿತ ಸಮುದಾಯಕ್ಕೆ ಸೇರಿದವರು. ಮಗನಿಗೆ ಬಾಲ್ಯದಿಂದಲೂ ಓದಿನ ಹುಚ್ಚು. ಸರಕಾರಿ ಶಾಲೆಗಳಲ್ಲಿ ಓದಿ ಬಳಿಕ ಚೆನ್ನೈನ ಅಂಬೇಡ್ಕರ್ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸಿದರು. ಮುರುಗನ್ ಅವರ ಕಾಲೇಜು ಶಿಕ್ಷಣಕ್ಕಾಗಿ ಸ್ನೇಹಿತರು ಮತ್ತು ಭೂಮಾಲೀಕರಿಂದ ಸಾಲ ಪಡೆದಿದ್ದಾಗಿ ತಂದೆ ನೆನಪಿಸಿಕೊಳ್ಳುತ್ತಾರೆ.
ರಾತ್ರಿ ಓಡಾಡುವವರು ವೇಶ್ಯೆಯರು, ರೇಪ್​ಗೆ​ ಅರ್ಹರು ಎಂದು ಭೀಕರ ಕೊಲೆ ಸಮರ್ಥಿಸಿಕೊಂಡ ಪಾದ್ರಿ!
ಹೀಗೊಂದು ಭಯಾನಕ ಆದೇಶ: ಪಾಕ್​ಗೆ ರವಾನಿಸಲು ಹೆಣ್ಣುಮಕ್ಕಳ, ವಿಧವೆಯರ ಪಟ್ಟಿ ಮಾಡಲು ಸೂಚನೆ


ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:twenty − seven =
Remember me
